ಸಿಂದಗಿ; ನಾಡಗೀತೆಯಲ್ಲಿ ಸರ್ವಜನಾಂಗದ ಶಾಂತಿಯ ತೋಟವಿದೆ. ಭಾವನೆಗಳ ಗ್ರಂಥವಿದೆ. ಸರ್ವ ಹೃದಯದ ಬಂಧವಿದೆ. ಕನ್ನಡ ಭಾಷೆಗೆ ೨ ಸಾವಿರ ವರ್ಷಗಳ ಇತಿಹಾಸವಿದೆ. ಕಾವೇರಿಯಿಂದ ಗೋದಾವರಿಯವರೆಗೆ ಕನ್ನಡ ವಿಸ್ತಾರವಾಗಿತ್ತು ಬ್ರಿಟೀಷರ ಕಾಲದಲ್ಲಿ ನಾಲ್ಕು ಪ್ರಾಂಥಗಳಿದ್ದ ಮೈಸೂರು ರಾಜ್ಯವನ್ನು ಒಂದುಗೂಡಿಸಿ ೧೯೭೩ರಲ್ಲಿ ಏಕೀಕರಣಗೊಳಿಸಿ ಕರ್ನಾಟಕವೆಂದು ನಾಮಕರಣವಾಗಿ ಕನ್ನಡ ನಾಡಿನ ಸೋಬಗನ್ನು ತಂದ ನಾಡಗೀತೆಗೆ ನೂರರ ಸಂಭ್ರಮಿಸಿಕೊಳ್ಳುತ್ತಿದೆ ಎಂದು ಯಾದಗಿರಿಯ ಸಾಹಿತಿ ಶಿವಶರಣಪ್ಪ ಶಿರೂರ ಹೇಳಿದರು.
ಪಟ್ಟಣದ ಶಾಂತೇಶ್ವರ ಊರಿನ ಹಿರೇಮಠದಲ್ಲಿ ಕನ್ನಡ ಸಾಹಿತ್ಯ ಗೆಳೆಯರ ಬಳಗದವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಷ್ಕೃತ ಹ.ಮ.ಪೂಜಾರ ಗುರುಗಳ ಅಭಿನಂದನಾ ಹಾಗೂ ನಾಡಗೀತೆ ನೂರರ ಸಂಭ್ರಮದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಈಗಿರುವ ಕನ್ನಡ ಧ್ವಜ ಕರ್ನಾಟಕ ಹೊರತು ಪಡಿಸಿದರೆ ಯಾವ ರಾಜ್ಯದಲ್ಲಿ ಸಿಗದು. ಜಗತ್ತಿನ ಎಲ್ಲ ದೇಶಗಳಲ್ಲಿ ಕನ್ನಡ ಭಾಷೆ ಕಂಪು ಪಸರಿಸಿದೆ. ಈ ರಾಜ್ಯದ ೩೧ ಜಿಲ್ಲೆಗಳಲ್ಲಿ ಪ್ರತಿಯೊಂದು ಇತಿಹಾಸದಲ್ಲಿ ಮಳಖೇಡ ಕೂಡಾ ಇದೆ. ಅಂದಿನಿಂದ ಇಂದಿನವರೆಗೆ ಅನೇಕ ಸಾಹಿತಿಗಳು, ಸಾಹಿತ್ಯಾಭಿಮಾನಿಗಳು ಕನ್ನಡ ಭಾಷೆ ಬಗ್ಗೆ ಅಭಿಮಾನವಿದ್ದವರು ಎಂದರೆ ಕನ್ನಡಿಗರು ಮಾತ್ರ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಅಶೋಕ ಮನಗೂಳಿ ಮಾತನಾಡಿ, ಪ್ರಶಸ್ತಿಗಳು ತಾನಾಗಿಯೇ ಸಿಗುವಂತವುಗಳಲ್ಲ ಅವರ ಸಾಧನೆಗಳನ್ನು ಗುರುತಿಸಿ ಪ್ರಶಸ್ತಿಗಳು ಲಭಿಸುತ್ತವೆ. ರಾಷ್ಟ್ರ ಶಿಕ್ಷಕ ಪುರಸ್ಕೃತ ಹ.ಮ.ಪೂಜಾರ ಅವರು ಬರೀ ಶಿಕ್ಷಣ ನೀಡದೇ ಸಂಸ್ಕಾರ ನೀಡಿದ್ದಾರೆ ಅಂತವರಿಂದ ಈ ಕ್ಷೇತ್ರ ರಾಜ್ಯದ ಇತಿಹಾಸ ಪುಟದಲ್ಲಿ ಸೇರುವಂತಾಗಿದೆ ಎಂದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹ.ಮ.ಪೂಜಾರ ಅವರ ಬದುಕ ಬರಹ ಕುರಿತು ಮುಳವಾಡದ ಸಾಹಿತಿ ಫ.