spot_img
spot_img

ಹಡಪದ ಅಪ್ಪಣ್ಣನವರ ಓಣಿಯಲ್ಲಿ ಸ್ವ ಸಹಾಯ ಸಂಘ ಆರಂಭ

Must Read

- Advertisement -

ಸಿಂದಗಿ: ಮಹಿಳೆಯರು ಸದಾ ತಮ್ಮ ಕುಟುಂಬವನ್ನುಪಾಲಿಸುವದರೊಂದಿಗೆ  ಸಮಾಜವನ್ನು ಕಟ್ಟುವ ರಾಷ್ಟ್ರ ನಿರ್ಮಾಣದ ಹಿಂದಿನ ಅಗೋಚರ ಶಕ್ತಿ ಯಾವುದೆಂದರೆ ಅದು ಆ ಸಮಾಜ, ಕುಟುಂಬದ ಮಹಿಳೆಯೇ ಆಗಿರುತ್ತಾಳೆ ಎಂದು ಡಿ ಸಿ ಸಿ ಬ್ಯಾಂಕಿನ  ವಲಯದ ಮೇಲ್ವಚಾರಕಿ ಕವಿತಾ ಕಲಶೆಟ್ಟಿ ಹೇಳಿದರು.

ನಗರದ ಹೊರವಲಯದ ಶ್ರೀ ಹಡಪದ ಅಪ್ಪಣ್ಣನವರ ಲೇಔಟ್ ಹತ್ತಿರದಲ್ಲಿರುವ ವಜ್ರ ಹನುಮಾನ ದೇವಾಲಯದಲ್ಲಿ  ವಿವಿಧ ಮಹಿಳಾ ಸ್ವ ಸಹಾಯ ಸಂಘಗಳು ಹಮ್ಮಿಕೊಂಡ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿ, ಮಹಿಳೆಯರು 

ಮಕ್ಕಳ ಪಾಲನೆ ಪೋಷಣೆಯಲ್ಲಿ ತನ್ನತನವನ್ನು ಮರೆತು ಸಮಾಜಮುಖಿಯಾಗಿ  ಸ್ವ ಸಹಾಯ ಸಂಘಗಳಲ್ಲಿ  ತೊಡಗಿ ಕೊಂಡಿರುವ ಕಾರ್ಯ ಶ್ಲಾಘನೀಯ ಮಹಿಳೆಯರು ಸ್ವ ಸಹಾಯ ಸಂಘವು ಕ್ರಿಯಾಶೀಲರಾಗಿ ಉತ್ತಮ ಚಟುವಟಿಕೆಯಲ್ಲಿ ನಿರಂತರವಾಗಿ ಭಾಗವಹಿಸಬೇಕು ಎಂದರು.

- Advertisement -

ಶಿಕ್ಷಕ ಸಾಹಿತಿ ಬಸವರಾಜ ಅಗಸರ ಮಾತನಾಡಿ, ಮಹಿಳೆಯರು ಸ್ವ ಸಹಾಯ ಸಂಘದ ಮೂಲಕ  ಇಂದು ಬ್ಯಾಂಕಿಗೆ ಹೋಗಿ ವಾರದ ಉಳಿತಾಯದ ಹಣವನ್ನು ಪಾವತಿಸುವುದು, ಸಾಲ ಪಡೆಯುವುದು, ತಾನು ಪಾವತಿಸಬೇಕಾದ ಬಡ್ಡಿಯ ಕುರಿತು ಲೆಕ್ಕಾಚಾರ ಹಾಕುವ ಮಟ್ಟಕ್ಕೆ ಬೆಳೆದಿದ್ದಾಳೆ ಎಂದರೆ ಅದಕ್ಕೆ ಮುಖ್ಯ ಕಾರಣ ಇಂದು ಮನೆ ಮನೆಗಳನ್ನು ತಲುಪಿರುವ ಸ್ವ ಸಹಾಯ ಗುಂಪುಗಳು. ಅಡುಗೆ ಮನೆಗಷ್ಟೇ ತನ್ನ ವ್ಯಾಪ್ತಿಗೆ ಸೀಮಿತವಾಗದೆ   ಮನೆ ಹೊಸ್ತಿಲು ದಾಟಿ ಮನೆಯಂಗಳಕ್ಕೆ ಕಾಲಿರಿಸಿದ್ದಾಳೆ. ತನ್ನ ಮನೋಬಲ, ಆತ್ಮ ಸ್ಥೈರ್ಯ ಗಳನ್ನು ವಿಸ್ತರಿಸಿಕೊಂಡು, ಸಾಂವಿಧಾನಿಕ ಸಮಾನತೆಯನ್ನು  ಸಾಧಿಸುವೆಡೆಗೆ ಮುನ್ನುಡಿ ಬರೆದಿದ್ದಾಳೆ ಎಂದರು.

ಶಿವಶರಣ ಹಡಪದ ಮಾತನಾಡಿ, ಸ್ವಸಹಾಯ ಸಂಘಗಳ ಧ್ಯೇಯ – ಉದ್ದೇಶಗಳು, ಬಡತನ ನಿರ್ಮೂಲನೆಗೊಳಿಸಿ, ಬಡವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು.

