ಬೀದರ: ಕನ್ನಡಿಗರ ಪ್ರೀತಿಯ ಅಪ್ಪು ಕಣ್ಮರೆಯಾಗಿ ಇಡೀ ರಾಜ್ಯವೇ ಶೋಕ ಸಾಗರದಲ್ಲಿ ಮುಳುಗಿದ್ದರೆ ಬೀದರ ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರ ಜಾನಪದ ನೃತ್ಯದಲ್ಲಿ ಬಿಜಿಯಾಗಿದ್ದರು.
ರಾಷ್ಟ್ರ ಪ್ರಶಸ್ತಿ ವಿಜೇತ ಪುನೀತ್ ರಾಜ್‍ಕುಮಾರ್ ರವರನ್ನು ಕಳೆದುಕೊಂಡ ಕರ್ನಾಟಕದ ಶೋಕದಲ್ಲಿ ಮುಳುಗಿದೆ. ಎರಡು ದಿನಗಳಿಂದ ಕಂಠೀರವ ಸ್ಟೇಡಿಯಂ ನಲ್ಲಿ ಸಾರ್ವಜನಿಕರಿಗೆ ಪುನೀತ್ ರಾಜ್‍ಕುಮಾರ್ ನೋಡಲು ಅವಕಾಶ ನೀಡಿದೆ. ರಾಜ್ಯದ ಎಲ್ಲಾ ಮೂಲೆಗಳಿಂದ ಜನ ಸಾಗರ ಹರಿದು ಬಂದಿದೆ ದುಃಖದಲ್ಲಿ ಮುಳುಗಿದೆ ಆದರೆ ಗಡಿ ಜಿಲ್ಲೆ ಬೀದರ್ ನಲ್ಲಿ ನಿನ್ನ ಮಾತ್ರ ಹಬ್ಬದ ವಾತಾವರಣ ಇರುತ್ತದೆ. ಕರ್ನಾಟಕದ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ಬೀದರ್ ಸಾಂಸ್ಕೃತಿಕ ಚೊಂಡಿಮುಖೇಡ ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಡಾನ್ಸ್ ಮಾಡಿದರು.
ಪುನೀತ್ ರಾಜ್‍ಕುಮಾರ್ ಅಂತ್ಯ ಸಂಸ್ಕಾರ ಸಕಲ ಸರಕಾರಿ ಗೌರವದೊಂದಿಗೆ ನಡೆಸಲಾಯಿತು. ಅವರ ಸಾವಿನ ಹಿನ್ನೆಲೆಯಲ್ಲಿ ನ.೧ ರಂದು ಕರ್ನಾಟಕ ರಾಜ್ಯೋತ್ಸವವನ್ನು ಕೂಡ ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಆದರೆ ಇದ್ಯಾವುದರ ಬಗ್ಗೆ ಅರಿವೇ ಇಲ್ಲದಂತೆ ಸಚಿವ ಪ್ರಭು ಚವ್ಹಾಣ ಅವರು ನರ್ತನ ಮಾಡುತ್ತ ಸಂಭ್ರಮಿಸುತ್ತಿರುವುದು ವಿಪರ್ಯಾಸ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ , ಬೀದರ