Homeದೇಶ/ವಿದೇಶಕಾರ್ಯಕರ್ತನ ಪಾದಮುಟ್ಟಿ ಪ್ರತಿ ನಮಸ್ಕಾರ ಮಾಡಿದ ನರೇಂದ್ರ ಮೋದಿ

ಕಾರ್ಯಕರ್ತನ ಪಾದಮುಟ್ಟಿ ಪ್ರತಿ ನಮಸ್ಕಾರ ಮಾಡಿದ ನರೇಂದ್ರ ಮೋದಿ

ಕೋಲ್ಕತ್ತಾ – ಇದು ಮೋದಿಯವರಿಂದ ಮಾತ್ರ ಸಾಧ್ಯವೇನೋ. ರಾಜಕಾರಣದಲ್ಲಿ ಸ್ವಲ್ಪ ಮೇಲೆ ಬಂದರೂ ಸಾಕು ಕಾರ್ಯಕರ್ತರೆಂದರೆ ತಮ್ಮ ಗುಲಾಮರೆಂದು ತಿಳಿದುಕೊಂಡು ಅವರಿಂದ ಸಾಷ್ಟಾಂಗ ಮಾಡಿಸಿಕೊಳ್ಳುವ ನಾಯಕರಿರುತ್ತಾರೆ. ಹಾಗೆಯೇ ತಮ್ಮ ನಾಯಕನಿಗೆ ನಿಷ್ಠೆ ತೋರಿಸಲು ಆತ ತಮ್ಮ ಸೇವಕನೆಂಬುದನ್ನೂ ನೋಡದಢ ಆತನ ಕಾಲಿಗೆ ಬೀಳುವ ಗುಲಾಮ ಕಾರ್ಯಕರ್ತರೂ ಇದ್ದಾರೆ.

ಆದರೆ ಪ್ರಧಾನ ಮಂತ್ರಿಯಂಥ ಸ್ಥಾನದಲ್ಲಿದ್ದರೂ ತಮ್ಮ ಕಾಲಿಗೆ ಬೀಳಲು ಬಂದ ಕಾರ್ಯಕರ್ತನೊಬ್ಬನಿಗೆ ಪ್ರತಿಯಾಗಿ ಅತಿ ವಿನಯದಿಂದ ನಮಸ್ಕಾರ ಮಾಡಿದ ನರೇಂದ್ರ ಮೋದಿಯವರು ತಮಗೂ ಕಾರ್ಯಕರ್ತರಿಗೂ ಮೇಲು ಕೀಳೆಂಬ ಭಾವನೆ ಇರಬಾರದು ಎಂಬುದನ್ನು ಪ್ರಕಟಪಡಿಸಿದ್ದಾರೆ.

ಪಶ್ಚಿಮ ಬಂಗಾಳದ ಕಾಂತಿ ಎಂಬಲ್ಲಿ ಚುನಾವಣಾ ಪ್ರಚಾರದ ಸಭೆಯಲ್ಲಿ ಕಾರ್ಯಕರ್ತನೊಬ್ಬ ಮೋದಿಯವರ ಕಾಲಿಗೆ ಬೀಳಲು ಬಂದ. ತಕ್ಷಣವೇ ತಮ್ಮ ಸ್ಥಾನದಿಂದ ಮೇಲೆದ್ದ ಮೋದಿಯವರು ಆತನಿಗಿಂತಲೂ ಹೆಚ್ಚೇ ಕೆಳಗೆ ಬಾಗಿ ಅತ್ಯಂತ ವಿನೀತರಾಗಿ ಪ್ರತಿ ನಮಸ್ಕಾರ ಮಾಡಿದ್ದು ಗಮನಾರ್ಹವಾಗಿತ್ತು.

ಮೋದಿಯವರು ಕಾರ್ಯಕರ್ತನಿಗೆ ನಮಸ್ಕರಿಸಿದ ವಿಡಿಯೋ ವೈರಲ್ ಆಗಿದ್ದು ಬಿಜೆಪಿ ಪಕ್ಷ ಕೂಡ ಅದನ್ನು ಟ್ವಿಟರ್ ನಲ್ಲಿ ಹಂಚಿಕೊಂಡು, ಬಿಜೆಪಿ ಒಂದು ಸುಸಂಸ್ಕೃತ ಸಂಘಟನೆಯಾಗಿದೆ. ಇಲ್ಲಿ ಕಾರ್ಯಕರ್ತರು, ನಾಯಕರು ಎಂಬ ಭೇದ ಭಾವವಿಲ್ಲ ಎಂದಿದೆ.

RELATED ARTICLES

Most Popular

error: Content is protected !!
Join WhatsApp Group