Homeಸುದ್ದಿಗಳುಜಯಾನಂದ ಮಾದರ ಅವರ “ಪುಂಡಿಪಲ್ಲೆ” ಕಥಾ ಸಂಕಲನ ಬಿಡುಗಡೆ ಸಮಾರಂಭ

ಜಯಾನಂದ ಮಾದರ ಅವರ “ಪುಂಡಿಪಲ್ಲೆ” ಕಥಾ ಸಂಕಲನ ಬಿಡುಗಡೆ ಸಮಾರಂಭ

ಮೂಡಲಗಿ : ಚೈತನ್ಯ ಆಶ್ರಮ ವಸತಿಶಾಲೆ ಮೂಡಲಗಿ ಹಾಗೂ ಗೋಕಾಕವಿ ಗೆಳೆಯರ ಬಳಗ ಸಂಯುಕ್ತಾಶ್ರಯದಲ್ಲಿ ಶನಿವಾರ ದಿ.3/12/2022 ರಂದು ಮದ್ಯಾಹ್ನ 2 ಗಂಟೆಗೆ ಚೈತನ್ಯ ಶಾಲಾ ಸಭಾಂಗಣದಲ್ಲಿ ಸಾಹಿತಿ ಹಾಗೂ ಕಲಾವಿದ ಜಯಾನಂದ ಮಾದರ ಅವರ “ಪುಂಡಿಪಲ್ಲೆ” ಪ್ರಥಮ ಕಥಾ ಸಂಕಲನ ಬಿಡುಗಡೆಯಾಗಲಿದೆ.

ಮೂಲತಃ ಮೂಡಲಗಿ ತಾಲೂಕಿನ ಫುಲಗಡ್ಡಿ ಗ್ರಾಮದಲ್ಲಿ ಜನಿಸಿದ ಇವರು ಈಗಾಗಲೇ ಚುಟುಕು, ಹೈಕು, ಕಾವ್ಯ,ಹಾಗೂ ವ್ಯಕ್ತಿ ಚಿತ್ರಣದ ಎಂಟು ಗ್ರಂಥಗಳನ್ನು ಪ್ರಕಟಿಸಿರುವ ಜಯಾನಂದ ಮಾದರ ಅವರು ಚಿತ್ರಕಲೆ ನಾಟಕ ಹಾಗೂ ವಿವಿಧ ಜಾನಪದ ಕ್ಷೇತ್ರದಲ್ಲಿ ಅವಿರತ ಸೇವೆಗೈಯುತ್ತಲಿದ್ದಾರೆ ಕರ್ನಾಟಕ ಸರಕಾರದ ಲಲಿತಕಲಾ ಅಕಾಡಮಿ ರಾಜ್ಯ ಸಮಿತಿ ಸದಸ್ಯರಾಗಿ ಗೋಕಾಕದ ಸಿದ್ಧಾರ್ಥ ಲಲಿತಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಕನ್ನಡ ಜಾನಪದ ಪರಿಷತ್ತನ ಗೋಕಾಕ ತಾಲೂಕಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ರಾಯಚೂರು ವಿಶ್ವವಿದ್ಯಾಲಯ ಸಿಂಡಿಕೇಟ ಸದಸ್ಯ ಹಾಗೂ ಸಾಹಿತಿ ಡಾ,ವಾಯ.ಎಂ ಭಜಂತ್ರಿ ಕೃತಿ ಬಿಡುಗಡೆಗೊಳಿಸುವರು ಧಾರವಾಡದ ಕಥೆಗಾರ ಡಾ. ಸಂಗಮನಾಥ ಲೋಕಾಪೂರ ಕಥೆ ಪರಿಚಯಿಸುತ್ತಾರೆ ಮಂಗಳೂರನ ಬಹುಬಾಷಾ ಕವಿ ಮಹಮ್ಮದ ಬಡ್ಕೂರ ಗಣ್ಯ ವ್ಯಾಪಾರಸ್ಥ ಮಹಾಂತೇಶ ತಾಂವಶಿ ಮೂಡಲಗಿ ಕಸಾಪ ಅಧ್ಯಕ್ಷ ಡಾ ಸಂಜಯ ಶಿಂದಿಹಟ್ಟಿ ಗೋಕಾಕ ಕಸಾಪ ಅಧ್ಯಕ್ಷ ಭಾರತಿ ಮದಬಾವಿ ಮಕ್ಕಳ ಸಾಹಿತಿ ಡಾ.ಲಕ್ಷ್ಮಣ ಚೌರಿ ಮೂಡಲಗಿ ಬಿ,ಐ,ಇ,ಆರ್,ಟಿ,ಬಿ,ಆರ್,ಸಿ ವಾಯ್ ಬಿ.ಪಾಟೀಲ ಹಾರೂಗೇರಿ ಹಿಡಕಲ್ ಶಾಲಾ ಮುಖ್ಯೋಪಾದ್ಯಾಯರು ಶಂಕರ ಕ್ಯಾಸ್ತಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ, ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

RELATED ARTICLES

Most Popular

error: Content is protected !!
Join WhatsApp Group