spot_img
spot_img

ಹಿರಿದಾದ ಅರ್ಥ ನೀಡುವುದು ಚುಟುಕು ಸಾಹಿತ್ಯದ ವಿಶಿಷ್ಟ ಶಕ್ತಿ – ಡಿ. ಎಸ್. ಡಿಗ್ಗಿಮಠ

Must Read

- Advertisement -

ಸವದತ್ತಿ: ” ಹಿರಿದಾದ ಅರ್ಥ ನೀಡುವುದು ಚುಟುಕು ಸಾಹಿತ್ಯದ ವಿಶಿಷ್ಟ ಶಕ್ತಿ. ಸಣ್ಣ ಸಣ್ಣ ಪದಗಳಿಂದ ಮನಸ್ಸಿಗೆ ತಾಕುವ ಮತ್ತು ಸಮಾಜವನ್ನು ತಿದ್ದುವುದು ಚುಟುಕು ಸಾಹಿತ್ಯ” ಎಂದು ಉಪನ್ಯಾಸಕ ಡಿ. ಎಸ್. ಡಿಗ್ಗಿಮಠ ಹೇಳಿದರು.

ಅವರು ಸ್ಥಳೀಯ ಶ್ರೀ ಶಿವಚಿದಂಬರೇಶ್ವರ ದೇವಸ್ಥಾನದಲ್ಲಿ ನಡೆದ ಸವದತ್ತಿ ತಾಲೂಕಾ ಚುಟುಕು ಸಾಹಿತ್ಯ ಪರಿಷತ್ತು ಘಟಕದಿಂದ ಆಯೋಜಿಸಿರುವ 2021-22 ನೇ ಸಾಲಿನ ಸಾಹಿತ್ಯ ಪ್ರಾರಂಭೋತ್ಸವ ಮತ್ತು ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಬಸವರಾಜ ಕಾರದಗಿ “ಸಾಹಿತ್ಯ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು.ನನ್ನಿಂದ ಎಲ್ಲಾ ರೀತಿಯ ಸಹಾಯ ಸಹಕಾರ ತಮ್ಮ ಕಾರ್ಯಕ್ರಮಗಳಿಗೆ ಸದಾ ಸಿದ್ಧ.ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ” ಎಂದು ಹೇಳಿದರು.

- Advertisement -

ಇದೇ ಸಂದರ್ಭದಲ್ಲಿ ಸಾಹಿತ್ಯ ಪ್ರಪಂಚಕ್ಕೆ ಹಲವು ಮೌಲಿಕ ಕೃತಿಗಳನ್ನು ನೀಡಿದ ಮೂವರು ಸಾಹಿತಿಗಳಾದ ವಾಯ್. ಬಿ. ಕಡಕೋಳ. ಆನಂದ ಬೋವಿ ಹಾಗೂ ನಾಗೇಶ ಜೆ. ನಾಯಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ .ವಾಯ್. ಕರಮಲ್ಲಪ್ಪನವರ ವಹಿಸಿದ್ದರು. ಇನ್ನೋರ್ವ ಮುಖ್ಯ ಅತಿಥಿಗಳಾಗಿದ್ದ ಕ.ಸಾಪ ಅಧ್ಯಕ್ಷರಾದ ಶ್ರೀ ದೊಡಗೌಡರ ಅವರು ಮಾತನಾಡಿ ಚುಟುಕು ಸಾಹಿತ್ಯ ಪರಿಷತ್ ನಡೆಸುವ ಸಮಸ್ತ ಚಟುವಟಿಕೆಗಳಿಗೆ ಕನ್ನಡ ಸಾಹಿತ್ಯ‌ ಪರಿಷತ್ತು ಬೆಂಬಲ ಕೊಡುತ್ತಾ ಬಂದಿದೆ.ಇನ್ನು ಮುಂದೆಯೂ ಅದೇ ಸಹಕಾರವಿರುತ್ತದೆ” ಎಂದರು.

