spot_img
spot_img

ರಾಷ್ಟ್ರ ಭಕ್ತಿಯ ಜೊತೆಗೆ ಹಿಂದೂ ಧರ್ಮದ ರಕ್ಷಣೆ ಮಾಡಬೇಕು-ಪ್ರಕಾಶ ಮಾದರ

Must Read

- Advertisement -

ಮೂಡಲಗಿ – ಮೂಡಲಗಿ ತಾಲೂಕಾ ವಿಶ್ವಹಿಂದೂ ಪರಿಷತ್ ಭಜರಂಗದಳದ ಸಂಕೀರ್ತನಾ ಯಾತ್ರೆ ಮತ್ತು ಸತ್ಸಂಗ ಕಾರ್ಯಕ್ರಮಕ್ಕೆ ಇಲ್ಲಿಯ ಶ್ರೀ ಶಿವಬೋಧರಂಗ ಮಠದಲ್ಲಿ ಜರುಗಿದ ಸಂಕೀರ್ತನಾ ಯಾತ್ರೆಗೆ ಮೂಡಲಗಿ ತಾಲೂಕಾ ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಪ್ರಕಾಶ ಮಾದರ ಚಾಲನೆ ನೀಡಿದರು.

ನಂತರ ಬಸವರಂಗ ಮಂಟಪದಲ್ಲಿ ಜರುಗಿದ ಸತ್ಸಂಗ ಕಾರ್ಯಕ್ರಮಕ್ಕೆ ಇಟನಾಳ ಗ್ರಾಮದ ಸಿದ್ದೇಶ್ವರ ಮಹಾರಾಜರು ಮತ್ತು ತಪಸಿಯ ರೇವಣಸಿದ್ದೇಶ್ವರ ಮಠದ ಸ್ವಾಮೀಜಿ ಹಾಗೂ ಮೂಡಲಗಿ ಪುರಸಭೆ ಸದಸ್ಯ ಈರಪ್ಪ ಮುನ್ಯಾಳ ಚಾಲನೆ ನೀಡಿದರು.

ಪ್ರಕಾಶ ಮಾದರ ಮಾತನಾಡಿ, ಹನುಮ ಮಾಲಾಧಾರಿಗಳು ರಾಷ್ಟ್ರ ಭಕ್ತಿಯ ಜೊತೆಗೆ ಹಿಂದೂ ಧರ್ಮದ ರಕ್ಷಣೆಯನ್ನು ಮಾಡುವ ಕಾರ್ಯ ಮಾಡಿ ಉತ್ತಮ ನಾಗರಿಕರಾಗಬೇಕು ಎಂದರು.

- Advertisement -

ಹನುಮ ಮಾಲಾ ಮಾಲೆಧಾರಣ ಮಾಡಿದ ನಂತರ ನಮ್ಮ ಅಂತರ್ಮನ ಶುದ್ದ ಮಾಡುತ್ತದೆ. ಯುವಕರಲ್ಲಿ ಒಳ್ಳೆಯ ಆದರ್ಶಗಳನ್ನು ಪರಿಪಾಲನೆ ಮಾಡಲು ಪ್ರೇರೇಪಿಸುತ್ತದೆ. ನಿರ್ವ್ಯಸನಿಯಾಗಿ, ಬಲಶಾಲಿಯಾಗಿ ಬದುಕಿ ನಮ್ಮ ದೇಶವನ್ನು ನಾವೆ ಸುರಕ್ಷಿತವಾಗಿಡಬೇಕು. ಏಕತೆಯಲ್ಲಿ ಬಲವಿದೆ, ಎಲ್ಲ ಹಿಂದೂಗಳು ಒಗ್ಗೂಡಬೇಕು ಎಂದರು.

ಕಾರ್ಯಕ್ರಮದಲ್ಲಿ ಲಕ್ಷ್ಮಣ ಮಿರಾಳೆ, ಸಿದ್ದಣ್ಣ ತಿಗಡಿ, ಪುರುಷೋತ್ತಮ ಒಡೆಯರ, ಕಲ್ಮೇಶ ಗೋಕಾಕ, ಈರಪ್ಪ ಢವಳೇಶ್ವರ, ಮಹೇಶ ಒಡೆಯರ, ಲಕ್ಷ್ಮಣ ಪುಜೇರ, ಸದಾಶಿವ ನಿಡಗುಂದಿ, ಕುಮಾರ ಗಿರಡ್ಡಿ, ಭೀಮಶಿ ನಾಗನ್ನವರ ಮತ್ತಿತರರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಸೈನಿಕರು ದೇಶದ ಆಸ್ತಿ ಮತ್ತು ಶಕ್ತಿ ಇದ್ದಂತೆ-  ಪ್ರೊ. ಸಂಜೀವ ಮಂಟೂರ

ಮೂಡಲಗಿ:-ಪಟ್ಟಣದ ಆರ್ ಡಿ ಎಸ್ ಕಾಲೇಜಿನಲ್ಲಿ "ಕಾರ್ಗಿಲ್ ವಿಜಯೋತ್ಸವ" ಕಾರ್ಯಕ್ರಮ ನಡೆಯಿತು. ಭಾರತ ದೇಶದ ರಕ್ಷಣೆಯಲ್ಲಿ ವೀರಯೋಧರು ಒಂದು ಶಕ್ತಿಯಾಗಿ ದೇಶದ ಸಂರಕ್ಷಕರಾಗಿ ತಮ್ಮ ಜೀವವನ್ನು ತ್ಯಾಗ ಮಾಡಿ...
- Advertisement -

More Articles Like This

- Advertisement -
close
error: Content is protected !!
Join WhatsApp Group