spot_img
spot_img

ಕರ್ನಾಟಕದ ಕಂಪು ವಿಶ್ವವ್ಯಾಪ್ತಿಯಾಗಿ ಹರಡಿದೆ

Must Read

spot_img
- Advertisement -

ಮೂಡಲಗಿ: ‘ಕನ್ನಡದ ಹಲವಾರು ಕಟ್ಟಾಳುಗಳು ಮತ್ತು ಮಹನೀಯರ ಹೋರಾಟದ ಫಲವಾಗಿ ಇಂದು ಕರ್ನಾಟಕದ ಕಂಪು ವಿಶ್ವವ್ಯಾಪ್ತಿಯಾಗಿ ಹರಡಿದೆ’ ಎಂದು ನಾಗನೂರ ಅರಣ್ಯಸಿದ್ದೇಶ್ವರ ತೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಅನಿಲ ಭಂಡಾರಿ ಹೇಳಿದರು.

ಮೂಡಲಗಿ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್‍ದಿಂದ ಸ್ಥಳೀಯ ಚೈತನ್ಯ ಕೋ.ಆಪ್ ಕ್ರೆಡಿಟ್ ಸೊಸೈಟಿಯ ಸಭಾಭವನದಲ್ಲಿ ರಾಜ್ಯೋತ್ಸವ ನಿಮಿತ್ತವಾಗಿ ಆಯೋಜಿಸಿದ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ವಿಷಯ ಕುರಿತು ಉಪನ್ಯಾಸ ನೀಡಿದ ಅವರು ಕನ್ನಡ ನಾಡು ಈ ವರೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಹೆಮ್ಮೆಯ ನಾಡು ಎಂದರು.

ಸಾನ್ನಿಧ್ಯ ವಹಿಸಿದ್ದ ವಡೇರಹಟ್ಟಿಯ ಅಂಬಾದರ್ಶನ ಪೀಠದ ನಾರಾಯಣ ಶರಣರು ಮಾತನಾಡಿ, ಎರಡು ಸಾವಿರ ಪೂರ್ವ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತಿರುವುದು ಹೆಮ್ಮೆ ಸಂಗತಿಯಾಗಿದೆ. ಕನ್ನಡ ಭಾಷೆಗೆ ಎಂದಿಗೂ ಅಳಿವು ಇಲ್ಲ. ಸೂರ್ಯಚಂದ್ರ ಇರುವಷ್ಟೇ ಅದು ಶಾಶ್ವತ ಎಂದರು. 

- Advertisement -

ಹಳಗನ್ನಡದಿಂದ ಹೊಸಗನ್ನಡದತ್ತ ಸಾಗಿದ ಸಾಹಿತ್ಯ ಬೆಳವಣಿಗೆಯಲ್ಲಿ ಕನ್ನಡ ಭಾಷೆಯು ತನ್ನ ಹಿರಿಮೆ, ಗರಿಮೆಯನ್ನು ಮೆರೆದಿದೆ. ಕನ್ನಡ ನಾಡಿನ ಪ್ರತಿಯೊಬ್ಬರು ಕನ್ನಡ ಭಾಷೆಯನ್ನು  ಪ್ರೀತಿಸಿವುದರ ಮೂಲಕ ಹೆಸರಾದ ಕರ್ನಾಟಕವನ್ನು ಉಸಿರಾಗಿಸಿಕೊಳ್ಳಬೇಕು ಎಂದರು.

ಮಕ್ಕಳ ಸಾಹಿತಿ ಪ್ರೊ. ಸಂಗಮೇಶ ಗುಜಗೊಂಡ, ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ, ನಿವೃತ್ತ ಶಿಕ್ಷಕ ಬಸವರಾಜ ತರಕಾರ ಮಾತನಾಡಿದರು.

ಪೂರ್ಣಿಮಾ ಯಲಿಗಾರ, ಶೈಲಜಾ ಬಡಿಗೇರ, ಅನಿಲ ಮಡಿವಾಳರ, ಚಿದಾನಂದ ಹೂಗಾರ ಸ್ವರಚಿತ ಕವಿತೆಗಳನ್ನು ವಾಚಿಸಿದರು. 

- Advertisement -

ಕಸಾಪ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ ಅಧ್ಯಕ್ಷತೆವಹಿಸಿದ್ದರು. 

ಬಾಲಶೇಖರ ಬಂದಿ, ಡಾ. ಮಹಾದೇವ ಜಿಡ್ಡಿಮನಿ, ಸಿದ್ರಾಮ ದ್ಯಾಗಾನಟ್ಟಿ ವೇದಿಕೆಯಲ್ಲಿ ಇದ್ದರು. 

ಗೀತಾ ಹಿರೇಮಠ ನಿರೂಪಿಸಿದರು, ಸಿ.ಎಸ್. ಮೋಹಿತೆ ವಂದಿಸಿದರು.

- Advertisement -
- Advertisement -

Latest News

ಕವನ : ದ್ರೌಪದಿಯ ಸ್ವಗತ

ದ್ರೌಪದಿಯ ಸ್ವಗತ ನಾನು ಅರಸುಮನೆತನದ ಹೆಣ್ಣು, ಅರ್ಧಜಗದ ಮಣೆ ಹಿಡಿದ ಹೆಣ್ಣು. ಆದರೂ ನನ್ನ ಬದುಕು ಒಂದು ಕತ್ತಲು ಗವಿಯಂತೆ, ನೂರು ಚೂಪಿನ ಕತ್ತಿಗಳ ಮಧ್ಯೆ ಹೆಜ್ಜೆ ಹಾಕಿದಂತಿತ್ತು. ನಾನು ಕದನದ ಕಿಡಿಯಾದೆ ಅವಮಾನಗಳ ನೆರಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group