ಮಹಿಳೆಯರಲ್ಲಿ ನಾಯಕತ್ವ ಗುಣವನ್ನು ಬೆಳೆಸುವುದು.

- Advertisement -

ಪರಸ್ಪರ ಸಹಕಾರ ಹಸ್ತವನ್ನು ಚಾಚುತ್ತ, ಒಬ್ಬರ ಬಾಳಿಗೆ ಇನ್ನೊಬ್ಬರು ನೆರವಾಗುವುದು.ವ್ಯಕ್ತಿಯ ವ್ಯಕ್ತಿತ್ವವನ್ನು  ಅರಳಿಸಿ, ಸೃಜನಶೀಲತೆಯನ್ನು ಬೆಳೆಸುವುದು ತುಂಬಾ ಮುಖ್ಯವಾಗಿದೆ ಎಂದರು.

ಸಾನಿಧ್ಯ ವಹಿಸಿ ಗುರುದೇವಾಶ್ರಮದ ಶಾಂತಗಂಗಾಧರ ಸ್ವಾಮೀಜಿ ಮಾತನಾಡಿ, ಸ್ವ ಸಹಾಯ ಸಂಘಗಳ ಮೂಲ ಉದ್ದೇಶವಾದ ಮಾನವ ಸಂಪನ್ಮೂಲ ಬಳಕೆ ಹಾಗೂ ಮಹಿಳಾ ವಿಕಾಸದ ಧ್ಯೇಯ ಸಂಪೂರ್ಣ ಸಾಧಿತವಾದರೆ  ಸ್ವಸ್ಥ ಸಮಾಜ ನಿರ್ಮಾಣವಾಗಲು ಸಂಘ ಸಹಕಾರಿಯಾಗಿವೆ ಎಂದರು.

ಸಮಾರಂಭದಲ್ಲಿ ವಿಶ್ರಾಂತ ಸೈನಿಕರಾದ ಉದಂಡಪ್ಪ ಬಗಲಿ ಹಾಗೂ ಜಾಹೀರ ಪಟೇಲ ಬ್ಯಾಕೋಡ ಹಾಗೂ ಶ್ರೀಮತಿ ಚಂದ್ರಕಲಾ ಮಾಗಣಗೇರಿ ಅವರಿಗೆ ಅದ್ದುರಿಯಾಗಿ ಸನ್ಮಾನಿಸಿ ಗೌರವಿಸಿದರು.

ವೇದಿಕೆ ಮೇಲೆ ಪರಮಣ್ಣ ಶರಣಪ್ಪ ಹಡಪದ. ಅನುಸುಬಾಯಿ ಎಂ ಹಡಪದ,ಬಸವರಾಜ ಶಿರಕನಳ್ಳಿ, ಶ್ರೀಮತಿ ನೀಲಮ್ಮ ಬ ಹಡಪದ,  ಶ್ರೀಮತಿ ಶರಣಮ್ಮ ಮ ಹಡಪದ, ಶ್ರೀಮತಿ ಮಾದೇವಿ ಗು ಹಡಪದ( ಜಂಬಿಗಿ), ಶ್ರೀಮತಿ ಸುಧಾ ಎಂ ಹಡಪದ,ಶ್ರೀಮತಿ ಲಕ್ಷ್ಮೀ ವ್ಹಿ.ಹೊಸಮನಿ, ಶ್ರೀಮತಿ ಅಶ್ವಿನಿ ಆರ್ ಹಡಪದ, ನೀಲಮ್ಮ ಸಿ ಹಡಪದ, ನಿರ್ಮಲ ಶಿವಶರಣ ಹಡಪದ,ಶಂಕ್ರಮ್ಮ ಹಡಪದ, ವಿಜಯಲಕ್ಷ್ಮೀ ಆರ್ ಸಿಂದಗಿ,  ವೈಶಾಲಿ ಉಮೇಶ  ಹಡಪದ, ರೂಪಾ ಹಡಪದ, ಚನ್ನಮ್ಮ ಹಡಪದ ಇದ್ದರು.

ಶಿವಶರಣ ಸಿಂದಗಿ ಸ್ವಾಗತಿಸಿ ವಂದಿಸಿದರು.

- Advertisement -
- Advertisement -

Latest News

ಸಿಂದಗಿ ಅಧ್ಯಕ್ಷರಾಗಿ ಶಾಂತವೀರ, ಉಪಾಧ್ಯಕ್ಷರಾಗಿ ರಾಜಣ್ಣಿ ಆಯ್ಕೆ

ಸಿಂದಗಿ; ಪಟ್ಟಣದ ಪುರಸಭೆಯ ಅಧ್ಯಕ್ಷ, ಉಪಾದ್ಯಕ್ಷರ ಅವಧಿ ಮುಗಿದು ಹಲವು ವರ್ಷಗಳು ಕಳೆದಿತ್ತು ಅದು ಅ. ೨೮ ರಂದು ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಿ ಸೆ.೯ ದಿನಾಂಕ...
- Advertisement -

More Articles Like This

- Advertisement -
close
error: Content is protected !!
Join WhatsApp Group