spot_img
spot_img

ಜಯಾನಂದರ ‘ಪುಂಡಿಪಲ್ಲೆ’

Must Read

spot_img
- Advertisement -

ಜಯಾನಂದ ಮಾದರ ಒಬ್ಬ ಸೃಜನಶೀಲ ಕಲೆಗಾರ ಎಂದುಕೊಂಡಿದ್ದೆ , ಒಬ್ಬ ಚಿತ್ರ ಗಾರ ಒಬ್ಬಕವಿ ಮಧುರವಾಗಿ ಹಾಡಬಲ್ಲರು ಅಷ್ಟೇ ಅಲ್ಲದೇ ಒಬ್ಬ ಅದ್ಬುತ ನಟ ಕೂಡ ಅವರಲ್ಲಿ ಅಡಗಿದ್ದಾನೆ ಅತ್ಯುತ್ತಮ ಮಾತುಗಾರ ಕೂಡ ಭಾಷಣ ಮಾಡಲು ನಿಂತರೆ ಮುಂದಿರುವ ಪ್ರೇಕ್ಷಕರನ್ನು ಮೋಡಿ ಮಾಡುವ ಮೋಡಿಗಾರ ಕೂಡ.

ನಿಜವಾಗಿ ನೋಡಿದರೆ ಅವರೊಬ್ಬ ಸಕಲಕಲಾವಲ್ಲಭ ಅಂತ ಹೇಳಿಕೊಂಡರೂ ತಪ್ಪಾಗಲಾರದು ಇಷ್ಟೆಲ್ಲ ವಿಶೇಷತೆಯ ಜೊತೆ  ಜೊತೆಗೆ ಅವರೊಬ್ಬ ಕಥೆಗಾರನಾಗಿ ಹೊರಹೊಮ್ಮುತ್ತಿರುವುದು  ನಮ್ಮ  ಗೋಕಾಕ ನಾಡಿಗೆ ಒಂದು ಹೆಮ್ಮೆಯ ಗರಿಮೆಯೆ ಸರಿ. ಅವರ ಪ್ರಥಮ ಕಥಾ ಸಂಕಲನ ಮೂಡಲಗಿಯ ಚೈತನ್ಯ ವಸತಿ ಶಾಲೆ ಯಲ್ಲಿ ಬಿಡುಗಡೆಗೊಂಡಿತು. ನನಗೆ ಪುಸ್ತಕದ ಹೆಸರೇ ಒಂದು ರೀತಿಯಲ್ಲಿ ಆಕರ್ಷಣೀಯವಾಗಿ ಕಂಡಿತು. ಪುಸ್ತಕದ ಹೆಸರು ‘ಪುಂಡಿಪಲ್ಲೆ”.

ಪುಂಡಿಪಲ್ಲೆ (ಪುಂಡಿಪಲ್ಯ) ಅಂತ ಯಾಕೆ ಹೆಸರಿಟ್ಟರು ಅನ್ನುವ ಕುತೂಹಲ. ಪುಂಡಿಪಲ್ಯ ಅಂದರೆ ಸುಲಭವಾಗಿ ಸಿಗುವ ಪಲ್ಯ ,ಪುಗಸಟ್ಟೆ ಪಲ್ಯ ಅಂತ ಕೆಲವರು ಹೇಳಿದರು. ಆ ಪಲ್ಯವನ್ನು ರೊಟ್ಟಿಯ ಜೊತೆಗೆ ತಿನ್ನುವಾಗ ಅದರ ಸ್ವಾದ(ರುಚಿಯೇ)ಬೇರೆ  ಹೊಟ್ಟೆಯನ್ನು ತಂಪಾಗಿಸುವ ಬಾಯಿಗೆ ರುಚಿ ಕೊಡುವ ಪಲ್ಯ. ಅದೇ ರೀತಿಯಲ್ಲಿ ಜಯಾನಂದ ಮಾದರ ರವರ ಈ ಕಥಾ ಸಂಕಲನ ಜನರಿಗೆ ರುಚಿಸುವುದರಲ್ಲಿ ಎರಡು ಮಾತಿಲ್ಲ ಮಣ್ಣಿನ ಸೊಗಡಿನ ಧಾಟಿಯಲ್ಲಿ ಸಾಗುವ ಅವರ ಕಥೆಗಳು ನೆಲದಾಳದ ಮಣ್ಣಿನ ಮಕ್ಕಳ ದಲಿತ ಸಮುದಾಯದ ಶೋಷಣೆ ಗೆ ಒಳಗಾದವರ ನಮ್ಮ ನಿಮ್ಮಲ್ಲರ ನಡುವೆ ನಡೆದ ಕಥೆಗಳನ್ನೆ ತಮ್ಮ ಕಥಾವಸ್ತುವಿನಲ್ಲಿ ಅಡಕಗೊಳಿಸಿದ್ದಾರೆ ಸಾಕ್ಷೀಕರಿಸಿದ್ದಾರೆ.

