ಕವನ: ಚೇತರಿಕೆ ಚಿಗುರು

Must Read

ಚೇತರಿಕೆ ಚಿಗುರು

ಗರಿಗೆದರಿ ಕುಣಿಯುವ ಬಾಲಕುಸುಮ
ಕರೋನಾ ಛಾಯೆಗೆ ಅದರಿದ ಮನ
ಮುದ್ದು ಕಂದನ ಮುದುರಿದ ಜ್ಞಾನ
ಶೋಕ ಸಾಗರದಿ ಜನ ತಲ್ಲಣ //

ಕೇಳಲಿಲ್ಲ ಅನುಭವ ಪಾಠ
ಬಿಡಲಿಲ್ಲ ಫೋನಿನಾಟ
ಸವಿಯಲಿಲ್ಲ ಬಿಸಿಯೂಟ
ಕರೋನಾ ರುದ್ರನರ್ತನ ಕೂಟ//

ಕಲಿಕೆಯ ಹಂಬಲದಿ ಕಾಣೆಯಾದ ಜ್ಞಾನ
ಹಲವು ಮಾರ್ಗದಿ ಬಳಸಿದ ವಿಜ್ಞಾನ
ತಲುಪಿಯೂ ತಲುಪದ ತಂತ್ರಜ್ಞಾನ
ಚೇತರಿಕೆ ಚಿಮ್ಮಲಿ ಬಾಳಿಗೆ ಸುಜ್ಞಾನ //

ಉದಯದಿ ಬಾಡಿದ ಜ್ಞಾನ ಸುಮ
ನೀರೆರೆದು ಪೋಷಿಸುವ ಕಾರ್ಯಕ್ರಮ
ಸರಕಾರಿ ಯೋಜನೆಯ ನಿಯಮ
ಕಲಿಕಾ ಚೇತರಿಕೆ ಉಪಕ್ರಮ//

ಮರೆತ ಕಲಿಕೆಯ ಮೆಲುಕು ಹಾಕುತ
ನುರಿತು ಆಡಿದ ಪದವ ಹುಡುಕುತ
ಓದುತ ಬಳಸುತ ಬರೆಯುತ
ನಲಿಯುತ ಎಳೆಯುವ ಕಲಿಕಾ ತೇರ //

ಕಲಿಕೆಯ ಹರಿವು ಒಳಗಿಹುದು
ಕಲಿವಿನ ಫಲಗಳ ನಂಟಿಹುದು
ಸುಗಮಕಾರರ ಸಹಕಾರವಿಹುದು
ಕಲಿಕಾ ಹಾಳೆಗಳು ಕೈಯಲ್ಲಿ ಹುದು//

ಚಿಣ್ಣರ ಚಿನ್ನದ ಬಾಳಿಗೆ
ಚೈತನ್ಯ ಚಿಲುಮೆ ಕಲಿಕೆಗೆ
ಚೇತರಿಕೆ ಚಿಗುರು ನಾಡಿಗೆ
ಹಬ್ಬಲಿ ಮನ ಮನೆಯ ಹಂದರಕೆ//


ಮಂಜುಳ ಶೆಟ್ಟರ
W/o ರಾಜು ಹಕ್ಕಿ
ಮೆಳೆಪ್ಪನವರ ಚಾಳ
ಬೈಲಹೊಂಗಲ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group