Homeಸುದ್ದಿಗಳುಕನ್ನಡವು ವಿಶ್ವದ ಅತ್ಯಂತ ಶ್ರೀಮಂತ ಹಾಗೂ ಶಕ್ತಿಶಾಲಿ ಭಾಷೆ: ಡಾ. ಭೇರ್ಯ ರಾಮಕುಮಾರ್

ಕನ್ನಡವು ವಿಶ್ವದ ಅತ್ಯಂತ ಶ್ರೀಮಂತ ಹಾಗೂ ಶಕ್ತಿಶಾಲಿ ಭಾಷೆ: ಡಾ. ಭೇರ್ಯ ರಾಮಕುಮಾರ್

spot_img

ವಿಶ್ವದ ಐದು ಶಕ್ತಿಶಾಲಿ ಭಾಷೆಗಳ ಪೈಕಿ ಕನ್ನಡವೂ ಒಂದು. ಎಂಟು ಜ್ಞಾನಪೀಠ ಪ್ರಶಸ್ತಿ, ಮೂರು ರಾಷ್ಟ್ರಕವಿ ಪ್ರಶಸ್ತಿ, ಎರಡು ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆಯುವ ಮೂಲಕ ಕನ್ನಡ ಭಾಷೆ ಅತ್ಯಂತ ಸತ್ವಶಾಲಿ  ಭಾಷೆಯಾಗಿ ಬೆಳೆದಿದೆ  ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಭೇರ್ಯ ರಾಮಕುಮಾರ್ ಶ್ಲಾಜಿಸಿದರು.

ಮೈಸೂರು ನಗರದ ಬೊಗಾಧಿಯ ಅಜಿತ ನೆಲೆ ಫೌಂಡೇಶನ್ ನ ಅನಾಥ ಮಕ್ಕಳ ಆಶ್ರಮದಲ್ಲಿ  ಅಕ್ಷ  ಭಾರತ್ ಫೌಂಡೇಶನ್ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು  ಕರ್ನಾಟಕದಲ್ಲಿ ಕನ್ನಡ ಭಾಷೆ ಮಾತನಾಡುವವರ ಸಂಖ್ಯೆ ಪ್ರತಿ ವರ್ಷವೂ ಕಡಿಮೆ ಆಗುತ್ತಿದೆ. ಬೆಂಗಳೂರಿನಲ್ಲಿ ಇರುವ ಬಹುರಾಷ್ಟ್ರೀಯ ಕಂಪನಿಗಳ ಪರಿಣಾಮವಾಗಿ ಹೊರರಾಜ್ಯಗಳ ಜನರು ಅಪಾರ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಹಲವು ಬಡಾವಣೆ ಗಳಲ್ಲಿ ಕನ್ನಡ ನಾಮಫಲಕಗಳು, ಕನ್ನಡ ಶಾಲೆಗಳು ನಾಪತ್ತೆಯಾಗಿವೆ. ಇನ್ನು ಕೆಲವೇ ವರ್ಷಗಳಲ್ಲಿ ಕನ್ನಡ ನಾಡಿನ ರಾಜಧಾನಿಯಲ್ಲೇ ಕನ್ನಡ ಭಾಷೆ ಹುಡುಕಬೇಕಾದ ಪರಿಸ್ಥಿತಿ ಬರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರಿ ಕಚೇರಿಗಳು, ರೈಲ್ವೆ ಹಾಗೂ ವಿಮಾನ ನಿಲ್ದಾಣಗಳಲ್ಲಿ ಕನ್ನಡ ಭಾಷೆ ಬಳಕೆ ಬಗ್ಗೆ ನಿರ್ಲಕ್ಷ ತೋರಲಾಗುತ್ತಿದೆ. ಇನ್ನು ಬ್ಯಾಂಕ್ ಗಳಲ್ಲಿ ಹೊರ ರಾಜ್ಯದ ಜನರೇ ಹೆಚ್ಚು ಕಾರ್ಯ ನಿರ್ವಹಿಸುತ್ತಿದ್ದೂ ಕನ್ನಡ ಭಾಷೆ ಬಳಸುತ್ತಿಲ್ಲ. ಇದರಿಂದಾಗಿ ಗ್ರಾಮೀಣ ರೈತ  ಸಮುದಾಯಕ್ಕೆ ಅಪಾರ ಸಮಸ್ಯೆ ಉಂಟಾಗುತ್ತಿದೆ.

ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಅನ್ಯಭಾಷೆಗಳ ಪ್ರಭಾವ ತೀವ್ರಗೊಂಡಿದ್ಫು, ಕನ್ನಡಿಗರು ನಿಸ್ಸಾಹಾಯಕ ಪರಿಸ್ಥಿತಿ ತಲುಪಿದ್ದಾರೆ. ಕನ್ನಡ ನಾಡು – ನುಡಿ, ನೆಲ – ಜಲ ಉಳಿಸುವ ಬಗ್ಗೆ ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ಅಗತ್ಯ ಇದೆ ಎಂದವರು ಕರೆ ನೀಡಿದರು. ಕನ್ನಡ ಪತ್ರಿಕೆ ಹಾಗೂ ಪುಸ್ತಕಗಳನ್ನೇ ಓದಬೇಕು, ಕನ್ನಡ ಚಲನ ಚಿತ್ರಗಳನ್ನೇ ನೋಡಬೇಕು. ಅನ್ಯ ಭಾಷಿಕರಿಗೆ ಕನ್ನಡ ಕಲಿಸಬೇಕು ಎಂದು ಭೇರ್ಯ ರಾಮಕುಮಾರ್ ವಿದ್ಯಾರ್ಥಿಗಳಿಂದ ಪ್ರಮಾಣ ಮಾಡಿಸಿದರು.

ಕನ್ನಡ ಪರ ಹೋರಾಟಗಾರ ಅರವಿಂದ ಶರ್ಮ ಮಾತನಾಡಿ  ಕನ್ನಡ ನೆಲ ಜಲ, ಭಾಷೆ ರಕ್ಷಣೆಗೆ ನಿರಂತರ ಎಚ್ಚರ ಅಗತ್ಯ. ಕನ್ನಡ ಹೃದಯದ ಭಾಷೆ ಆಗಬೇಕು. ಬದುಕು ಕಟ್ಟಿಕೊಳ್ಳಲು ಬೇರೆ ಭಾಷೆಗಳನ್ನು ಕಲಿಯಬೇಕು.ಕನ್ನಡದ ಸಾರ್ವಭೌಮಾತೆಗೆ ಧಕ್ಕೆ ಬಂದಾಗ ಉಗ್ರ ಹೋರಾಟ ಮಾಡಲೂ  ಹಿಂಜರಿಯಬಾರದು ಎಂದು ಕರೆ ನೀಡಿದರು.

ಸಾಹಿತಿಗಳು ಸಾಫ್ಟ್ ವೇರ್, ಹೋರಾಟಗಾರರು ಹಾರ್ಡ್ ವೇರ್ ಇದ್ದಂತೆ. ಕನ್ನಡದ ಉಳಿವಿಗೆ ಸಾಹಿತಿಗಳ ಮಾರ್ಗದರ್ಶನ ಹಾಗೂ ಹೋರಾಟಗಾರರ ಉಗ್ರ ಹೋರಾಟ ಎರದೂ ಅವಶ್ಯಕತೆ ಇದೇ ಎಂದು ಅವರು ಕರೆನೀಡಿದರು.

ಸಾಹಿತಿ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಮಹಾದೇವನಾಯಕ್ ಅವರು ಮಾತನಾಡಿ ರಾಷ್ಟ್ರದ ಪ್ರಥಮ ಪ್ರಧಾನಿ ಜವಹಾರಳಲ ನೆಹರು ಅವರಿಗೆ ಮಕ್ಜಲ ಬಗ್ಗೆ ಅಪಾರ ಪ್ರೀತಿ. ಇಂದಿನ ಮಕ್ಕಳೇ ರಾಷ್ಟ್ರದ ಭವಿಷ್ಯ ನಿರ್ಮಾತ್ರುಗಳು ಎಂದು ಅವರು ಘೋಷಿಸಿದ್ದರು. ತಮ್ಮ ಜನ್ಮದಿನವನ್ನು ಮಕ್ಕಳ ದಿನವಾಗಿ ಘೋಷಿಸಿದರು. ಮಕ್ಕಳ ಸಮಗ್ರ ಪ್ರಗತಿಗೆ ನೂರಾರು ಕಾರ್ಯಕ್ರಮಗಳನ್ನು ರೂಪಿಸಿದ್ದರು ಎಂದು ಶ್ಲಾಜಿಸಿದರು.  

ನಿವೃತ್ತ ಸ್ಯೆನಿಕ ಕುಮಾರ್ ಅವರು ಮಾತನಾಡಿ ಮಕ್ಕಳು ಧ್ಯೇರ್ಯ ಹಾಗೂ ದೇಶಪ್ರೇಮ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು. ಅಕ್ಷ  ಭಾರತ್ ಫೌಂಡೇಷನ್ ಸಂಸ್ಥೆಯ ಅಧ್ಯಕ್ಷರಾದ ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿಲಯಪಾಲಕರಾದ ಕೆ. ರಾಮಚಂದ್ರ, ಸಂಚಾಲಕರದ ಜಯಾನಂದ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಾಹಿತಿಗಳಾದ ಭೇರ್ಯ ರಾಮಕುಮಾರ್, ಮಹಾದೇವ ನಾಯ್ಕ, ಕನ್ನಡ ಚಳುವಳಿಗಾರ  ಅರವಿಂದ ಶರ್ಮ, ನಿವೃತ್ತ ಸ್ಯೆನಿಕ ರಾದ ಕುಮಾರ್  ಅವರುಗಳನ್ನು ಸನ್ಮಾನಿಸಲಾಯಿತು.

RELATED ARTICLES

Most Popular

error: Content is protected !!
Join WhatsApp Group