Homeಸುದ್ದಿಗಳುಬ್ರಿಟನ್ ನಲ್ಲಿ ಕರುನಾಡ ವೈಭವ: KAHO ಒಕ್ಕೂಟದಿಂದ ಆಯೋಜನೆ

ಬ್ರಿಟನ್ ನಲ್ಲಿ ಕರುನಾಡ ವೈಭವ: KAHO ಒಕ್ಕೂಟದಿಂದ ಆಯೋಜನೆ

ಪ್ರತಿ ವರ್ಷದಂತೆ ಈ ವರ್ಷವು ಕೂಡ ಕರುನಾಡಿನ  ಅನಿವಾಸಿ ಹಿಂದೂಗಳ ಒಕ್ಕೂಟ (KAHO) UK ಯ ವಾರ್ಷಿಕ ಶಿಬಿರವನ್ನು ಇತ್ತೀಚೆಗೆ UK ಯ Leamington Spa ನಲ್ಲಿ ಏರ್ಪಡಿಸಲಾಗಿತ್ತು.

KAHO 2018 ರಲ್ಲಿ ಸ್ಥಾಪಿಸಲ್ಪಟ್ಟ , UKಯಲ್ಲಿ  ನೆಲೆಸಿರುವ ಕರ್ನಾಟಕದ ಅನಿವಾಸಿ ಹಿಂದೂಗಳ ಒಕ್ಕೂಟ.

ಈ ವರ್ಷದ ಶಿಬಿರದ ವಿಷಯ ಕರುನಾಡ ವೈಭವವಾಗಿತ್ತು ಮತ್ತು ಮೈಸೂರು ಸಾಮ್ರಾಜ್ಯದ ಘನತೆಯನ್ನು UK ಯಲ್ಲಿ ನೆಲೆಸಿರುವ ಕನ್ನಡಿಗರಿಗೆ ತಿಳಿಸಿಕೊಡುವುದು ಇದರ ಉದ್ದೇಶವಾಗಿತ್ತು. ಹಿಂದೂ ಸ್ವಯಂ ಸೇವಕ ಸಂಘದ ವಿಶ್ವ ವಿಭಾಗದ ಸಂಯೋಜಕರಾದ ರಾಮ ವೈದ್ಯರು ಈ ಶಿಬಿರವನ್ನು ದೀಪಬೆಳಗಿಸಿ ಉದ್ಘಾಟಿಸಿದರು. ಅವರು ಅಲ್ಲಿ ಸೇರಿದ ಕನ್ನಡಿರನ್ನು ಉದ್ದೇಶಿಸಿ, ಹಿಂದೂ ಸಂಸ್ಕೃತಿ ಮತ್ತು ಅದರ ಶ್ರೀಮಂತಿಕೆಯ ಬಗ್ಗೆ ಮಾತನಾಡಿ ವಿಶ್ವದ ವಿವಿಧೆಡೆ  ವಾಸಿಸಿರುವ ಹಿಂದೂಗಳ ಕೊಡುಗೆಯನ್ನು ಕನ್ನಡಿಗರಿಗೆ ತಿಳಿಸಿದರು.

