ಬೀದರ – ಭಾರತೀಯ ಜನತಾ ಪಕ್ಷದ ಯುವ ಮೋರ್ಚಾವು ಕಳೆದ ರಾತ್ರಿ ನಗರದಲ್ಲಿ ಪಂಜಿನ ಮೆರವಣಿಗೆ ಮಾಡುವ ಮೂಲಕ ಬಲಿದಾನ ದಿನ ಆಚರಿಸಿ ದೇಶ ಪ್ರೇಮಕ್ಕೆ ಸಾಕ್ಷಿ ಆಯಿತು.
ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ತಮ್ಮ ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಟದ ಮುಂಚುಣಿ ಯಲ್ಲಿ ಇದ್ದ ಭಗತ ಸಿಂಗ್, ರಾಜಗುರು ,ಸುಖದೇವ ,ಚಂದ್ರಶೇಖರ ಆಜಾದ ಅವರನ್ನು ಬ್ರಿಟಿಷ್ ಸರ್ಕಾರ ಬಹಿರಂಗವಾಗಿ ಗಲ್ಲಿಗೇರಿಸಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಭಯಹುಟ್ಟಿಸುವ ಗುರಿಯನ್ನು ತಪ್ಪಿಸಲು..
ನಮ್ಮ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಭಯ ಹೊಡೆದು ಒಡಿಸಲು ತಮ್ಮ ಕೊನೆಯ ಘಳಿಗೆಯಲ್ಲಿ ಆಡಿದ ವೀರ ಯೋಧರ ಕೆಚ್ಚೆದೆಯ ಮಾತುಗಳನ್ನು ದೇಶದ ಜನರಿಗೆ ತಿಳಿಸುವ ಮೂಲಕ ರಾಷ್ಟ್ರದ ಪ್ರೇಮ ವನ್ನು ಹೆಚ್ಚಿಸುವ ಸಲುವಾಗಿ ಈ ದಿನವನ್ನು ಪ್ರತಿವರ್ಷ ರಾಷ್ಟ್ರೀಯ ಬಲಿದಾನ ದಿನವನ್ನಾಗಿ ಆಚರಿಸುತ್ತ ಬರಲಾಗಿದೆ.
ಇಂದಿನ ದಿವಸ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ನಾಯಕರು ಇಂದು ನಗರದ ಪ್ರಮುಖ ಬೀದಿಗಳಲ್ಲಿ ಪಂಜಿನ ಮೆರವಣಿಗೆ ಮಾಡುವ ಮೂಲಕ ರಾಷ್ಟ್ರಪ್ರೇಮಿಗಳಿಗೆ ಚೈತನ್ಯ ತುಂಬುವ ಪ್ರಯತ್ನಮಾಡಲಾಯಿತು ಭಾರತೀಯ ಜನತಾ ಪಕ್ಷದ ಮುಖಂಡರು ಯುವ ಮುಖಂಡರಾದ ಬಾಬು ವಾಲಿ, ಶಶಿಧರ ಹೊಸಹಳ್ಳಿ, ಹಣಮಂತ ಬುಳ್ಳಾ ಹಾಗೂ ಯುವ ಮೋರ್ಚಾದ ಸಮಸ್ತ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