ಅಗಲಿದ ರತನ್ ಟಾಟಾ ; ಶಾಸಕ ಬಾಲಚಂದ್ರ ಸಂತಾಪ

Must Read

ಬೆಳಗಾವಿ- ಭಾರತಾಂಬೆಯ ಹೆಮ್ಮೆಯ ಸುಪುತ್ರ, ಪ್ರಸಿದ್ಧ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ಅಗಲಿಕೆಗೆ ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಟಾಟಾ ಅವರು ಅಪ್ಪಟ ರಾಷ್ಟ್ರಭಕ್ತ, ದೂರದೃಷ್ಟಿಯ ನಾಯಕ, ಭಾರತೀಯ ಕೈಗಾರಿಕೆ ಉದ್ಯಮದಲ್ಲಿ ಅಪ್ರತಿಮ ಸಾಧಕರಾಗಿದ್ದರು. ಟಾಟಾ ಅವರು ಕೇವಲ ಉದ್ಯಮಿಯಾಗಿರಲಿಲ್ಲ. ಸಮಗ್ರತೆ, ಅಚಲವಾದ ಬದ್ಧತೆ, ಭಾರತದ ಆತ್ಮವನ್ನು ಸಾಕಾರಗೊಳಿಸಿದ
ದಂತಕತೆಯಾಗಿದ್ದರು. ಸಮಾಜದ ಒಳತಿಗಾಗಿ ಶ್ರಮಿಸಿದ ಮಹಾನ್ ಚೇತನ. ಟಾಟಾ ಸಮೂಹವನ್ನು ಜಾಗತಿಕವಾಗಿ ಉದ್ಯಮವನ್ನು ಮಾಡಿರುವ ಶ್ರೇಯಸ್ಸು ಟಾಟಾ ಅವರಿಗೆ ಸಲ್ಲುತ್ತದೆ. ಟಾಟಾ ಅವರ ದಿವ್ಯ ಆತ್ಮಕ್ಕೆ ಪರಮಾತ್ಮನು ಚಿರಶಾಂತಿಯನ್ನು ನೀಡಲಿ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಂತಾಪ ಸೂಚಿಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group