ದೇಶದಲ್ಲಿ ಡಿಜಿಟಲ್ ಕ್ರಾಂತಿಯ ದ್ಯೋತಕವಾಗಿ ಜಿಯೋ ಕಂಪನಿಯು ಮುಂದಿನ ವರ್ಷದಲ್ಲಿ 5G ನೆಟ್ ವರ್ಕ್ ಸೇವೆಯನ್ನು ಆರಂಭಿಸಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿ. ಮಾಲೀಕ ಮುಖೇಶ್ ಅಂಬಾನಿ ಪ್ರಕಟಿಸಿದ್ದಾರೆ.
ಕಂಪನಿಯ 43 ನೆಯ ವಾರ್ಷಿಕ ಸಭೆಯಲ್ಲಿ ಈ ಘೋಷಣೆ ಹೊರಬಿದ್ದಿದ್ದು ಜಿಯೋದಿಂದ ಈಗಾಗಲೇ 5 ಜಿ ತಂತ್ರಜ್ಞಾನವನ್ನು ಅಭಿವೃದ್ಧಿ ಗೊಳಿಸಲಾಗಿದೆ. ಮುಂದಿನ ವರ್ಷ ಇದನ್ನು ಆರಂಭಿಸುವುದರ ಮೂಲಕ ದೇಶದಲ್ಲಿ ಡಿಜಿಟಲ್ ಕ್ರಾಂತಿಯ ಆರಂಭ ಆಗಲಿದೆ ಎಂದರು.
ಇತ್ತೀಚೆಗೆ ಚೀನಾದ 5 ಜಿ ಸೇವೆಯನ್ನು ಇಂಗ್ಲೆಂಡ್, ಜೆಕ್ ಗಣರಾಜ್ಯ, ಸ್ವೀಡನ್ ಸೇರಿದಂತೆ ಹಲವಾರು ರಾಷ್ಟ್ರಗಳು ನಿಷೇಧಿಸಿ ರುವ ಕಾರಣ ಜಿಯೋ ಈ ತಂತ್ರಜ್ಞಾನವನ್ನು ಜಾರಿಗೆ ತಂದಿದ್ದು ಮೊದಲು ಭಾರತದಲ್ಲಿ ಸೇವೆ ನೀಡಿ ನಂತರ ವಿಶ್ವಾದ್ಯಂತ ಸೇವೆ ನೀಡಲಾಗುವುದು ಎಂದು ಅಂಬಾನಿ ಹೇಳಿದ್ದಾರೆ.
ಭಾರತದಲ್ಲೀಗ 39 ಕೋಟಿ ಜಿಯೋ ಬಳಕೆದಾರರಿದ್ದಾರೆ. ಕಡಿಮೆ ದರದ ಫೋನ್ ಹಾಗೂ ಕಡಿಮೆ ದರದ ಇಂಟರ್ ನೆಟ್ ಸೇವೆಯ ಮೂಲಕ ಜಿಯೋ ಈಗಾಗಲೆ ಮನೆಮಾತಾಗಿದೆ.
ಭಾರತದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ 75 ಸಾವಿರ ಕೋಟಿ ರೂ. ಹೂಡಿಕೆ ಮಾಡುವುದಾಗಿ ಘೋಷಿಸಿದ ಬೆನ್ನಲ್ಲೇ ಗೂಗಲ್ ಸಂಸ್ಥೆಯು ಜಿಯೋದಲ್ಲೂ 33,737 ಕೋಟಿ ರೂ. ಹೂಡುವುದಾಗಿ ಹೇಳಿದೆ ಎಂದೂ ಮುಖೇಶ ಅಂಬಾನಿ ಘೋಷಿಸಿದ್ದಾರೆ.