ಆರೋಗ್ಯಕ್ಕೆ ಮನೆ ಅಂಗಳದಲ್ಲಿ ಇರುವ ಕಳೆ ಇದು ಆರೋಗ್ಯಕ್ಕೆ ಸಂಜೀವಿನಿ ಕಾಕೆ ಸೊಪ್ಪು: ಅಡಿಗೆ ಸವಿರುಚಿ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು.ಸೊಪ್ಪಿನ ಚಟ್ಣಿ ಬೇರೆ ತರಕಾರಿಯೊಂದಿಗೆ ಕಾಯಿಯಿಂದ ಪಲ್ಯ ಸಾಂಬಾರು ರಾಯತಾ ಮಾಡಬಹುದು. ಕಾಯಿಯನ್ನು ತುಪ್ಪದಲ್ಲಿ ಹುರಿದು ಮಾಡಿದ ಚಟ್ನಿ ತುಂಬಾ ರುಚಿ. ಹೂವು ಚಟ್ನಿಗೆ ಉಪಯೋಗಿಸಬಹುದು. ಇದರ ಪಂಚಾಂಗವು ಉಪಯೋಗ ಔಷದಿಯಾಗಿ. ಆದರೆ ಸೊಪ್ಪು ಕಾಯಿ ಹೂವು ಹಣ್ಣು ಇವುಗಳು ಹೆಚ್ಚು ಬಳಕೆಯಲ್ಲಿದೆ.
- ಎರಡು ಚಮಚ ಸೊಪ್ಪಿನ ರಸವನ್ನು ದೊಡ್ಡವರು ಚಿಕ್ಕವರಾದರೆ ಒಂದು ಚಮಚ ಅಷ್ಟೇ ಪ್ರಮಾಣದಲ್ಲಿ ಜೇನುತುಪ್ಪವನ್ನು ಸೇರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.ವಾರಕ್ಕೆ ಒಂದು ಬಾರಿ ಸೇವಿಸಿದರು ಸಾಕು ಆರೋಗ್ಯವಂತರಾಗಬಹುದು.
- ಅಡಿಗೆಯಲ್ಲಿ ಮತ್ತು ಔಷಧಿಯಲ್ಲಿ ಸೊಪ್ಪಿನ ಬಳಕೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
- ಸೊಪ್ಪಿನ ರಸದೊಂದಿಗೆ ಒಂದು ಕಾಳು ಮೆಣಸು ಹಾಕಿ ಜಗಿದು ತಿನ್ನುವುದರಿಂದ ಕಫ ನಿವಾರಣೆ ಆಗುತ್ತದೆ.
- ದೇಸಿ ಹಸುವಿನ ದಾರೋಷ್ಣ ಹಾಲಿನಲ್ಲಿ (ಆಗ ತಾನೇ ಕರೆದಿರುವುದು) ಸೊಪ್ಪಿನ ರಸ ಸೇರಿಸಿ ಸೇವಿಸುವುದರಿಂದ ಪಿತ್ತ ನಿವಾರಣೆ ಆಗುತ್ತದೆ.
- ಜೀರಿಗೆ ಕಷಾಯದೊಂದಿಗೆ ಸೊಪ್ಪನ್ನು ಕುದಿಸಿ ಕುಡಿಯುವುದರಿಂದ ಪಚನ ಕ್ರಿಯೆಯನ್ನು ಹೆಚ್ಚಿಸುತ್ತದೆ.
- ಸಹಜವಾಗಿ ಬೆಳೆದ ಹಣ್ಣು ಗಳು ರುಚಿ ಮತ್ತು ನಂಜು ನಿವಾರಕ ವಾಗಿದೆ. ಕುರು ಏಳುವುದನ್ನು ತಡೆಯಬಹುದು.
- ಮಕ್ಕಳಿಗೆ ಸೊಪ್ಪಿನ ರಸವನ್ನು ವಾರಕ್ಕೆ ಒಂದು ಬಾರಿ ದೇಹದ ಮೇಲೆ ಸವರಿ ಒಂದು ಘಂಟೆ ಬಿಟ್ಟು ಸ್ನಾನ ಮಾಡಿದರೆ ಚರ್ಮ ಮೃದುವಾಗಿ ಹೊಳಪು ಪಡೆಯುತ್ತದೆ ಮತ್ತು ಇದರಿಂದಾಗಿ ಚರ್ಮರೋಗ ಬರುವುದಿಲ್ಲ.
- ಹಣ್ಣನ್ನು ತಿನ್ನುವುದರಿಂದ ಜ್ವರ ದಿಂದ ಹೋದ ಬಾಯಿ ರುಚಿ ಮತ್ತೆ ಬರುತ್ತದೆ.
- ನಿಯಮಿತವಾಗಿ 48 ದಿನ ಸೊಪ್ಪಿನ ರಸ ಉಪಯೋಗಿಸುವುದರಿಂದ ಮಲಬದ್ಧತೆ ನಿವಾರಣೆ ಆಗುತ್ತದೆ.
- ಶುದ್ಧೀಕರಿಸಿದ ಸೊಪ್ಪಿನ ರಸವನ್ನು ಕಣ್ಣಿಗೆ ಬಿಡುವುದರಿಂದ ಕಣ್ಣಿನ ರೋಗಗಳು ಗುಣವಾಗುತ್ತದೆ.
- ಆಹಾರದಲ್ಲಿ ಹೆಚ್ಚು ಉಪಯೋಗಿಸುವುದರಿಂದ ವಿಟಮಿನ್ ಕೊರತೆ ನಿವಾರಣೆಯಾಗುತ್ತದೆ.
- ಸೊಪ್ಪಿನ ರಸಕ್ಕೆ ಕಲ್ಲು ಸಕ್ಕರೆ ಮತ್ತೆ ಆಗ ತಾನೇ ಕರೆದ ದೇಸಿ ಹಸುವಿನ ಹಾಲು ಸೇರಿಸಿ ಕುಡಿಯುವುದರಿಂದ ಕಾಮಾಲೆ ಗುಣವಾಗುತ್ತದೆ.
ಸುಮನಾ ಮಳಲಗದ್ದೆ 9980182883