ಕನ್ನಡವೆಂಬುದು ಕೇವಲ ಭಾಷೆಯಲ್ಲ, ಭಾವನೆ – ಬದುಕು ಸಂಸ್ಥೆಯ ನಿರ್ದೇಶಕರು ಇ. ಧನಂಜಯ

Must Read

ಸೇವಾಯಾನ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಮೈಸೂರಿನ ವಿಜಯನಗರ ನಾಲ್ಕನೆಯ ಹಂತದಲ್ಲಿರುವ ಸೇವಾಯಾನ ಸಂಸ್ಥೆಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಬುಧವಾರ (೦೩-೧೨-೨೦೨೫) ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿದ ಬದುಕು ಸಂಸ್ಥೆಯ ನಿರ್ದೇಶಕರೂ ಹಾಗೂ ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಸದಸ್ಯರೂ ಆದ ಇ.ಧನಂಜಯರವರು ಮಾತನಾಡಿ ‘ಕನ್ನಡವೆಂಬುದು ಕೇವಲ ಭಾಷೆಯಲ್ಲ, ಭಾವನೆ’ ಅದನ್ನು ಸ್ಪಷ್ಟವಾಗಿ ಮಾತನಾಡುವುದನ್ನು ರೂಡಿಸಿಕೊಳ್ಳುವುದು, ಕಿರಿಯರಿಗೆ ಅದರ ಮಹತ್ವ ಹಾಗೂ ಉಚ್ಚರಿಸುವ ವಿಧಾನಗಳನ್ನು ತಿಳಿಸಿಕೊಡುವುದು ಹಿರಿಯರಾದ ನಮ್ಮ ಕರ್ತವ್ಯ ಎಂದ ಅವರು ಕನ್ನಡ ಭಾಷೆಗೆ ತನ್ನದೇಯಾದ ಇತಿಹಾಸ ಮತ್ತು ಪರಂಪರೆ ಇದೆ. ಇದನ್ನು ಉಳಿಸಿ ಬೆಳೆಸುವಲ್ಲಿ ಕನ್ನಡಿಗರಾದ ನಾವು ಒಗ್ಗಟ್ಟಿನಿಂದ ಕೈಜೋಡಿಸಬೇಕಾಗಿದೆ. ಇಂದು ಸೇವಾಯಾನ ಸಂಸ್ಥೆಯ ಹಿರಿಯರಿಂದ ಕನ್ನಡ ರಾಜ್ಯೋತ್ಸವ ಆಚರಿಸಲ್ಪಡುತ್ತಿರುವುದು ಹರ್ಷ ಹಾಗೂ ಸಂತೋಷದ ಸಂಗತಿ ಎಂದು ಅಭಿಪ್ರಾಯಿಸಿದರು.

ಹೆಬ್ಬಾಳು-ವಿಜಯನಗರ ಬಸವ ಸಮಿತಿಯ ಉಪಾಧ್ಯಕ್ಷರಾದ ಶುಭಾಮಣಿಯವರು ಮಾತನಾಡಿ, ಕನ್ನಡ ರಾಜ್ಯೋತ್ಸವವು ನಿರಂತರವಾಗಿ ಪ್ರತಿನಿತ್ಯವೂ ಆಚರಿಸುವಂತಾಗಬೇಕು ಬರೀ ನವೆಂಬರ್ ತಿಂಗಳ ಉತ್ಸವವಾಗಬಾರದು, ನಿತ್ಯೋತ್ಸವವಾದರೆ ಭಾಷೆಯು ಚಲನಶೀಲವಾಗಿರುತ್ತದೆ ಎಂದು ತಿಳಿಸಿದ ಅವರು, ಸೇವಾಯಾನ ವೃದ್ಧಾಶ್ರಮ ನಮಗೆಲ್ಲಾ ಒಂದು ಕೂಡುಕುಟುಂಬದಂತೆ ಭಾಸವಾಗುತ್ತದೆ. ಇಲ್ಲಿನ ಹಿರಿಯರ ಉತ್ಸಾಹ ನಮಗೆಲ್ಲರಿಗೂ ಮಾದರಿ ಎಂದರು.

ಸೇವಾಯಾನ ಸಂಸ್ಥೆಯ ಅಧ್ಯಕ್ಷರಾದ ಪ್ರಭಾಮಣಿಯವರು ಅಧ್ಯಕ್ಷತೆ ವಹಿಸಿ ಮಾತನಾಡಿ ಕನ್ನಡ ನಮ್ಮ ತಾಯಿಭಾಷೆ, ನಮ್ಮ ಭಾವನೆಗಳನ್ನು, ಭಾಂಧವ್ಯವನ್ನು ಇಲ್ಲಿ ಬೆಸೆದಿರುವ ಸೇತುವೆ. ಒಳ್ಳೆಯ ಮಾತುಗಳನ್ನಾಡುವ ಮೂಲಕ, ಉತ್ತಮ ವಿಚಾರಗಳನ್ನು ಚರ್ಚಿಸುವ ಮೂಲಕ ಅದರ ಮೌಲ್ಯವನ್ನು, ಘನತೆಯನ್ನು ಹೆಚ್ಚಿಸಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಸಂಸ್ಥೆಯ ಹಿರಿಯರಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಸೇವಾಯಾನದ ಅಶ್ರಿತರಾದ ಭಾಗ್ಯವತಿ ನಿರೂಪಿಸಿದರೆ, ವಿಜಯರವರು ಸ್ವಾಗತಿಸಿದರು, ಸುನಂದ ಹಾಗೂ ಕಲ್ಪನಾರವರು ಕನ್ನಡ ನಾಡು-ನುಡಿ ಭಾಷೆಯ ಬಗ್ಗೆ ವಿವರವಾಗಿ ಮಾತನಾಡಿದರೆ, ಹಿರಿಯರೆಲ್ಲರೂ ಕನ್ನಡದ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು ಹಾಗೂ ಗೀತಾಮಣಿಯವರು ವಂದಿಸಿದರು.

Latest News

ಸೈಡ್ ನೀಡಲಿಲ್ಲ ಎಂಬ ಕಾರಣಕ್ಕೆ ಬಸ್ ಚಾಲಕನನ್ನು ಥಳಿಸಿದ ಬೈಕ್ ಸವಾರ

ಬೀದರ - ಸರ್ಕಾರಿ ಬಸ್ ಚಾಲಕ ಸೈಡ್ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕನನ್ನು ಬಸ್ ನಿಂದ ಕೆಳಗೆ ಇಳಿಸಿ ಬೈಕ್ ಸವಾರ ಹಲ್ಲೆ...

More Articles Like This

error: Content is protected !!
Join WhatsApp Group