ಕವನ: ಹೆಣ್ಣು

Must Read

ಹೆಣ್ಣು

ಹೆಣ್ಣು ಹೆಣ್ಣು ಎಂದು ಏಕೆ ತೆಗಳುವಿರಿ
ಹೆಣ್ಣಲ್ಲವೇ ನಿಮ್ಮನ್ನು ಹೊತ್ತು ಹೆತ್ತು ಬೆಳೆಸಿದವಳು..

ಹೆಣ್ಣು ತಾಯಿಯಾಗಬೇಕು
ಹೆಣ್ಣು ಸೋದರಿಯಾಗಬೇಕು
ಹೆಣ್ಣು ಪತ್ನಿಯಾಗಬೇಕು
ಹೆಣ್ಣು ಮಗಳಾಗಿ ಯಾಕಿರಬಾರದು..

ನಮ್ಮ ದೇಶವನ್ನಾಳಿದ ಇಂದಿರಾಗಾಂಧಿ ಹೆಣ್ಣಲ್ಲವೇ
ಅಂತರಿಕ್ಷಕೆ ಹೋಗಿಬರಲಿಲ್ಲವೇ ಕಲ್ಪನಾ ಚಾವ್ಲಾ..
ಸಂಗೀತಕೆ ಹೊಸ ಇತಿಹಾಸ ಬರೆದ ಎಂ.ಎಸ್.ಸುಬ್ಬಲಕ್ಷ್ಮಿ ಹೆಣ್ಣಲ್ಲವೇ..

ದೇಶಕಾಗಿ ಹೋರಾಡಿದ ಝಾನ್ಸಿ ಲಕ್ಷ್ಮಿಬಾಯಿ ,ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ
ಶತ್ರುಗಳ ಹಿಮ್ಮೆಟ್ಟಿಸಲಿಲ್ಲವೆ..
ರಾಷ್ಟ್ರವನು ರಕ್ಷಿಸಲಿಲ್ಲವೇ..
ತ್ರಿವೇಣಿ,ಅನುಪಮಾ ನಿರಂಜ‌ನ
ಲೇಖನಿಯ ಮೂಲಕ ತಿಳುವಳಿಕೆ ನೀಡಲಿಲ್ಲವೇ.
ಸಮಾಜದಿ ಜಾಗೃತಿ ಮೂಡಿಸಲಿಲ್ಲವೇ..

ದಿನ ನಿತ್ಯ ವರದಿಯಾಗುತಿದೆ
ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ,
ಮಗುವಾಗಲಿ, ತಾಯಿಯಾಗಲಿ
ಹಿರಿಯ ಅಜ್ಜಿಯೇ ಇರಲಿ
ನಡೆಯುತ್ತಿದೆ ಕಾಮುಕರ ದುರ್ನಡತೆ..

ಇದಕೆ ಮುಕ್ತಿ ಎಂದು…
ಹೆಣ್ಣಿಗೂ ಗೌರವವಾಗಿ
ಬದುಕಲು ಅವಕಾಶ ನೀಡಿ,
ಗೌರವದಿಂದ ಕಾಣಿ,
ಹೆಣ್ಣು ಗಂಡು ಸರಿಸಮಾನರೆಂದು ಗುರ್ತಿಸಿ, ಗೌರವಿಸಿ..


ಡಾ.ಎ.ಪುಷ್ಪಾ ಅಯ್ಯಂಗಾರ್,
ಸಾಹಿತಿಗಳು, ಶಿಕ್ಷಣ ತಜ್ಞರು
ಸರಸ್ವತಿ ಪುರಂ ಬಡಾವಣೆ
ಮೈಸೂರು

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group