spot_img
spot_img

ಅರಭಾವಿಯಲ್ಲಿ ಈ ಸಲ ಜೆಡಿಎಸ್ ಬರುವುದು ನಿಶ್ಚಿತ – ಪ್ರಕಾಶ ಸೋನವಾಲಕರ

Must Read

- Advertisement -

ಮೂಡಲಗಿ – ಕಳೆದ ಚುನಾವಣೆಯಲ್ಲಿ ಅರಭಾವಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಮತದಾರರು  ೫೦ ಸಾವಿರದಷ್ಟು ಮತ ನೀಡಿ ಬೆಂಬಲಿಸಿದ್ದರು. ಇದೊಂದು ಅದ್ಭುತ ಎಂದು ಭಾವಿಸಿದ್ದೇವೆ. ಈ ಸಲ ನಮ್ಮ ಜೆಡಿಎಸ್ ಅಭ್ಯರ್ಥಿ ಯನ್ನೇ ಅರಭಾವಿ ಮತದಾರರು ಆಯ್ಕೆ ಮಾಡುವುದು ನಿಶ್ಚಿತವಾಗಿದೆ ಎಂದು ಜೆಡಿಎಸ್ ರಾಜ್ಯ  ಉಪಾಧ್ಯಕ್ಷ ಪ್ರಕಾಶ ಸೋನವಾಲಕರ ಹೇಳಿದರು.

ತಮ್ಮ ಸ್ವಗೃಹದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬರುವ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಲು ಮೂವರು ಅಂದರೆ ಸತೀಶ ಒಂಟಗೋಡಿ, ಈರಣ್ಣ ಕೊಣ್ಣೂರ ಹಾಗೂ ಪ್ರಕಾಶ ಕಾಡಶೆಟ್ಟಿ ಯವರು ಆಕಾಂಕ್ಷಿಯಾಗಿದ್ದಾರೆ ಅವರಲ್ಲಿ ಯಾರೇ ಸ್ಪರ್ಧಿಸಿದರೂ ಆರಿಸಿ ಬರುವುದು ಖಚಿತವಾಗಿದೆ. ಅರಭಾವಿ ಕ್ಷೇತ್ರದ ಜನರು ಬದಲಾವಣೆ ಬಯಸಿದ್ದಾರೆ ಎಂದರು.

ಜೆಡಿಎಸ್ ಸರ್ಕಾರ ಇದ್ದಾಗಿನ ಕೆಲವು ಸಾಧನೆಗಳನ್ನು ವಿವರಿಸಿದ ಅವರು, ಸಾಲಮನ್ನಾಕ್ಕೆ ಕಾಂಗ್ರೆಸ್ ಒಪ್ಪಲಿಲ್ಲ ಆದರೂ ಕುಮಾರಸ್ವಾಮಿ ೧೬ ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಇವರ ಆಡಳಿತ ರಾಜ್ಯಾದ್ಯಂತ ಮೆಚ್ಚುಗೆ ಗಳಿಸಿತ್ತು. ಈಗಲೂ ಕುಮಾರಸ್ವಾಮಿ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು ಆದರೆ ಜಾತಿಗಳ ಹಿನ್ನೆಲೆಯಲ್ಲಿ ಸ್ವಲ್ಪ ಹಿನ್ನಡೆಯಾಗುತ್ತಿದೆ ಅದನ್ನೆಲ್ಲ ಮೀರಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎಂದರು.

