- Advertisement -
ಕೊರೊನ ಕತ್ತಲು
ರಾತ್ರಿ-ಹಗಲು, ಬೆಳಕು-ಕತ್ತಲು,
ಇರುವದು ಸಮ ಸಮವಲ್ಲವೇ ?
ಬರೀ ಹಗಲೇ, ಬರೀ ಕತ್ತಲೇ
ಎನ್ನುವದು ಸುಮ್ಮ ಸುಮ್ಮನಲ್ಲವೇ ?
ದುಃಖ-ದುಮ್ಮಾನ, ಸಂತಸ-ಸಡಗರ ಸ್ಥಿರವಲ್ಲ
ಬಿಟ್ಟು-ಬಿಡು ಗೊಡ್ಡು ಗೋಳುಗಳನ್ನೆಲ್ಲ
- Advertisement -
ನೀ ಒಂಟಿಯಲ್ಲ ಆತ್ಮ ವಿಶ್ವಾಸ ಜೊತೆಗಿರಲು
ಯುಕ್ತ ಸಮಯವದು ಶುದ್ಧೀಕರಣವಾಗಲು
ಸಿದ್ಧವಾಗು ತಡೆಯಲು ಬಂದೆರಗುವ ವೇದನೆಗಳೆಲ್ಲ
ದೃಢ ಮನಸ್ಸಿನಿಂದ ಮೆಟ್ಟು ಅವನ್ನೆಲ್ಲ.
ಅಮರ್ಜಾ
ಅಮರೇಗೌಡ ಪಾಟೀಲ
ನಿವೃತ್ತ ಬ್ಶಾಂಕ್ ವ್ಶವಸ್ಥಾಪಕರು,
ಕುಷ್ಟಗಿ