spot_img
spot_img

ಕೆ.ಎಸ್.ನ. ಬಾಲ್ಯ ಕಳೆದ ಕಿಕ್ಕೇರಿಯ ಮನೆ ಸಂರಕ್ಷಣೆಗೆ ಡಾ.ಭೇರ್ಯ ರಾಮಕುಮಾರ್ ಒತ್ತಾಯ

Must Read

- Advertisement -

ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ ಅವರು ತಮ್ಮ ಪ್ರೇಮಕವನಗಳ ಮೂಲಕ ವಿಶ್ವದಾದ್ಯಂತ ಲಕ್ಷಾಂತರ ಸಾಹಿತ್ಯ ಪ್ರೇಮಿಗಳ ಮನಗೆದ್ದಿದ್ದಾರೆ. ಅವರ ಕವನಗಳು ಜನಪ್ರಿಯ ಗಾಯಕರಿಂದ ಭಾವಗೀತೆಗಳಾಗಿ ಸಂಗೀತ ಲೋಕಕ್ಕೆ ನೀಡಲ್ಪಟ್ಟಿವೆ. ಮೈಸೂರು ಮಲ್ಲಿಗೆ ಖ್ಯಾತಿಯ ಕೆ.ಎಸ್.ನ ಅವರು ಬಾಲ್ಯ ಕಳೆದ ಮನೆಯು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿಯಲ್ಲಿ ಅಳಿವಿನ ಅಂಚಿನಲ್ಲಿದೆ. ಇದು ಅತ್ಯಂತ ನೋವಿನ ಸಂಗತಿ ಎಂದು ಹಿರಿಯ ಸಾಹಿತಿ, ಪತ್ರಕರ್ತ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ನುಡಿದರು.

ಅವರು ಮೈಸೂರು ನಗರದ ಹೊಯ್ಸಳ ಕರ್ನಾಟಕ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಪ್ರೇಮಕವಿ ಕೆ.ಎಸ್.ನ. ಅವರ ೧೮ ನೇ ಸಂಸ್ಮರಣ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ರಾಜ್ಯ ಸರ್ಕಾರ ಕೂಡಲೇ ಕ್ರಮಕೈಗೊಂಡು ಕಿಕ್ಕೇರಿಯಲ್ಲಿರುವ ಪ್ರೇಮಕವಿ ಕೆ.ಎಸ್.ನ ಅವರ ಮನೆಯನ್ನು ಸಂರಕ್ಷಿಸಬೇಕು. ಜೊತೆಗೆ ಆ ಮನೆಯನ್ನು ಕೆ.ಎಸ್.ನ ಅವರ ಹೆಸರಿನಲ್ಲಿ ಸ್ಮಾರಕ ಭವನವಾಗಿ ಪರಿವರ್ತಿಸಬೇಕು. ಆ ಮೂಲಕ ಪ್ರೇಮಕವಿಗೆ ಗೌರವ ಸಲ್ಲಿಸಬೇಕು ಎಂದವರು ಒತ್ತಾಯಿಸಿದರು.
ಕೆ.ಎಸ್.ನರಸಿಂಹಸ್ವಾಮಿಯವರು ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದು, ಬಹಳ ಕಾಲ ಮೈಸೂರಿನಲ್ಲಿ ಸೇವೆ ಸಲ್ಲಿಸಿದರು. ಮೈಸೂರು ಅವರ ಪ್ರೀತಿಯ ನಗರವಾಗಿತ್ತು. ತಮ್ಮ ಪ್ರೇಮಕವಿತೆಗಳ ಸಂಗ್ರಹಕ್ಕೆ ಅವರು ಮೈಸೂರು ಮಲ್ಲಿಗೆ ಎಂದೇ ಹೆಸರು ನೀಡಿದರು. ಜೊತೆಗೆ ಮೈಸೂರಿನಲ್ಲಿ ನಡೆದ ಅರವತ್ತನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಅವರಿಗೆ ಒಲಿದು ಬಂತು. ಈ ಹಿನ್ನೆಲೆಯಲ್ಲಿ ಮೈಸೂರು ನಗರದ ಪ್ರಮುಖ ವೃತ್ತವೊಂದಕ್ಕೆ ಅಥವಾ ಪ್ರಮುಖ ರಸ್ತೆಗೆ ಕೆ.ಎಸ್.ನ. ಅವರ ಹೆಸರು ನಾಮಕರಣ ಮಾಡಬೇಕು. ಆ ಮೂಲಕ ಅವರ ಮೈಸೂರು ಮಲ್ಲಿಗೆ ಕೃತಿಗೆ ಗೌರವ ನೀಡಬೇಕೆಂದು ಭೇರ್ಯ ರಾಮಕುಮಾರ್ ಮೈಸೂರು ಮಹಾನಗರಪಾಲಿಕೆಯನ್ನು ಆಗ್ರಹಪಡಿಸಿದರು.
ಹಿರಿಯ ಸಾಹಿತಿಗಳಾದ ಡಾ.ಜ್ಯೋತಿ ಶಂಕರ್ ಅವರು ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಬದುಕು ಹಾಗೂ ಕೃತಿಗಳ ಬಗ್ಗೆ ಸುದೀರ್ಘ ಉಪನ್ಯಾಸ ನೀಡಿದರು.
ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷರಾದ ನಾರಾಯಣ ಶಾಸ್ತ್ರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕೆ.ಎಸ್.ನ. ಅವರ ವಂಶಸ್ಥರಾದ ಲಕ್ಷ್ಮಿನರಸಿಂಹ ಅವರು ಮಾತನಾಡಿ ಕೆ.ಎಸ್.ನ. ಅವರ ಪೂರ್ವಜರು, ಕೆ.ಎಸ್.ನ ಅವರ ಬದುಕಿನ ಪ್ರಮುಖ ಘಟ್ಟಗಳನ್ನು ವಿವರಿಸಿದರು.
ಸಾಹಿತಿಗಳಾದ ಸಿಂಹ,ಸಂಸ್ಥೆಯ ಕಾರ್ಯದರ್ಶಿಗಳಾದ ನರೇಂದ್ರ,ಶ್ರೀಮತಿ ಮೀರಾ,ಶ್ರೀಮತಿ ಲಕ್ಷ್ಮಿ,ಹೊಯ್ಸಳ ಕರ್ನಾಟಕ ಸಂಘದ ವಿದ್ಯಾರ್ಥಿನಿ ನಿಲಯದ ವಿದ್ಯಾರ್ಥಿನಿಯರು, ಕೆ.ಎಸ್.ನ. ಅವರ ಕುಟುಂಬದವರು,ಕೆ.ಎಸ್.ನ ಅಭಿಮಾನಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.

- Advertisement -
- Advertisement -

Latest News

ಕನ್ನಡಕ್ಕಾಗಿ ಇನ್ನೂ ಹೋರಾಡಬೇಕಾಗಿರುವುದು ವಿಷಾದನೀಯ – ಚಂದ್ರಶೇಖರ ಅಕ್ಕಿ

ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಸಂದರ್ಶನ ಮೂಡಲಗಿ - ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನವು ಇದೇ ದಿ. ೨೩ , ೨೪...
- Advertisement -

More Articles Like This

- Advertisement -
close
error: Content is protected !!
Join WhatsApp Group