- Advertisement -

ಚು.ಸಾ.ಪ ವೇದಿಕೆಯ ಗೌರವಾಧ್ಯಕ್ಷ ಡಾ.ವೈ.ಎಂ.ಯಾಕೊಳ್ಳಿ ಉಪಸ್ಥಿತರಿದ್ದರು.ಅಧ್ಯಕ್ಷೀಯ ನುಡಿಗಳನ್ನಾಡಿದ ಚುಟುಕು. ಸಾ. ಪ. ಅಧ್ಯಕ್ಷ ರಾದ ಜಿ. ವೈ. ಕರಮಲ್ಲಪ್ಪನವರ “ಮುಂಬರುವ ದಿನಗಳಲ್ಲಿ ಪ್ರತಿ ತಿಂಗಳಿಗೊಮ್ಮೆ ಚುಟುಕು ಸಾಹಿತ್ಯ ಚಟುವಟಿಕೆಗಳನ್ನು ನಡೆಸುವ ಜೊತೆಗೆ ಶಾಲಾ ವಿದ್ಯಾರ್ಥಿಗಳಿಗೆ ಕೂಡ ಚುಟುಕು ಸಾಹಿತ್ಯ ಕವಿಗೋಷ್ಠಿಯಲ್ಲಿ ಅವಕಾಶ ನೀಡಿ ಪ್ರೋತ್ಸಾಹ ನೀಡಲಾಗುವುದು” ಎಂದು ಮುಂಬರುವ ದಿನಗಳಲ್ಲಿ ಚುಟುಕು ಸಾಹಿತ್ಯ ಚಟುವಟಿಕೆ ಗಳ ಕುರಿತು ತಿಳಿಸಿದರು.

ಇದೇ ಸಂದರ್ಭದಲ್ಲಿ ಚುಟುಕು ಕವಿಗೋಷ್ಠಿ ಜರುಗಿತು. ಆರಂಭದಲ್ಲಿ ರಮೇಶ ಮುರಂಕರ ಪ್ರಾಸ್ತಾವಿಕ ಮಾತುಗಳನ್ನು ಹೇಳುತ್ತ, ಕನ್ನಡ ನಾಡು ನುಡಿಯ ಕುರಿತು ಹೆಮ್ಮೆಯ ಸಂಗತಿಗಳನ್ನು ತಿಳಿಸಿದರು. ಜೆ ಬಿ ಕಾರ್ಲಕಟ್ಟಿ, ಎ.ಎಚ್.ಹೊಸಟ್ಟಿ ಆರ್. ಎಂ. ನಿಡವಣಿ, ಸಂತೋಷ್ ಹುಬ್ಬಳ್ಳಿ. ವಾರೆಪ್ಪನವರ್,ಚಿದಾನಂದ ಬಾರ್ಕಿ,ಪಿ.ಎಸ್ .ಶಿಂಧೆ, ಜಿ.ಎಸ್.ತೋಟಗಿ, ಬಿ.ಎನ್.ಘಂಟಿ, ಗಂಗಪ್ಪನವರ, ನೇಸರಗಿ, ಎಸ್.ಕೆ.ನವಲೆ, ಆನಂದ ಏಣಗಿ, ಬಿ.ಬಿ.ಹುಲಿಗೊಪ್ಪ, ಬಿ.ಎಪ್.ನಾಯ್ಕರ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಡಿ. ಎ. ಮೇಟಿ, ದೈಹಿಕ ಶಿಕ್ಷಣಾಧಿಕಾರಿಗಳಾದ ವೈ. ಎಂ. ಶಿಂಧೆ, ಪಿ.ಎಫ್.ನಾಯ್ಕರ, ಶ್ರೀಮತಿ ಅನುಸೂಯ ಕಿಟದಾಳ, ಡಾ.ಪ್ರೇಮಾ ಯಾಕೊಳ್ಳಿ, ಜಯಂತಿ ರೇವಡಿ ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಎಮ್ ಪಿ. ಪಾಟೀಲ್ ಸ್ವಾಗತಿಸಿದರು. ಎಂ ಎಸ್. ದೊಡ್ಡಮನಿ ಸನ್ಮಾನಿತರ ವ್ಯಕ್ತಿ ತ್ವವನ್ನು ಪರಿಚಯಿಸಿದರು. ಮಹೇಶ್ ಶಿರಸಂಗಿ ನಿರೂಪಿಸಿದರು. ಸಾಸ್ವೆಹಳ್ಳಿ ವಂದಿಸಿದರು.

- Advertisement -
- Advertisement -

Latest News

Shahid Kapoor Birthday: ಈ ಬಾಲಿವುಡ್ ಹೀರೊ ಒಟ್ಟು ಆಸ್ತಿ ಎಷ್ಟು ಗೊತ್ತಾ?

ಶಾಹಿದ್ ಕಪೂರ್ ಬಾಲಿವುಡ್ ನ ಬಹು ಬೇಡಿಕೆಯ ನಟರಲ್ಲಿ ಒಬ್ಬರು. ಇಂದು (ಫೆಬ್ರವರಿ 25) ಅವರ ಜನ್ಮದಿನ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಎರಡು ದಶಕಗಳಿಂದ...
- Advertisement -

More Articles Like This

- Advertisement -
error: Content is protected !!
Join WhatsApp Group