ಜನತಾ ಬಜಾರ್ ಬಸ್ ನಿಲ್ದಾಣ ಅವ್ಯವಸ್ಥೆಯ ಆಗರ

Must Read

ಜನತಾ ಬಜಾರ್ ಬಸ್ ಸ್ಟಾಪ್ ನಲ್ಲಿ ಕಸದ ರಾಶಿ ! ಕಸದ ರಾಶಿ ! (ಕತ್ರಿಗುಪ್ಪೆ ಕಡೆ ಸಾಗುವ ಮಾರ್ಗ)

ಬೆಂಗಳೂರು:/ಬನಶಂಕರಿ 3 ನೇ ಹಂತದ ರಿಂಗ್ ರೋಡ್ – ಹೊರ ವರ್ತುಲ ಪಾದಚಾರಿ ರಸ್ತೆ ಅವ್ಯವಸ್ಥೆಯ ಆಗರವಾಗಿ ಪಾದಚಾರಿಗಳ ಮಾರ್ಗಕ್ಕೆ ಗ್ರಹಣ ಹಿಡಿದಿದೆ ಎಂದರೆ ಪ್ರಾಯಶ ತಪ್ಪಾಗಲಾರದು.

ನಗರದ ಜನತಾ ಬಜಾರ್ ನಿಂದ ಹಿಡಿದು ಕತ್ರಿಗುಪ್ಪೆಗೆ ಸಾಗುವ ಪಾದಚಾರಿ ಮಾರ್ಗದಲ್ಲಿ ಪಾದಚಾರಿ ಗಳು ನಡೆದು ಸಾಗಲು ಜಾಗವೇ ಇಲ್ಲವಾಗಿದೆ. ಜನತಾ ಬಜಾರ್ ಬಸ್ ಸ್ಟಾಪ್ ನಲ್ಲಿ ಹಿಂಭಾಗ ದಲ್ಲಿ ಇರುವ ಪಾದಚಾರಿ ಮಾರ್ಗದಲ್ಲಿ ಕಸದ ರಾಶಿ !! ಕಸದ ರಾಶಿ !!

ಜನತಾ ಬಜಾರ್ ಬಸ್ ನಿಲ್ದಾಣ ನಿಲ್ಲುವ ಪ್ರಯಾಣಿಕರು ಮೂಗಿನ ಮೇಲೆ ಕೈ ಇಟ್ಟು ನಿಲ್ಲಬೇಕಾದ ಪರಿಸ್ಥಿತಿ ಒಂದೆಡೆ ಆದರೆ ಕಳೆದ ಎರಡು ವರುಷ ಗಳಿಂದ ಕರೋನಾದಿಂದ ಬದುಕು ಅಯೋಮಯ ಆಗಿದ್ದರೆ ಜನರು ಕಂಡ ಕಂಡಲ್ಲಿ ಕಸ ಹಾಕಿ ಸಾಂಕ್ರಾಮಿಕ ರೋಗಕ್ಕೆ ಮುನ್ನುಡಿ ಬರೆಯುತ್ತ ಇದ್ದಾರೆ ಹಾಗೆಯೇ ಈಗ ಹೊಸ ಕಾಯಿಲೆ ಒಂದು ಬಂದಿದೆಯಂತೆ ಅದರ ಹೆಸರು ಮಂಕಿ ಪಾಕ್ಸ್ ಅಂತೇ. ಜನರು ಕಂಡ ಕಂಡಲ್ಲಿ ಕಸ ಹಾಕುವುದನ್ನು ನಿಲಿಸುತ್ತಾರೆಯೇ….? ಮಹಾನಗರ ಪಾಲಿಕೆ ನಗರದ ಸ್ವಚ್ಛತೆ ಬಗ್ಗೆ ಗಮನಹರಿಸೀತೇ ಎಂಬುದು ನನ್ನ ಯಕ್ಷ ಪ್ರಶ್ನೆ.

ಪಾದಚಾರಿ ಮಾರ್ಗದ ಮೇಲೆ ದ್ವಿ ಚಕ್ರ ವಾಹನಗಳ ಸವಾರಿ , ಪಾದಚಾರಿ ಮಾರ್ಗದ ತುಂಬಾ ಹೊಂಡಗಳು, ಗುಂಡಿಗಳು, ಬನಶಂಕರಿ 3ನೇ ಹಂತದ ಜನತಾ ಬಜಾರ್‌ನಲ್ಲಿ ಪಾದಚಾರಿಗಳ ಮಾರ್ಗಕ್ಕೆ ನುಗ್ಗುವ ದ್ವಿಚಕ್ರ ವಾಹನ ಚಾಲಕರು ಹಾಗು ನಾಲ್ಕು ಚಕ್ರ ಗಳ ವಾಹನಗಳ ಚಾಲಕರು ಪುಟ್ ಪಾತ್ ಮೇಲೆ ಪಾರ್ಕಿಂಗ್ ಮಾಡುತ್ತಾರೆ.

