ಮೂಡಲಗಿ ಮತ್ತು ಗೋಕಾಕ ತಾಲೂಕಿನ ಜನಸ್ಪಂದನ ರದ್ದು

Must Read

ವಾಗ್ವಾದಕ್ಕೆಡೆ ಮಾಡಿದ ಉಪವಿಭಾಗಾಧಿಕಾರಿಗಳ ನಡೆ

ಇದೆ ದಿ. ೫ ರಂದು ಜಿಲ್ಲಾಡಳಿತದ ವತಿಯಿಂದ ಗೋಕಾಕದ ಶ್ರೀ ಬಸವೇಶ್ವರ ಸಭಾ ಮಂಟಪದಲ್ಲಿ ಹಮ್ಮಿಕೊಂಡಿದ್ದ ಮೂಡಲಗಿ ಮತ್ತು ಗೋಕಾಕ ತಾಲೂಕ ಜನಸ್ಪಂದನಾ ಕಾರ್ಯಕ್ರಮ ರದ್ದಾಗಿದ್ದು ಇದೆಲ್ಲ ಬರೀ ಕಾಟಾಚಾರ ಎಂದು ಸಾರ್ವಜನಿಕರು ಆಡಿಕೊಳ್ಳುವಂತಾಗಿದೆ.

ಬೆಳಗಾವಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ ಸಿಇಒ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಕಾರ್ಯಕ್ರಮಕ್ಕೆ ಬರಬೇಕಾಗಿತ್ತು. ಸಾರ್ವಜನಿಕರಲ್ಲಿ ಹಲವಾರು ನಿರೀಕ್ಷೆಗಳನ್ನು ಹುಟ್ಟಿಸಿದ್ದ ಜನಸ್ಪಂದನ ಕಾರ್ಯಕ್ರಮಕ್ಕೆ ಮೇಲಿನ ಮೂವರೂ ಅಧಿಕಾರಿಗಳು ಬರದೇ ಇರುವುದರಿಂದ ಡಿಸಿ ಅವರ ಅಧ್ಯಕ್ಷತೆಯಲ್ಲಿ ನೆರವೇರಬೇಕಿದ್ದ ಕಾರ್ಯಕ್ರಮ ಬೈಲಹೊಂಗಲ  ಎಸಿ ಅವರ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡಾಗ ಸಾಮಾಜಿಕ ಹೋರಾಟಗಾರ ಗುರುನಾಥ್ ಗಂಗಣ್ಣವರ್ ಮತ್ತು ಗೋಕಾಕ್ ನ ಹೋರಾಟಗಾರ ಪ್ರಕಾಶ ಬಾಗೋಜಿ ಅವರು ಈ ಕಾರ್ಯಕ್ರಮಕ್ಕೆ ತಡೆಯೊಡ್ಡಿದರು.

ಎಸಿ ಯವರ ಅಧ್ಯಕ್ಷತೆಯಲ್ಲಿ ಮತ್ತು ತಾಲೂಕಾಡಳಿತ ನೇತೃತ್ವದಲ್ಲಿ ಈ ಕಾರ್ಯಕ್ರಮ ನೆರವೇರುವುದು ಸೂಕ್ತ ಅಲ್ಲ ನಿಮ್ಮಿಂದ ಸಾರ್ವಜನಿಕ ಸಮಸ್ಯೆಗಳನ್ನು ಬಗೆಹರಿಸಲಾಗದ ಸಮಯದಲ್ಲಿ ಜಿಲ್ಲಾ ಆಡಳಿತ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ನಿಮ್ಮ ಮೇಲೆ ತಾಲೂಕ ಆಡಳಿತ ಮೇಲೆ ನಮಗೆ ಯಾವುದೇ ನಂಬಿಕೆ ವಿಶ್ವಾಸ ಇಲ್ಲ ನೀವು ಈ ಕಾರ್ಯಕ್ರಮ ನಡೆಸುವುದು ಬೇಡ ಎಂದು ತಕರಾರು ತೆಗೆದ ಸಾಮಾಜಿಕ ಕಾರ್ಯಕರ್ತರು.

ಇದರಿಂದ ಕುಪಿತಗೊಂಡ ಬೈಲಹೊಂಗಲ  ಎಸಿ ಅವರು ಸಾಮಾಜಿಕ ಹೋರಾಟಗಾರ ಗುರುನಾಥ್ ಗಂಗನ್ನವರ್ ರವರಿಗೆ ಇಷ್ಟ ಇಲ್ಲದಿದ್ದರೆ ಹೋಗಿ ಎಂಬ ಉಡಾಫೆ ಉತ್ತರವನ್ನು ನೀಡಿದರು. ಅದಕ್ಕೆ ಪ್ರತಿಯಾಗಿ ಗಂಗಣ್ಣವರ ಅವರು ನಾನು ನಿಮ್ಮ ಮನೆಗೆ ಬಂದಿಲ್ಲ ಜಿಲ್ಲಾಧಿಕಾರಿಯವರಿಗೆ ದೂರು ನೀಡಲು ಬಂದಿದ್ದೇನೆ ಎಂದು ಹೇಳಿದಾಗ ಕೆಲ ಕಾಲ ವೇದಿಕೆಯ ಮೇಲೆ ಮೂಡಲಗಿ ಮತ್ತು ಗೋಕಾಕ್ ತಾಲೂಕಿನ ಅಧಿಕಾರಿಗಳು ಹಾಗೂ ಹೋರಾಟಗಾರರ ಮಧ್ಯೆ ವಾಗ್ವಾದ ನಡೆಯಿತು. ನಂತರ ಡಿಸಿ ಅವರೊಂದಿಗೆ ಮಾತನಾಡಿದ ಎಸಿ ಅವರು ಕಾರ್ಯಕ್ರಮವನ್ನು ಮುಂದೂಡಿ ವೇದಿಕೆಯಿಂದ ಎಲ್ಲರೂ ನಿರ್ಗಮಿಸಿದರು.

ಜನರ ಸಮಸ್ಯೆಯನ್ನು ಆಲಿಸಬೇಕಿದ್ದ ಜಿಲ್ಲಾಡಳಿತದ ಅಧಿಕಾರಿಗಳೇ ಕಾರ್ಯಕ್ರಮಕ್ಕೆ ಗೈರಾಗಿರುವುದರಿಂದ ಸಮಸ್ಯೆಯನ್ನು ಹೇಳಿಕೊಳ್ಳಲು ಬಂದಿದ್ದ ಎರಡು ತಾಲೂಕಿನ ಜನತೆ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಸರ್ಕಾರದ ನಿಯಮವನ್ನ ಪಾಲಿಸಲು ಕಾಟಾಚಾರಕ್ಕೆ ಈ ಕಾರ್ಯಕ್ರಮವನ್ನು ಜಿಲ್ಲಾಡಳಿತ ಹಾಗೂ ತಾಲೂಕ ಆಡಳಿತಗಳು ಹಮ್ಮಿಕೊಂಡಿದ್ದವು. ನಿಜವಾಗಲೂ ಇವರಿಗೆ ಜನರ ಸಮಸ್ಯೆಯನ್ನು ಆಲಿಸುವುದು ಮತ್ತು ಪರಿಹರಿಸುವುದು ಇಷ್ಟವಿರಲಿಲ್ಲ ಎಂದು ಸಾಮಾಜಿಕ ಹೋರಾಟಗಾರ ಗುರುನಾಥ್ ಗಂಗಣ್ಣವರ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

Latest News

ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...

More Articles Like This

error: Content is protected !!
Join WhatsApp Group