ಕವನ: ದುಂಡುಮಲ್ಲಿಗೆ

Must Read

ದುಂಡುಮಲ್ಲಿಗೆ

ಅರಳಲು ಬೇಕು ನಿನಗೆ ಕಾಲ ಬೇಸಿಗೆ.
ಮುಂಜಾನೆ ಅರಳುವೆ ನೀ
ಮೆಲ್ಲಗೆ.
ಕಾಣುವೆ ನೋಡಲು ನೀ
ಬೆಳ್ಳಗೆ.
ತೋರಿಸುವೆ ನಿನ್ನ ಮೊಗದಲ್ಲಿ ಸದಾ ಮುಗುಳ್ನಗೆ.
ಮುಂಜಾನೆ ಅರಳಿ ಸಾಯಂಕಾಲ ಬಾಡಿದರೂ ನಿನಗಿಲ್ಲ ಯಾವ
ಹಗೆ.
ಹೇಳು ನೀ ಏರುವೆ ಯಾರ ಮುಡಿಗೆ.
ಮುತ್ತೈದೆಯರ ಮುಡಿಗೆ ಅಥವಾ ದೇವರ ಮುಡಿಗೆ.
ಕಲಿಸು ನಮಗೆ ನಿನ್ನೀ ಸಾರ್ಥಕ ಜೀವನದ ಬಗೆ.


ಉಮಾದೇವಿ. ಯು. ತೋಟಗಿ.
ಸ. ಶಿ. ಸ. ಕ. ಹಿ. ಪ್ರಾ. ಶಾ. ರಾಮಾಪುರ.
ತಾ. ಸವದತ್ತಿ ಜಿ. ಬೆಳಗಾವಿ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group