ಬೆಳಗಾವಿ – ಸಂಘ ಎಂದರೆ ಗುಂಪು ಸಮೂಹ ಒಕ್ಕೂಟ ಸಮಿತಿ ಸಂಸ್ಥೆ ಸಂಘಟನೆ ಎಂದರೆ ತಾಗುವಿಕೆ ಕೂಡಿರುವುದು ಸೇರಿದ್ದು ಸಂಘಟನೆ ಎಂದರೆ ಹೊಂದಿಸುವಿಕೆ ಜೋಡಿಸುವಿಕೆ ಸಂಯೋಗ ಸಂಘಟಿಸು ಎಂದರೆ ಸೇರು ಗುಂಪುಗೂಡು ಕೂಡುವಂತೆ ಮಾಡು ನಾವು ನೀವೆಲ್ಲರೂ ಸಮಾಜದ ಒಳಿತಿಗಾಗಿ ಒಳ್ಳೆಯ ಕಾಯ೯ ಮಾಡೋಣ ನಿಸ್ವಾರ್ಥ ಸೇವೆ ಸಲ್ಲಿಸಲು ಸದಾ ಸಿದ್ದರಿರೋಣ ಎಂದು ಲಿಂಗಾಯತ ಸಂಘಟನೆ ಡಾ ಫ ಗು ಹಳಕಟ್ಟಿ ಭವನ ಮಹಾಂತೇಶ ನಗರ ಬೆಳಗಾವಿ ಯಲ್ಲಿ ವಾರದ ಪ್ರಾಥ೯ನೆ ಹಾಗೂ ಉಪನ್ಯಾಸ ಕಾಯ೯ಕ್ರಮದಲ್ಲಿ ದಿ. 12 ರಂದು ಮಹಾಂತೇಶ ಪುರಾಣಿಕ ಮಠ ಉಪನ್ಯಾಸ ನೀಡಿದರು.
ಆರಂಭದಲ್ಲಿ ವಿ ಕೆ ಪಾಟೀಲ ಜೆ ಪಿ ಜವಣಿ ಸದಾಶಿವ ದೇವರಮನಿ ಮಹಾದೇವಿ ಅರಳಿ ಆನಂದ ಕಕಿ೯ ಶರಣ ಶರಣೆಯರು ವಚನ ಪ್ರಾರ್ಥನೆ ಮಾಡಿದರು. ಅಧ್ಯಕ್ಷರಾದ ಈರಣ್ಣಾ ದೇಯಣ್ಣವರ ಅವರು ದೀಪಾವಳಿ ಇದ್ದರೂ ಇಷ್ಟು ಜನ ಬಂದದ್ದು ಖುಷಿ ನೀಡಿತು ಶರಣರ ಬದುಕಿನಲ್ಲಿ ದುಃಖ ದುಮ್ಮಾನಗಳ ಕತ್ತಲೆಯನ್ನು ಬೇಪ೯ಡಿಸಿ ಸುಖ ಸಮೃದ್ಧಿಯ ಬೆಳಕನ್ನು ಹರಿಸುವ ನಾಡ ಹಬ್ಬ ದೀಪಾವಳಿ ಕತ್ತಲಿನಿಂದ ಬೆಳಕಿನೆಡೆಗೆ ಸಾಗೋಣ ಎಂದು ತಿಳಿಸಿದರು ಈ ದಿನದಂದು ಜನಿಸಿದವರ ಮಕ್ಕಳಿಗೆ ಹೂಹಾರ ಹಾಕಿ ಸತ್ಕರಿಸಿದರು.
ಶಿವಾನಂದ ನಾಯಕ ರೂಡಬಸನ್ನವರ ತಿಗಡಿ ಶಿವಾನಂದ ಲಾಳಸಂಗಿ ಮಹಾದೇವಿ ಅರಳಿ ನರಗುಂದ ಗುರುಮಾತೆ ಕಮಲಾ ಗಣಾಚಾರಿ ಸದಾಶಿವ ದೇವರಮನಿ ಕ ಸಾ ಪ ಜಿಲ್ಲಾ ಕಾಯ೯ದಶಿ೯ ಎಂ ವೈ ಮೆಣಸಿನಕಾಯಿ ಶಶಿಭೂಷಣ ಪಾಟೀಲ ಶಂಕರ ಗುಡಸ ಆನಂದ ಕಕಿ೯ ಇತರರು ಉಪಸ್ಥಿತರಿದ್ದರು ಬಸವ ರಾಜ ಬಿಜ್ಜರಗಿ ಪ್ರಸಾದ ಸೇವೆ ಸಲ್ಲಿಸಿದರು.
ಈ ದಿನ ಲಿoಗೈಕ್ಯರಾದ ಚಿoಚಣಿಯ ಸಿದ್ದ ಸo ಸ್ಥಾನ ಮಠದ ಅಲ್ಲಮಪ್ರಭು ಮಹಾಸ್ವಾಮಿಗಳಿಗೆ ಶೃಂದಾಜಲಿ ಸಲ್ಲಿಸಲಾಯಿತು ಸುರೇಶ ನರಗುಂದ ನಿರೂಪಿಸಿದರು ಸಂಗಮೇಶ ಅರಳಿ ವಂದಿಸಿದರು