KAHO ಏರ್ಪಡಿಸಿದ ಈ ವರ್ಷದ ಶಿಬಿರಿನಲ್ಲಿ ಇಂಗ್ಲೆಂಡಿನ ವಿವಿಧ ಭಾಗಗಳಾದ ಸ್ಕಾಟ್ಲ್ಯಾಂಡ್ ವೇಲ್ಸ್ ಮ್ಯಾಂಚೆಸ್ಟರ್ ಲಂಡನ್ ಲಿವರ್ ಫುಲ್ ಇಂದ 350 ಕನ್ನಡಿಗರು ಪಾಲ್ಗೊಂಡಿದ್ದರು. ಶಿಬಿರಿನಲ್ಲಿ ಎಲ್ಲರೂ ಸಾಮಾಜಿಕ ಚಿಂತನೆ ಚರ್ಚೆ ಮೈಸೂರಿನ ಸಾಂಸ್ಕೃತಿಕ ವೈಭವ ಹಾಗೂ ಭಾರತೀಯ ಮೂಲದ ಆಟಗಳಲ್ಲಿ ಭಾಗವಹಿಸಿದರು. ಶಿಬಿರ ಸ್ಥಾನವನ್ನು  KAHOದ ಸ್ವಯಂಸೇವಕರು ಬಹಳ ಚೆನ್ನಾಗಿ ಮೈಸೂರು ಸಾಮ್ರಾಜ್ಯದ ಐತಿಹಾಸಿಕ ಕುರುಹುಗಳಾದ ದಸರಾದ ಅಂಬಾರಿ, ಮಹಿಷಾಸುರ , ಅರಮನೆ  ಮುಂತಾದವುಗಳಿಂದ ಅಲಂಕರಿಸಿದ್ದರು. ಅತಿಥಿ ಭಾಷಣಕಾರರಾದ ಡಾ. ಆರತಿ ಕೌಂಡಿಣ್ಯ ಅವರು KAHO ವನ್ನು UK ನಲ್ಲಿ ಇರುವ ಕನ್ನಡಿಗರನ್ನು ಒಗ್ಗೂಡಿಸಿ ಮೈಸೂರು ಸಾಮ್ರಾಜ್ಯದ ಕೊಡುಗೆಯನ್ನು  ಕನ್ನಡಿಗರಿಗೆ ನೆನಪಿಸಿದಕ್ಕೆ ಪ್ರಶಂಸಿಸಿದರು. ಅವರು ಮೈಸೂರು ಸಾಮ್ರಾಜ್ಯ ಸ್ಥಾಪನೆಯಾದ ಇತಿಹಾಸ, ಮೈಸೂರು ಸಾಮ್ರಾಜ್ಯದ ಆಡಳಿತ ಮತ್ತು ಕೊಡುಗೆಗಳನ್ನು ಸಂಕ್ಷಿಪ್ತವಾಗಿ ಹೇಳಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳಾದ ಸಂಗೀತ, ಚರ್ಚೆ, ಛದ್ಮ ವೇಷ , ರಸಪ್ರಶ್ನೆ ಹಾಗೂ ಮೈಸೂರಿನ ಮೈಸಿರಿಗಳಲ್ಲಿ ಮಕ್ಕಳು ಸಂತೋಷದಿಂದ ಪಾಲ್ಗೊಂಡರು. ಈ ಕಾರ್ಯಕ್ರಮಗಳು ಮಕ್ಕಳಿಗೆ ಕನ್ನಡ ಸಂಸ್ಕೃತಿಯನ್ನು ಕಲಿಯಲು ಮತ್ತು ಅವರ ಕಲೆಯನ್ನು ಪ್ರದರ್ಶಿಸಲು ಒಂದು ಉತ್ತಮ ಅವಕಾಶವಾಗಿತ್ತು.

ಯುನೈಟೆಡ್ ಕಿಂಗ್ಡಮಿನ ವಿವಿಧ ಭಾಗಗಳಿಂದ ಬಂದಿರುವ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ನಡೆಸಿಕೊಟ್ಟ ಈ ಶಿಬಿರವು ಸಮಾಜದ ಸಂಘಟನೆ ಒಗ್ಗಟ್ಟು ಹಾಗೂ ಸೇವಾ ಮನೋಭಾವದ ಒಂದು ಉದಾಹರಣೆ.

ಶಿಬಿರದ ಸಮಾರೋಪವನ್ನು ಹಿಂದೂ ಸ್ವಯಂಸೇವಕ ಸಂಘದ UK ಪ್ರಚಾರಕರಾದ  ಚಂದ್ರಕಾಂತ ಶರ್ಮರು ನಡೆಸಿಕೊಟ್ಟರು. ಇವರು KAHO ವನ್ನು ಯಶಸ್ವಿಯಾಗಿ ಶಿಬಿರವನ್ನು ನಡೆಸಿದ್ದಕ್ಕೆ ಅಭಿನಂದಿಸಿ ಇಂತಹ ಒಂದು ಶಿಬಿರವನ್ನು ಪ್ರತಿವರ್ಷ ಭಾರತೀಯ ಮೂಲದ ಕರುನಾಡಿನ ಹೆಮ್ಮೆಯ ಪುತ್ರರು ನಡೆಸಿಕೊಂಡು ಬರುತ್ತಿರುವುದು ತುಂಬಾ ಸಂತಸದ ವಿಷಯ ಎಂದರು.

RELATED ARTICLES

Most Popular

error: Content is protected !!
Join WhatsApp Group