spot_img
spot_img

ಕನ್ನಡ ಬಳಕೆ ಹಕ್ಕೊತ್ತಾಯದ ಫಲಶ್ರುತಿ ಪರಿಶೀಲನೆ ಮಾಡಿದ ಕನ್ನಡ ಜಾಗೃತಿ ಸಮಿತಿ

Must Read

spot_img
- Advertisement -

ಕನ್ನಡ ಜಾಗೃತಿ ಸಮಿತಿ , ಮೈಸೂರು ರಾಜ್ಯ ಸರ್ಕಾರದ ಕನ್ನಡ ಕಾಯಕ ವರ್ಷದ ಅಂಗವಾಗಿ ಮೈಸೂರು ಕನ್ನಡ ಜಾಗೃತಿ ಇದುವರೆಗೆ ನಡೆಸಿದ ಬ್ಯಾಂಕ್ ಗಳಲ್ಲಿ ಕನ್ನಡ ಬಳಕೆ ಅಭಿಯಾನ ಹಾಗೂ ನಗರದ ವಿವಿಧ ಬ್ಯಾಂಕ್ ಗಳಿಗೆ ಭೇಟಿ ನೀಡಲಾಯಿತು.

ಮೂರು ದಿನಗಳ ಕಾಲ ಕೇಂದ್ರ/ರಾಜ್ಯ ಸರ್ಕಾರದ ಕಛೇರಿ/ಸಂಸ್ಥೆಗಳ ಮುಂಭಾಗದಲ್ಲಿ ಹಾಗೂ ಅಂಗಡಿ ಮುಂಗಟ್ಟುಗಳಲ್ಲಿ ಶುದ್ಧ ಕನ್ನಡ ನಾಮಫಲಕ ಜಾಗೃತಿ ಅಭಿಯಾನ ಹಾಗೂ ಮೈಸೂರಿನ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಭೇಟಿ ನೀಡಿ ಐ ಲವ್ ಮೈಸೂರು ನಾಮಫಲಕದಲ್ಲಿ ಕನ್ನಡ ಬಳಕೆಗೆ ಹಕ್ಕೊತ್ತಾಯ ಹಾಗೂ ವಿಮಾನ ನಿಲ್ದಾಣದಲ್ಲಿ ಕನ್ನಡ ಬಳಕೆ ಬಗ್ಗೆ ಪರಿಶೀಲನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಅಧೀನ ನ್ಯಾಯಾಲಯಗಳಲ್ಲಿ ಕನ್ನಡ ಬಳಕೆ ಅಭಿಯಾನ, ಜಿಲ್ಲೆಗಳ ನ್ಯಾಯಾಲಯ ಸಂಕೀರ್ಣಗಳಿಗೆ ಭೇಟಿ, ಸಂಪೂರ್ಣ ಕನ್ನಡ ಅನುಷ್ಠಾನದ ವಾದ-ಪ್ರತಿವಾದ ಮಂಡನೆ ಮಾಡಲಾಯಿತು ಹಾಗೂ ಮಾಧ್ಯಮಗಳಲ್ಲಿ ಸರಿಗನ್ನಡ ಬಳಕೆ ಅಭಿಯಾನ, ಡಾ ರಾಜ್ ಅಭಿಮಾನಿ ದಿನ ಗ್ರಾಹಕರ ಸೇವೆಯಲ್ಲಿ ಕನ್ನಡ ಬಳಕೆ ಹಕ್ಕೊತ್ತಾಯ, ನಗರಪಾಲಿಕೆ ಕಚೇರಿಗೆ ಭೇಟಿ ಕನ್ನಡ ಬಳಕೆಯ ಪರಿಶೀಲನೆ, ನಗರ ಸಾರಿಗೆ ಬಸ್ ನಿಲ್ದಾಣ ಹಾಗೂ ರಾಜ್ಯ ರಸ್ತೆ ಸಾರಿಗೆ ವಿಭಾಗೀಯ ಕಚೇರಿ ಹಾಗೂ ತಂಗು ದಾಣದಲ್ಲಿ ಕನ್ನಡದಲ್ಲಿನ ಗೋಡೆ ಬರಹಗಳನ್ನು ಅಳವಡಿಸಿದ ಅಭಿಯಾನ ನಡೆಸಲಾಯಿತು.

- Advertisement -

‘ರಾಷ್ಟ್ರೀಯ ವೈದ್ಯರ ದಿನಾಚರಣೆಯಾದ’ ಎಂದು ವೈದ್ಯಕೀಯ ವಲಯದಲ್ಲಿ ಕನ್ನಡ ಬಳಕೆ ಜಾಗೃತಿ ಅಭಿಯಾನದ ಕುರಿತು ವಿವರವಾದ ವರದಿಯನ್ನು ಬೆಂಗಳೂರಿನಲ್ಲಿ ಇಂದು ಗಾಂಧೀಭವನದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆದ ಕನ್ನಡ ಜಾಗೃತಿ ಸಮಿತಿ ಸದಸ್ಯರ ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅದ್ಯಕ್ಷರಾದ ಸಿ.ಎಸ್.ನಾಗಾಭರಣ ಅವರಿಗೆ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸದಸ್ಯರಾದ ಡಾ.ಗುಬ್ಬಿಗೂಡು ರಮೇಶ್ ಅವರಿಗೆ ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ. ಭೇರ್ಯ ರಾಮಕುಮಾರ್ ಎ.ಎಸ್ ನಾಗರಾಜ್, ಅರವಿಂದ ಶರ್ಮ , ಸಾತನೂರು ದೇವರಾಜ್ , ಸೌಗಂಧಿಕಾ ಜೋಯಿಸ್, ಎನ್.ಜಿ ಗಿರೀಶ್ ,ಜೊತೆಗಿದ್ದರು

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group