ಗು.ಸಿದ್ದಾಪುರ ಮಾತನಾಡಿ, ತನ್ನ ಗುರಿಯನ್ನು ಬದಿಗಿಟ್ಟು ತಂದೆಯ ಕನಸ್ಸನ್ನು ನನಸಾ ಗಿಸಿದ ಹ.ಮ.ಪೂಜಾರ ಅವರು, ಶಿಕ್ಷಕ ವೃತ್ತಿಯಲ್ಲಿ ಸಾರ್ಥಕ ಬದುಕು ಸಾಗಿಸಿದಂತವತವರು ಈ ನೆಲದವರು, ಅಲ್ಲದೆ ಕನ್ನಡದ ಗುರು ಜಗದ್ಗುರು ತೋಂಟದ ಡಾ.ಸಿದ್ದಲಿಂಗ ಮಹಾಸ್ವಾಮಿಗಳು ಕೂಡಾ ಈ ನೆಲದವರು ಇಲ್ಲಿ ಅನೇಕ ಕನ್ನಡದ ಸಾಹಿತಿಗಳು, ರಂಗಕಲಾ ಸೇವಕರು ತಮ್ಮ ಸಾರ್ಥಕ ಜೀವನವನನು ಸಾಗಿಸಿದ್ದಾರೆ ಅಂಥವರ ಸಾಲಲ್ಲಿ ಹ.ಮ.ಪೂಜಾರ ಅವರು ನಿಂತಿದ್ದಾರೆ. ಅಂಥವರ ಅಭಿನಂದನಾ ಗ್ರಂಥ ಹೊರಬರಲಿ ಎಂದು ಮನವಿ ಮಾಡಿದರು.

ಸಾನಿಧ್ಯವಹಿಸಿದ ಆಲಮೇಲ ವಿರಕ್ತಮಠದ ಪೂಜ್ಯಶ್ರೀ ಜಗದೇವ ಮಲ್ಲಿಬೊಮ್ಮ ಮಹಾಸ್ವಾಮಿಗಳು, ಸಮ್ಮುಖ ವಹಿಸಿದ ಯಂಕಂಚಿ ಹಿರೇಮಠದ ಪೂಜ್ಯಶ್ರೀ ಅಭಿನವ ರುದ್ರಮುನಿ ಶಿವಾಚಾರ್ಯರು, ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾದ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಸಿ.ಎಂ.ಮನಗೂಳಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಅರವಿಂದ ಮನಗೂಳಿ, ಎಚ್.ಜಿ.ಕಾಲೇಜಿನ ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಮಾತನಾಡಿದರು.
ಪೋಟೋ ಪೂಜೆ ನೇರವೇರಿಸಿದ ಮಾಜಿ ಶಾಸಕ ರಮೇಶ ಭೂಸನುರ, ಪ್ರೊ. ಶಾಂತೂ ಹಿರೇಮಠ, ರವಿ ಗೋಲಾ, ಎಂ.ಎಂ.ಮುಂಡೆವಾಡಗಿ, ಚಂದ್ರಕಾಂತ ಸಿಂಗೆ, ಸಂತೋಷ ಪಾಟೀಲ ಡಂಬಳ, ರಂಗಭೂಮಿ ಕಲಾವಿದ ದಿ.ರಾಜು ತಾಳಿಕೋಟಿಯ ಧರ್ಮಪತ್ನಿ ಪ್ರೇಮಾ ತಾಳಿಕೋಟಿ ವೇದಿಕೆ ಮೇಲಿದ್ದರು.
ರಾಗರಂಜಿನಿ ಸಂಗೀತ ಅಕೆಡೆಮಿ ಸಂಚಾಲಕ ಡಾ. ಪ್ರಕಾಶ ಮೂಡಲಗಿ ಹಾಗೂ ಪೂಜಾ ಹಿರೇಮಠ ತಂಡ ನಾಡಗೀತೆ ಹಾಡಿದರು. ಸಿದ್ದಲಿಂಗ ಕಿಣಗಿ ಸ್ವಾಗತಿಸಿದರು. ಕನ್ನಡ ಸಾಹಿತ್ಯ ಗೆಳೆಯರ ಬಳಗದ ಅದ್ಯಕ್ಷ ರಾಜಶೇಖರ ಕೂಚಬಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಬಿ.ಚೌಧರಿ ನಿರೂಪಿಸಿದರು. ಸಾಹಿತಿ ಅಶೋಕ ಬಿರಾದಾರ ವಂದಿಸಿದರು.

