ಕವನ: ಸಂಕ್ರಮಣ

Must Read

ಸಂಕ್ರಮಣ

ನಾಡಿನೆಲ್ಲೆಡೆ ಹಬ್ಬದ ಸಡಗರ ಈ ಮಕರ
ಸಂಕ್ರಮಣ
ನದಿಯಲ್ಲಿ ಮಾಡಿ ಪ್ರಾತಃಕಾಲ
ಪುಣ್ಯ ಸ್ನಾನ
ಒಂದಾಗಿ ಬೆಸೆಯುತ್ತಿದೆ ಎಲ್ಲ ಹೃದಯಗಳ
ಮಿಲನ
ನಾಡಿನ ರೈತರಿಗೆಲ್ಲ ಸುಗ್ಗಿಯ- ಹಿಗ್ಗಿನ
ಕಣ
ಸೂರ್ಯ ತನ್ನ ಪರಿಭ್ರಮಣ ಬದಲಿಸುವ
ಕ್ಷಣ
ಸವಿಯಬೇಕು ಪ್ರತಿಯೊಬ್ಬರು
ಸಿಹಿ ಎಳ್ಳು ಬೆಲ್ಲಗಳ ಮಿಶ್ರಣ
ನಿಮ್ಮ ಕುಟುಂಬದವರ ಜೊತೆ
ಸಂಭ್ರಮಿಸಿ ಈ ದಿನ
ಅಳಿಸಿಹಾಕಿ ಹೃದಯದಲ್ಲಿರುವ
ಕಲ್ಮಶಗಳನ್ನ
ಹೊಸ ವರ್ಷಕೆ ಮಾಡಿ ಸಾಧನೆಯ
ಸಂಕಲ್ಪವನ್ನ
ನಿತ್ಯ ಕುಡಿಯಿರಿ ತಾಳ್ಮೆಯ
ಅಮೃತವನ್ನ
ಗೌರವಿಸಬೇಕು ಎಲ್ಲ ಗುರು
ಹಿರಿಯರನ್ನ
ಸಂಕ್ರಮಣ ಶುಭಾಶಯಗಳೂಂದಿಗೆ
ಈ ನಿಮ್ಮ ಕಿರಣ


ಕಿರಣ ಯಲಿಗಾರ
ಮುನವಳ್ಳಿ-591117
ಸವದತ್ತಿ ತಾಲೂಕು ಬೆಳಗಾವಿ ಜಿಲ್ಲೆ

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...

More Articles Like This

error: Content is protected !!
Join WhatsApp Group