ಪಾದಚಾರಿಗಳ ಸುರಕ್ಷತೆಗೆ ಧಕ್ಕೆಯುಂಟುಮಾಡುವ ಅವ್ಯವಸ್ಥೆಯ ಆಗರ. ಪಾದಚಾರಿ ಮಾರ್ಗದ ಮೇಲೆ ? ಇದು ಬನಶಂಕರಿ 3 ನೇ ಹಂತದ ಜನತಾ ಬಜಾರ್ ನಿಂದ ಹಿಡಿದು ಕತ್ರಿಗುಪ್ಪೆ ಹೋಗುವ ದಾರಿಯಲ್ಲಿ ಇರುವ ಫುಟ್‌ಪಾತ್‌ ಅವ್ಯವಸ್ಥೆಯ ಚಿತ್ರಣ ಇದು.

ಸಾವಿರಾರು ರೂಪಾಯಿ ಖರ್ಚು ಮಾಡಿ ಮಹಾನಗರ ಪಾಲಿಕೆಯವರು ನಿರ್ಮಿಸುವ ಪುಟ್ ಪಾತ್ ಇಂದು ಅಕ್ಷರಶಃ ಕಸದ ರಾಶಿ ರಾಶಿ ಹಾಕುವ ತಾಣ ಹಾಗು ದ್ವಿಚಕ್ರ ವಾಹನ ಹಾಗು ನಾಲ್ಕು ಚಕ್ರದ ವಾಹನ ನಿಲ್ಲಿಸುವ ತಾಣ !! ಮರಳು – ಜಲ್ಲಿ ಪುಡಿ ಹಾಕುವ ತಾಣ !! ಲಾರಿ ನಿಲ್ಲಿಸಿ ಸಾಮಾನುಗಳನ್ನು ಇಳಿಸುವ ತಾಣ !!

ಆದರೆ ಇವೆಲ್ಲವೂ ಕಣ್ಣಿಗೆ ಕಟ್ಟುವಂತೆ ಇದ್ದರೂ ಮಹಾನಗರ ಪಾಲಿಕೆ ಅಧಿಕಾರಿಗಳು ಕಣ್ಣಿಗೆ ಬೀಳದಂತೆ ಜಾಣ ಕುರುಡು ಪ್ರದರ್ಶಿಸುತ್ತಿದೆಯೇ ಎಂಬ ಯಕ್ಷ ಪ್ರಶ್ನೆ ನನ್ನ ಮನದಲ್ಲಿ ಮೂಡಿದೆ !

ಸಂಬಂಧಪಟ್ಟವರು ಪುಟ್ ಪಾತ್ ಮೇಲೆ ನಿಲ್ಲಿಸುವ ವಾಹನಗಳನ್ನು ತೆರವುಗೊಳಿಸಲಿ ….ಪುಟ್ ಪಾತ್ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಲಿ … ಸಾವಿರ ಸಾವಿರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಪಾದಚಾರಿ ಮಾರ್ಗಗಳು ಪಾದಚಾರಿಗಳು ಓಡಾಡಲು ಅನುವು ಮಾಡಿ ಕೊಡಲಿ , ಒಟ್ಟಿನಲ್ಲಿ ನಗರದ ಬನಶಂಕರಿ 3 ನೇ ಹಂತದ ಜನತಾ ಬಜಾರ್‌ನಲ್ಲಿ ಪಾದಚಾರಿಗಳ ಮಾರ್ಗಕ್ಕೆ ಹಿಡಿದಿರುವ ಗ್ರಹಣ ವನ್ನು ಬಿಡಿಸುವ ಮನಸ್ಸು ಮಹಾನಗರ ಪಾಲಿಕೆ ಮಾಡಲಿ ಎಂದು ಆಶಿಸುತ್ತೇನೆ!!


ಚಿತ್ರ : ಬರಹ : ತೀರ್ಥಹಳ್ಳಿ ಅನಂತ ಕಲ್ಲಾಪುರ
Mobile Number : 9480129458

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group