ಆರೋಗ್ಯ ಕಾಪಾಡುವುದೇ ಒಂದು ದೊಡ್ಡ ಭಾಗ್ಯವಾಗಿದೆ – ಡಾ. ಮಂಜುನಾಥ

Must Read

ಹಳ್ಳೂರ – ಆರೋಗ್ಯವನ್ನು ಕಾಪಾಡಿಕೊಳ್ಳುವುದು ಈಗಿನ ಕಾಲದಲ್ಲಿ ದೊಡ್ಡ ಬಾಗ್ಯವಾಗಿದೆ. ಒಳ್ಳೆಯ ಆಹಾರ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ರೋಗ ರುಜಿನಗಳು ಬಾರದಂತೆ ಎಚ್ಚರ ವಹಿಸಬೇಕು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ ಮಂಜುನಾಥ ಹಂಚಿನಾಳ ಹೇಳಿದರು.

ಅವರು ಹಳ್ಳೂರ ಶ್ರೀ ಮಹಾಲಕ್ಷ್ಮಿ ದೇವಾಲಯದಲ್ಲಿ ನಡೆದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕರ್ನಾಟಕ ರಾಜ್ಯ ಏಡ್ಸ್ ಪ್ರೀವೇನಶೆನ್ ಸೊಸೈಟಿ ನಿರೋಧಕ ಮತ್ತು ನಿಯಂತ್ರಣ ಘಟಕ ಬೆಳಗಾವಿ ಜಿಲ್ಲಾ, ತಾಲೂಕಾ ಆಡಳಿತ ಸಮುದಾಯ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯತ, ಪ್ರಾಥಮಿಕ ಆರೋಗ್ಯ ಕೇಂದ್ರ ಹಳ್ಳೂರ ಹಾಗೂ ಮಹಿಳಾ ಸಂಘ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಸಮಗ್ರ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು

ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಗಮನ ಹರಿಸಬೇಕು. ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸದಾಕಾಲ ಸಾರ್ವಜನಿಕರ ಸೇವೆ ಒದಗಿಸಲು ಸಿದ್ಧನಿದ್ದೇನೆ ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಈ ಸಮಯದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಬಸಪ್ಪ ಸಂತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುರಿಗೆಪ್ಪ ಮಾಲಗಾರ, ರಮೇಶ ಲೋಕನ್ನವರ, ಐಸಿಟಿಸಿ ಕೌನ್ಸಲರ್ ಲತಾ ನಾಯಿಕ, ಎನ್ ಡಿ ಸಿ ಕೌನ್ಸಲರ್ ಗೀತಾ ಡೋಣಿ,  ಡಾ ವೈಭವ, ಮಹಾಂತೇಶ ನೀಲಕಂಠ ಸಿಬ್ಬಂದಿಗಳಾದ ಗೋಪಾಲಪಾಟಿಲ, ರಾಜಶೇಖರ ಅಂಬಿ, ರಾಜು, ಶಿವಾನಂದ,  ಸುರೇಶ, ಆಶಾ ಕಾರ್ಯಕರ್ತೆಯರಾದ ವಿದ್ಯಾ ರಡರಟ್ಟಿ,  ಶೋಭಾ ತೆರದಾಳ, ಲಕ್ಷ್ಮೀ ಲೋಕನ್ನವರ, ಸುಜಾತಾ ಕುಲಿಗೋಡ, ಯಮನವ್ವ ಶಹಾಪೂರ, ಶಾಂತಾ ನೇಸುರ, ಪ್ರೀತಿ ಮಾಲಗಾರ, ಗೀತಾ ಹರಿಜನ, ಸಂಗೀತಾ ಬಡಿಗೇರ, ಯಮನವ್ವ ಶಹಾಪೂರ ಸೇರಿದಂತೆ ಅನೇಕರಿದ್ದರು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group