- Advertisement -

ಕೈಗೆ ಪುಸ್ತಕ ಸಿಕ್ಕ ಕೂಡಲೇ ಓದಲು ಶುರುವಿಟ್ಟುಕೊಂಡೆ ಕೆಲವೊಂದು ಕಥೆಗಳು ತಟ್ಟನೆ ಮನಕ್ಕೆ ನಾಟಿದವು ಆಪ್ತವೆನಿಸಿದವು ಮನ ತುಂಬಿ ಬಂದಿತು ಒಟ್ಟು ೨೨ ಕಥೆಗಳುಳ್ಳ ಈ ಕಥಾ ಸಂಕಲನದಲ್ಲಿ ತರಕಾರಿ ತಂಗೆವ್ವ, ಹತ್ತಿ ಹೂ, ಕೆಂಚಿಮಗ ,ಕೆಂಚನ ಕನಸು ಮೂರ್ಕುಳ ಕಥೆಗಳು ಮನವನ್ನು ಆರ್ದ್ರಗೊಳಿಸುವ ಕಥೆಗಳು .ಇಂತಹ ಸುಂದರ ಅರ್ಥಪೂರ್ಣ  ಕಥೆಗಳನ್ನು ಹೆಣೆದಂತಹ ಜಯಾನಂದ ಮಾದರ ರವರಿಗೆ ಮನದಾಳದ ಹಾರ್ದಿಕ ಶುಭಾಶಯ ಅವರಿಂದ ಮತ್ತಷ್ಟು ಮಗದಷ್ಟು ಕೃತಿಗಳು ಹೊರಬರಲಿ ಅವರ ಹೆಸರು ಕನ್ನಡ ನಾಡಿನಾದ್ಯಂತ ಮನೆ ಮಾತಾಗಲಿ.

ರಜನಿ ಅಶೋಕ ಜೀರಗ್ಯಾಳ (ಅಮ್ಮಾಜಿ)

ರಾಜ್ಯಾಧ್ಯಕ್ಷರು ಸಿರಿಗನ್ನಡ ಮಹಿಳಾ ವೇದಿಕೆ

- Advertisement -
- Advertisement -

Latest News

ನ.೨೭ರಂದು ಬಲಮುರಿ ಗಣಪತಿ ಪ್ರಾಣ ಪ್ರತಿಷ್ಠಾಪನೆ

ಮೈಸೂರು -ನಗರದ ಗೋಕುಲಂ ೧ನೇ ಹಂತ ಮುಖ್ಯರಸ್ತೆ, ವಿ.ವಿ.ಮೊಹಲ್ಲಾದಲ್ಲಿರುವ ಶ್ರೀರಾಮ ಮಂದಿರದಲ್ಲಿ ನ.೨೭ರಂದು ಬುಧವಾರ ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಬಲಮುರಿ ಗಣಪತಿ ಪ್ರಾಣ ಪ್ರತಿಷ್ಠಾಪನೆಯನ್ನು ಹಮ್ಮಿಕೊಳ್ಳಲಾಗಿದೆ. ಇದರ...
- Advertisement -

More Articles Like This

- Advertisement -
close
error: Content is protected !!
Join WhatsApp Group