ಕನ್ನಡ ನುಡಿ ಬಳಕೆ ಸ್ವಾಭಿಮಾನದ ಪ್ರತೀಕ  -ಡಾ ಕೆ ಪಿ ಪುತ್ತೂರಾಯ ಅಭಿಮತ

Must Read

ವಿಕಾಸ’ ದಿಂದ ಸಾಧಕೋತ್ತಮರಿಗೆ ಸುವರ್ಣ ಸಂಭ್ರಮ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

 

ಬೆಂಗಳೂರು ಡಿವಿಜಿ ರಸ್ತೆಯ ಅಬಲಾಶ್ರಮದಲ್ಲಿ ಸಮಾನ ಮನಸ್ಕ ಮಾಧ್ಯಮ ಮಿತ್ರರ ವೇದಿಕೆ ‘ವಿಕಾಸ’ ವತಿಯಿಂದ ಸುವರ್ಣ ಸಂಭ್ರಮ ರಾಜ್ಯೋತ್ಸವ ೨೦೨೪ ಅನ್ನು ಆಯೋಜಿಸಲಾಗಿತ್ತು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಖ್ಯಾತ ವಾಗ್ಮಿ, ರಾಜೀವ್ ಗಾಂಧಿ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯದ ನಿವೃತ್ತ ನಿರ್ದೇಶಕ ಡಾ. ಕೆ ಪಿ ಪುತ್ತೂರಾಯರು ಸರ್ವ ಜನಾಂಗದ ಶಾಂತಿಯ ತೋಟವಾದ ಕರ್ನಾಟಕದ ಹಿರಿಮೆಗರಿಮೆಗಳ ಬಗ್ಗೆ ತಿಳಿಸುತ್ತಾ ಸಿರಿಗನ್ನಡ ನುಡಿಯ ಬಳಕೆಯನ್ನು ದಿನನಿತ್ಯದ ಚಟುವಟಿಕೆಗಳಲ್ಲಿ ಉಪಯೋಗಿಸುವ ಮೂಲಕ ಜೀವಂತವಾಗಿಡಬಹುದು ಎಂದು ಅಭಿಪ್ರಾಯ ಪಟ್ಟರು .

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ, ವಿಕಾಸದ ಗೌರವಾಧ್ಯಕ್ಷ ಡಾ ಎಚ್ ಎಸ್ ಸುಧೀಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಅಬಲಾಶ್ರಮದ ಅಧ್ಯಕ್ಷೆ ಹಿರಿಯ ವೈದ್ಯೆ ಡಾ. ವಿಜಯಲಕ್ಷ್ಮಿ ದೇಶಮಾನೆ, ಜೆಕ್ ಗಣರಾಜ್ಯದ ಗೌರವ ರಾಯಭಾರಿ ಪುಷ್ಪಕ್ ಪ್ರಕಾಶ್, ನಳಂದ ಶಿಕ್ಷಣ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಎಮ್ ಆರ್ ಶಿವಶಂಕರ್ ಅತಿಥಿಗಳಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಪತ್ರಿಕಾರಂಗದಲ್ಲಿ ಅವಿರತ ಸಾಧನೆ ಮಾಡಿರುವ ಸಾಧಕೋತ್ತಮರಾದ ಕೋಲಾರ ವಾಣಿ ದಿನಪತ್ರಿಕೆಯ ಸಂಪಾದಕ ಬಿಎನ್ ಮುರಳಿ ಪ್ರಸಾದ್, ಅಂಕಣಕಾರ್ತಿ ಅನುವಾದಕಿ ಮಾಧುರಿ ದೇಶಪಾಂಡೆ, ಸಂಯುಕ್ತ ಕರ್ನಾಟಕ ವರದಿಗಾರ ಗುರುರಾಜ್ ಕುಲಕರ್ಣಿ, ಸತ್ಯ ಕ್ರಾಂತಿಯ ಸಂಪಾದಕ ಮೋಹನ್ ಕುಲಕರ್ಣಿ ಮತ್ತು ಕಲ್ಪಾ ಡಿಜಿಟಲ್ ಮೀಡಿಯಾ ಸಂಪಾದಕ ಅನಿರುದ್ಧ ವಸಿಷ್ಠ ರವರುಗಳಿಗೆ ಸುವರ್ಣ ಸಂಭ್ರಮ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಆರೋಹಣ ಸಂಸ್ಥೆಯ ಗಾಯಕ ಸುಧೀಂದ್ರ ಮತ್ತು ಸಂಪದ ಸಾಂಸ್ಕೃತಿಕ ವೇದಿಕೆಯ ಅಚ್ಯುತಾ ಸಂಕೇತಿ ರವರಿಂದ ವೈವಿಧ್ಯಮಯ ಗಾಯನ ಪ್ರಸ್ತುತಿ ಮತ್ತು ಸ್ಪೂರ್ತಿ ಹೆಚ್ ಯಾವಗಲ್ ರವರಿಂದ ಕಥಕ್ ನೃತ್ಯಆಯೋಜಿಸಲಾಗಿತ್ತು.

ಪತ್ರಕರ್ತ ಹೆಚ್. ಎಸ್ ದ್ವಾರಕನಾಥ್, ಹಿರಿಯ ಪತ್ರಿಕಾ ಛಾಯಾಗ್ರಹಾಕ ಶ್ರೀನಿವಾಸ ವೈ ಕೆ ರವರಿಗೆ ಸನ್ಮಾನ,ವಿಕಾಸ ಸದಸ್ಯರಿಗೆ ಗುರುತಿನ ಚೀಟಿ ವಿತರಣೆ ನಡೆಯಿತು.ವಿಕಾಸದ ಅಧ್ಯಕ್ಷ ಶ್ರೀನಾಥ ಜೋಶಿ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ಮಾಧ್ಯಮದ ವಿವಿಧ ಚಟುವಟಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಡುತ್ತಿರುವ ಸಮಾನ ಮನಸ್ಕರನ್ನು ಒಂದುಗೂಡಿಸಿ ಅವರ ಪ್ರತಿಭೆಗಳಿಗೆ ಸೂಕ್ತ ಅವಕಾಶ ನೀಡುವುದು ವೇದಿಕೆಯ ಉದ್ದೇಶವಾಗಿದೆ ಎಂದು ತಿಳಿಸಿದರು. ಪ್ರಧಾನ ಕಾರ್ಯದರ್ಶಿ ಹನುಮೇಶ ಯಾವಗಲ್ ಮತ್ತು ವಿಕಾಸ ಸದಸ್ಯ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಉಪಸ್ಥಿತರಿದ್ದರು.

ಪೂರಕ ಮಾಹಿತಿ :ತೀರ್ಥಹಳ್ಳಿ ಅನಂತ ಕಲ್ಲಾಪುರ

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group