- Advertisement -

ಬರುವ ಚುನಾವಣೆಯಲ್ಲಿ  ಪಂಚರತ್ನ ಯೋಜನೆ ಜಾರಿಗೆ ತರಲಾಗುತ್ತಿದೆ. ಇದರಡಿಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಉಚಿತವಾಗಿ ನೀಡುವುದು, ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸುಸಜ್ಜಿತ ಹೈಟೆಕ್ ಆಸ್ಪತ್ರೆ ನಿರ್ಮಾಣ, ರೈತರಿಗೆ ಆಧುನಿಕ ತಂತ್ರಜ್ಞಾನ ಹಾಗೂ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ರೈತ ಚೈತನ್ಯ, ಯುವಕರು ಹಾಗೂ ಮಹಿಳೆಯರ ಸಬಲೀಕರಣ ಯೋಜನೆ, ವಸತಿ ಇಲ್ಲದವರಿಗೆ ಸರ್ಕಾರದಿಂದ ಮನೆ ಕಟ್ಟಿಕೊಡುವ ಯೋಜನೆ ಇವೇ ಮುಂತಾದ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಅಲ್ಲದೆ ವೃದ್ಧಾಪ್ಯ ವೇತನವನ್ನು ರೂ. ೫ ಸಾವಿರಕ್ಕೆ ಹೆಚ್ಚಳ, ವಿಧವಾ ವೇತನ ರೂ. ೨ ಸಾವಿರಕ್ಕೆ ಹೆಚ್ಚಳ ಮಾಡಲಾಗುವುದು ಎಂದು ಜೆಡಿಎಸ್ ಸರ್ಕಾರದ ಪ್ರಣಾಳಿಕೆಯ ಮಾಹಿತಿ ನೀಡಿದರು.

ಕಲ್ಮಡ್ಡಿ ಯಾತ ನೀರಾವರಿ ಯೋಜನೆಗೆ ಕುಮಾರಸ್ವಾಮಿ ರೂ. ೧೬೭ ಕೋಟಿ ಕೊಟ್ಟಿದ್ದಾರೆ ಆದರೆ ಕಾಂಗ್ರೆಸ್ ಮತ್ತು ಬಿಜೆಪಿಯವರು ತಾವೇ ಮಾಡಿದ್ದಾಗಿ ಕೊಚ್ಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಸೋನವಾಲಕರ ಅವರು, ಕಾಂಗ್ರೆಸ್ ಪಕ್ಷ  ಉಚಿತ ಕೊಡುಗೆ ಕೊಟ್ಟು ರೈತರನ್ನು ಭಿಕ್ಷುಕರನ್ನಾಗಿ ಮಾಡುತ್ತಿದೆ. ಬಿಜೆಪಿ ರೈತರಿಗೆ ನಾಲ್ಕು ತಿಂಗಳಿಗೆ  ಕೇವಲ ೨೦೦೦ ಕೊಟ್ಟಿದೆ  ಆದರೆ ಕುಮಾರಸ್ವಾಮಿಯವರು ಎಕರೆಗೆ ರೂ. ೧೦ ಸಾವಿರ ರೂ. ಕೊಡುವುದಾಗಿ ಹೇಳಿದ್ದಾರೆ ಎಂದರು.

- Advertisement -

ಸಕ್ಕರೆ ಕಾರ್ಖಾನೆಗಳು ಶ್ರೀಮಂತರ ಕೈಯಲ್ಲಿ ಇವೆ.  ಸರ್ಕಾರದ ಯೋಜನೆಗಳು ರೈತರಿಗೆ ತಲುಪುತ್ತಿಲ್ಲ. ಕೈಗಾರಿಕೆಯವರಿಗೆ ೯ ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಇದು ನಿಲ್ಲಬೇಕು ರೈತರ ಕೈಯಲ್ಲಿ ಲಾಬಿ ಬರಬೇಕು. ಪ್ರತಿ ಸಾವಿರ ಎಕರೆಯ ರೈತರಿಗೆ ಒಂದು ಬೆಲ್ಲ ತಯಾರಿಕಾ ಘಟಕವನ್ನು ಉಚಿತ ನೀಡುವ ಯೋಜನೆ ಇದೆ. ಒಂದು ಸಾವಿರ ಘಟಕಗಳನ್ನು ನೀಡುವ ಯೋಜನೆಯಿದೆ ಇದರಿಂದ ರೈತರಿಗೆ ಟನ್ ಕಬ್ಬಿಗೆ ೬ ಸಾವಿರ ಸಿಗುತ್ತದೆ ಈ ಬಗ್ಗೆ ವ್ಯಾಪಕ ಸಂಶೋಧನೆ ಕೈಗೊಳ್ಳಲಾಗುತ್ತಿದೆ ಆದಷ್ಟು ಬೇಗ ನಿರ್ಧಾರ ಬರುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.

