ಮೂಡಲಗಿ – ಸರ್ಕಾರಿ ನೌಕರರು ತಮ್ಮ ಇಲಾಖೆಯ ಕರ್ತವ್ಯದ ಜೊತೆಗೆ ನೌಕರರ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕರೆ ನೀಡಿದರು.
ಇತ್ತೀಚೆಗೆ ತಾಲೂಕಿನ ದುರದುಂಡಿ ಗ್ರಾಮದಲ್ಲಿ ಸರಕಾರಿ ನೌಕರರ ಸಂಘದ ಮೂಡಲಗಿ ತಾಲೂಕಾ ಘಟಕದಿಂದ ಹೊರತಂದ ಪ್ರಸ್ತುತ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಮೊದಲು ನಿಮ್ಮ ಕಚೇರಿಯ ಸೇವೆ ಜೊತೆಗೆ ಸಂಘದ ಅಹವಾಲುಗಳಿಗೆ ಹೆಚ್ಚಿನ ಒತ್ತು ನೀಡುವಂತೆ ಅವರು ತಿಳಿಸಿದರು.
ಹಿರಿಯರ ಮಾತಿಗೆ ಬೆಲೆ ಕೊಟ್ಟು ಮೂಡಲಗಿ ತಾಲ್ಲೂಕು ನೌಕರರ ಸಂಘದ ಆಡಳಿತ ಮಂಡಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮೂಡಲಗಿ ಘಟಕದ ಆಶ್ರಯದಲ್ಲಿ ಹೊರತಂದ ದಿನದರ್ಶಿಕೆಯನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಬಿಡುಗಡೆ ಮಾಡಿದರು.
ನೌಕರರ ಸಂಘದ ಅಭಿವೃದ್ಧಿಗೆ ದುಡಿಯಬೇಕು. ನೌಕರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಿಗಾ ವಹಿಸಬೇಕು. ನಿಮ್ಮ ಯಾವುದೇ ಕೆಲಸವಿರಲಿ. ನನ್ನ ಗಮನಕ್ಕೆ ತಂದರೆ ಮಾಡಿಕೊಡುತ್ತೇನೆ. ಸಂಘದ ಪ್ರಗತಿಗೂ ಸಹ ತನು ಮನದಿಂದ ಶ್ರಮಿಸುವ ಭರವಸೆ ನೀಡಿದರು.
ಸರ್ಕಾರಿ ನೌಕರರ ಸಂಘದ ಮೂಡಲಗಿ ಘಟಕದ ಅಧ್ಯಕ್ಷ
ಆನಂದ ಹಂಜಾಗೋಳ, ಚೇತನ ಕುರಿಹುಲಿ,ಸದಾಶಿವ ದೇವರ, ಸಿದ್ದಣ್ಣ ಕರೋಲಿ, ಕೆ.ಆರ್.ಅಜ್ಜಪ್ಪನವರ,
ರಾಮಚಂದ್ರ ಸಣ್ಣಕ್ಕಿ, ಸಿದ್ಧಾರೂಢ ನಾಗನೂರ,
ವಿ.ಎ.ಹುಲ್ಲಾರ, ಎಸ್ ಐ ಸೌದತ್ತಿ, ಸಂಜು ಕೌಜಲಗಿ,
ಮಹಾಂತೇಶ್ ಹಿಪ್ಪರಗಿ, ರಾಜು ಕೊಳದೂರ, ಸಲೀಂ ಚಾವುಸ್,ಪ್ರಕಾಶ್ ಮೋರೆ, ಗಣಪತಿ ಖಾನಟ್ಟಿ,ಚನ್ನಬಸಪ್ಪ ನಾವಿ, ಭೀಮಪ್ಪ ಗೋರಕನಾಥ ಮುಂತಾದವರು ಉಪಸ್ಥಿತರಿದ್ದರು.