ದೇವರಶೀಗಿಹಳ್ಳಿ: ಕರ್ನಾಟಕ ರಾಜ್ಯೋತ್ಸವವನ್ನು ವಿಶ್ವಭಾರತಿ ಪ್ರೌಢಶಾಲೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಶಾಲೆಯ ಆಡಳಿತ ಮಂಡಳಿಯ ನಿರ್ದೇಶಕರಾದ ಬಿ.ಎಸ್. ಅಷ್ಟಪುತ್ರಿ, ಎನ್.ಐ. ಬುದ್ನೂರ, ಎಂ.ಐ. ಗುಂಡಗವಿ ಹಾಗೂ ಮುಖ್ಯೋಪಾಧ್ಯಾಯರಾದ ಎಸ್.ಜಿ. ಇಟಗಿ ಸೇರಿದಂತೆ ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ವಿದ್ಯಾರ್ಥಿಗಳು ವಿವಿಧ ಸಾಧಕ ಕನ್ನಡಿಗರ ರೂಪಕಗಳಲ್ಲಿ ಭಾಗವಹಿಸಿ ಊರಿನಲ್ಲಿ ಮೆರವಣಿಗೆ ನಡೆಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಬಿ.ಎಸ್. ಹುಲ್ಲೂರ ಇವರು ಮಕ್ಕಳಿಗೆ ಲೇಜಮ್ ಮತ್ತು ಕೋಲಾಟ ತರಬೇತಿ ನೀಡಿದ್ದರು. ಮಕ್ಕಳು ಪ್ರದರ್ಶಿಸಿದ ಕೋಲಾಟ ಮತ್ತು ಲೇಜಮ್ ಊರಿನಲ್ಲಿ ವಿಶೇಷ ಆಕರ್ಷಣೆಯಾಗಿ ಕಂಡವು.
ಮಕ್ಕಳ ಕನ್ನಡಾಭಿಮಾನ ಕಂಡು ಊರಿನ ನಾಗರಿಕರು ಸಂತೋಷಗೊಂಡು ಹಣ್ಣು ಮತ್ತು ಸಿಹಿತಿನಿಸು ನೀಡಿ ಮಕ್ಕಳನ್ನು ಪ್ರೋತ್ಸಾಹಿಸಿದರು. ಎಂ.ಕೆ. ಹುಬ್ಬಳ್ಳಿ ವಲಯದ ಸಿ.ಆರ್.ಸಿ. ವಿನೋದ ಪಾಟೀಲ ಇವರು ಶಾಲೆಯ ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಒಟ್ಟಾರೆಯಾಗಿ ರಾಜ್ಯೋತ್ಸವ ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರತಿಭೆ ಮತ್ತು ಶಿಕ್ಷಕರ ಶ್ರಮದಿಂದ ಯಶಸ್ವಿಯಾಗಿ, ಸಾಂಸ್ಕೃತಿಕ ವೈಭವದಿಂದ ನೆರವೇರಿತು.