ಅರಭಾವಿ ಕ್ಷೇತ್ರದಲ್ಲಿ ಯುದ್ಧೋಪಾದಿಯಲ್ಲಿ ಕೆಲಸ ನಾವು ಕೈಗೊಂಡಿದ್ದು ಈ ಸಲ ಅರಭಾವಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಆಯ್ಕೆಯಾಗುವುದು ಖಚಿತ. ಶಾಸಕರೇ ಹೇಳಿಕೊಂಡಂತೆ ಬಿಜೆಪಿಯೇ ಭರವಸೆಯಾಗಿದ್ದು ಕೇವಲ ಭರವಸೆ ನೀಡುತ್ತದೆ ಅಷ್ಟೆ ಎಂದು ವ್ಯಂಗ್ಯ ಮಾಡಿದರು.

ಜೆಡಿಎಸ್ ತಾಲೂಕಾಧ್ಯಕ್ಷ ಈರಣ್ಣ ಕೊಣ್ಣೂರ ಮಾತನಾಡಿ, ಜೆಡಿಎಸ್ ಜನರಿಗೆ ಸಾಕಷ್ಟು ಉಪಯುಕ್ತ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದು ಮುಂಬರುವ ಚುನಾವಣೆಗೆ ನಾವೂ ಸಜ್ಜಾಗಿದ್ದೇವೆ. ರಾಷ್ಟ್ರೀಯ ಪಕ್ಷಗಳಿಗಿಂತಲೂ ಜನೋಪಯೋಗಿ ಕಾರ್ಯಕ್ರಮಗಳನ್ನು ಕೊಟ್ಟಿದ್ದು ಜೆಡಿಎಸ್. ಇದಕ್ಕೆ ಪಂಚರತ್ನ ಯೋಜನೆಯೇ ಸಾಕ್ಷಿ. ಆದ್ದರಿಂದ ಕ್ಷೇತ್ರದ ಜನರು ಜೆಡಿಎಸ್ ಗೆ ಮತ್ತೊಮ್ಮೆ ಚೈತನ್ಯ ತುಂಬಲಿದ್ದಾರೆ ಎಂಬ ವಿಶ್ವಾಸ ಇದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸತೀಶ ವಂಟಗೋಡಿ, ಪುರಸಭಾ ಸದಸ್ಯರಾದ ಶಿವು ಸಣ್ಣಕ್ಕಿ, ಆದಮ ತಾಂಬೋಳಿ, ಸತ್ಯವ್ವಾ ಅರಮನಿ, ಕಾರ್ಯಕರ್ತರಾದ ಶಿವಲಿಂಗ ಹಾದಿಮನಿ, ಕಾಶಪ್ಪ ಝಂಡೇಕುರುಬರ ಇದ್ದರು.


ಉಮೇಶ ಬೆಳಕೂಡ, ಮೂಡಲಗಿ

- Advertisement -
- Advertisement -

Latest News

ಸ್ವಾಮಿ ವಿವೇಕಾನಂದರ ಬೆಳಗಾವಿ ಭೇಟಿಯ ಸ್ಮಾರಕ ಭವನ

ಬೆಳಗಾವಿ- ಭಾರತದ ಶೂರ ಸನ್ಯಾಸಿ ಸ್ವಾಮಿ ವಿವೇಕಾನಂದ ಅವರು ಸನ್ ೧೮೯೨ ರಲ್ಲಿ ಕರ್ನಾಟಕದ ಬೆಳಗಾವಿಗೆ ಭೇಟಿ ಕೊಟ್ಟು ಅಕ್ಟೋಬರ್ ೧೬ ರಿಂದ ೨೭ ರ...
- Advertisement -

More Articles Like This

- Advertisement -
close
error: Content is protected !!
Join WhatsApp Group