ಮಾರ್ಧವ ಧರ್ಮ Humility uttam madhav
ಮಾರ್ಧವಎಂದರೆ ಗರ್ವ. ಗರ್ವವು ಓರ್ವ ಮಾನವ ಜೀವಿಯನ್ನು ಆಳುವ ಪ್ರವೃತ್ತಿಗೆ ತಳ್ಳುತ್ತದೆ. ಧನ ಸಿರಿ ಸಂಪತ್ತು ವಿದ್ಯೆ ಅಧಿಕಾರ ಮದದಿಂದ ಮಾನವ ನಾನೆ ಮೇಲು ಅವನು ಕೀಳು ನನ್ನ ಅಧೀನ ಎಂದು ತಿಳಿಯುತ್ತಾನೆ. ಇದು ನಿರ್ಜೀವ ವಸ್ತುಗಳು ನನ್ನದೆಂಬ ಹಾಗೂ ನಾನೆ ಶ್ರೇಷ್ಠ ಎನ್ನುವುದರಿಂದ ಬರುತ್ತದೆ. ಲೌಕಿಕ ಭೋಗಕ್ಕಿಲ್ಲಿ ಮಹತ್ವ ಕೊಡುತ್ತಾನೆ. ಇದು ಅವನನ್ನು ವಿನಾಶದತ್ತ ಕೊಂಡೊಯ್ಯುತ್ತದೆ.
ಆಶೆಯ ದುಖಕ್ಕೆ ಮೂಲ ,ಸ್ವ ಪ್ರತಿಷ್ಠೆಯೇ ಗರ್ವಕ್ಕೆ ಮೂಲ .ಇದರಿಂದ ಸಿಗುವುದು ಕೇವಲ ದುಃಖ ಭರಿತ ನಶ್ವರ ಜೀವನ ಅಹಂಕಾರ ಗರ್ವ ತ್ಯಜಿಸಿ ನಾನು ನೀನೆ ಭಗವಂತ ಎನ್ನುವ ಮಾತಿನೊಂದಿಗೆ ಎಲ್ಲರೂ ಒಂದೇ ಎನ್ನುವ ಭಾವ ಬರಬೇಕು. ಒಬ್ಬರಿಗೂಬ್ಬರೂ ಬೆಲೆಕೊಡುತ್ತ ಪ್ರೋತ್ಸಾಹಿಸುತ್ತ ಶಾಂತಿಯುತವಾಗಿ ಬಾಳಬೇಕು. ಬಂಡವಾಳಕ್ಕೆ ಬೆಲೆಕೊಡದೆ ಭಾವಕ್ಕೆ ಬೆಲೆಕೊಟ್ಟು ಬದುಕಬೇಕು.
ಜ್ಞಾನಿಗಳು ಅಜ್ಞಾನಿಗಳು ಶ್ರಾವಕರು ಮುನಿಗಳೂ ಎಲ್ಲ ಸಮೂಹದವರು ವಿನಯವನ್ನು ಎಲ್ಲಾ ಕಡೆಯೂ ಪ್ರತಿ ಹಂತದಲ್ಲೂ ಪಾಲಿಸಬೇಕು. ಇದರಿಂದ ಅಹಂಕಾರ ನಷ್ಟಪಡಿಸಿಕೊಂಡು ಭವ್ಯ ಜೀವಾತ್ಮರಾಗಬಹುದು. ಮಾರ್ಧವ ಧರ್ಮವು ಅಹಂಕಾರವನ್ನು ನಷ್ಟಗೊಳಿಸುವ ಧರ್ಮವಾಗಿದೆ.
“ವಿನಯದಿಂದ ಮಾನ ವೈರಿ ದಮನ
ವಿನಯದಿಂದ ದಿವ್ಯಜ್ಞಾನ , ಜನ್ಮ ಜರಾಮರಣ ಮುಕ್ತಿ ಮಾರ್ಗದ ದಾರಿ ವಿನಯ, ಮಮಕಾರಮಯ,ಪ್ರೇಮಮಯಿ ಧರ್ಮವೆ ಮಾರ್ದವ ಧರ್ಮ”
“ಓಂ ಹ್ರೀಮ್ ಮಾರ್ಧವ ಧರ್ಮಾಂಗಾಯ ನಮ:, ಗಂ ಧಾದಿ ಅರ್ಘ್ಯ ನಿರೂಮಪಾತಿಸ್ವಾಹಾ”
ಲಲಿತಾ ಮ ಕ್ಯಾಸನ್ನವರ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ. ಹಲಗಾ ಬೆಳಗಾವಿ.