spot_img
spot_img

ಪುಸ್ತಕ ಪರಿಚಯ: ರಾಜಕೀಯ ಮತ್ತು ಮಾಧ್ಯಮ

Must Read

spot_img

ರಾಜಕೀಯ ಮತ್ತು ಮಾಧ್ಯಮ

ಪುಟಗಳು-212
ಬೆಲೆ– 170
ಸಹನಾ ಪ್ರಕಾಶನ

ಮೊಬೈಲ್ – 9060633297,7204262456

ಪುಸ್ತಕದ ಶೀರ್ಷಿಕೆ ಹೇಳುವ ಹಾಗೆ ಇದರಲ್ಲಿ ರಾಜಕೀಯತೆಯ ವಿಚಾರದ ಜೊತೆಗೆ ಮಧ್ಯವರ್ತಿಗಳು, ಮಾಧ್ಯಮಗಳು ಇದನ್ನು ಯಾವ ರೀತಿಯಲ್ಲಿ ಬಳಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಮಾಡಬಹುದೆನ್ನುವ ಸಾಮಾನ್ಯಜ್ಞಾನವನ್ನು, ಸರಳವಾಗಿ ಅರ್ಥ ವಾಗುವಂತೆ ಲೇಖಕಿ ಈಗಿನ ವಸ್ತುಸ್ಥಿತಿಯ ಸತ್ಯವನ್ನು ಬಿಚ್ಚಿಟ್ಟಿರುವುದು ವಿಶೇಷವಾಗಿದೆ.

ರಾಜಕೀಯ ಎಂದರೆ ಇತರರನ್ನು ಆಳೋದು ಎನ್ನುವ ಅರ್ಥದಲ್ಲಿ ನಮ್ಮ ಪ್ರಜೆಗಳನ್ನು ಆಳುವವರಿಗೆ ಆಧ್ಯಾತ್ಮಿಕದಲ್ಲಿಯ ರಾಜಯೋಗದ ಅರ್ಥವನ್ನು ತಿಳಿಸಿ ಹೇಳುವ ಪ್ರಯತ್ನ ಮಾಡಿದ್ದಾರೆ.

ಹಾಗೆ ‘ ಮಾಧ್ಯಮ’ ಎಂದರೆ ಮಧ್ಯವರ್ತಿಗಳು ಎನ್ನುವ ಅರ್ಥದಲ್ಲಿ ಸತ್ಯವನ್ನು ಮಧ್ಯವರ್ತಿಗಳು ಹೇಗೆ ತಿರುಚಿಕೊಂಡು ತಮ್ಮ ಹಿಂದಿನ ಮಹಾತ್ಮರ,ಮಹಾಪುರುಷರ ಹೆಸರಿನಲ್ಲಿ ಜನಸಾಮಾನ್ಯರನ್ನು ದಾರಿ ತಪ್ಪಿಸಲಾಗಿದೆ.ಇದರಿಂದಾಗಿ ಮನುಕುಲಕ್ಕೆ ಆದ ಕಷ್ಟ ನಷ್ಟ, ಕಲಿಪ್ರಭಾವ, ದೇಶದ ಮುಂದಿನ ಭವಿಷ್ಯಕ್ಕೆ ನಾವೇನು ಮಾಡಬಹುದು.

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಾಗಿ ಸ್ವತಂತ್ರ ಜೀವನ ನಡೆಸಲು ಯಾವ ಬದಲಾವಣೆ ಅಗತ್ಯವಿದೆ ಹೀಗೇ ವಿಚಾರಗಳು ನಮ್ಮ ಅನುಭವಕ್ಕೆ ಹತ್ತಿರವಾಗಿದ್ದು ನಮ್ಮನ್ನು ನಾವು ತಿಳಿದು ನಡೆದಾಗಲೇ ಬಂದಿರುವ. ಸಮಸ್ಯೆಗಳಿಗೆ ಪರಿಹಾರ ಮನೆಯೊಳಗೆ ಸಿಗಬಹುದೆನ್ನುವುದರ ಮೂಲಕ ಮುಂದಿನ ಮಕ್ಕಳ ಭವಿಷ್ಯಕ್ಕೆ ಶಿಕ್ಷಣದಲ್ಲಿ ಬದಲಾವಣೆ ಅಗತ್ಯವೆಂದು ಶೈಕ್ಷಣಿಕವಾಗಿ ಜನರಲ್ಲಿ ಪ್ರಜ್ಞೆ ಹೆಚ್ಚಿಸುವ ಕೆಲಸ ಪ್ರಜೆಗಳೆ ಮನೆಯಿಂದಲೇ ಹೇಗೆ ಸತ್ಯ ತಿಳಿದು ಬದಲಾಗಬಹುದೆಂಬುದರ ಬಗ್ಗೆ ಸಣ್ಣ ಲೇಖನಗಳ ಮೂಲಕ ವಿವರಿಸಿದ್ದಾರೆ. ಇದೊಂದು ಭಾರತೀಯರ ಭವಿಷ್ಯದ ಕೈಪಿಡಿ ಎಂದರೂ ತಪ್ಪಾಗಲಾರದು.ಮಾನವೀಯ ಗುಣವನ್ನು ಎತ್ತಿ ಹಿಡಿದಿರುವ ಪುಸ್ತಕ ಸ್ಥಿತಪ್ರಜ್ಞಾವಂತರ ಜ್ಞಾನವನ್ನು ಹೆಚ್ಚಿಸುತ್ತದೆ.

- Advertisement -
- Advertisement -

Latest News

ವಿದ್ಯುತ್ ಕಳ್ಳತನ ಮಹಾಪರಾಧ: ಎಇಇ ಧರೆಪ್ಪಗೋಳ

ಸಿಂದಗಿ: ವಿದ್ಯುತ್ ಕಳ್ಳತನ ಮಹಾಪರಾಧ, ಕಳ್ಳತನ ಮಾಡಿದ ಗ್ರಾಹಕರಿಗೆ ಜೈಲುವಾಸ ಮತ್ತು ದಂಡ ಕಟ್ಟಿಟ್ಟಬುತ್ತಿ ಎಂದು ಸಿಂದಗಿ ಸಹಾಯಕ ಕಾರ್ಯನಿರ್ವಾಹಕ ವಿಶಾಲ್ ಧರೆಪ್ಪಗೋಳ ಹೇಳಿದರು. ತಾಲೂಕಿನ ಮೋರಟಗಿ...
- Advertisement -

More Articles Like This

- Advertisement -
close
error: Content is protected !!