Homeಕವನಪಂಚಮುಖಿ ಗಣೇಶನಿಗಿದೋ ಕಾವ್ಯ ಪಂಚಾಮೃತ

ಪಂಚಮುಖಿ ಗಣೇಶನಿಗಿದೋ ಕಾವ್ಯ ಪಂಚಾಮೃತ

spot_img

ಒಲುಮೆಯ ಅಕ್ಷರಬಂಧುಳಿಗೆ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು. ಇದು ನಮ್ಮೆಲ್ಲರ ಮೆಚ್ಚಿನ ಮಹಾಗಣಪತಿಗೆ ಅರ್ಪಿಸಿದ ಪಂಚಹನಿಗಳ ಪಂಚಾಮೃತ. ಇಲ್ಲಿವೆ ಹಬ್ಬದ ಹರ್ಷ, ಆದರ, ಆಸ್ಥೆಗಳ ಸಾರುವ ಐದು ಹನಿಗವಿತೆಗಳು. ನನ್ನ ನಿಮ್ಮದೇ ಎದೆಯ ಭಾವ ಭಾಷ್ಯಗಳ ಅಕ್ಷರಪ್ರಣತೆಗಳು. – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.

1. ಗಜಾನನ

ಮಾತೃಭಕ್ತಿಯ ವಿರಾಟ್ ಪ್ರದರ್ಶನ
ಮೂಡಿಸುವ ಭಾವೈಕ್ಯತೆ ಸಂಚಲನ
ಹರಡಿಹ ಪಂಚತತ್ವಗಳ ಸಂಕೀರ್ತನ
ಯುಗಯುಗಕು ಜಗಕೆ ಚಿರನಿದರ್ಶನ
ಸಂಸ್ಕೃತಿ ಸಂಸ್ಕಾರದ ಮೇರು ಗಜಾನನ.!

*****************

2. ಮನವಿ 

ಬಂದ ಬಂದ ಗಣೇಶ ಬಂದ
ಎಲ್ಲರೂ ಸರಿದು ಜಾಗಬಿಡಿ
ಮೋಜು ಮಸ್ತಿಗಳ ಸೈಡಿಗಿಡಿ
ಎದೆಯ ಭಕುತಿ ಎದುರುಗಿಡಿ
ಸಂಸ್ಕಾರ ಪ್ರೀತಿ ನೀತಿ ಕಾಪಾಡಿ.!

***************

3. ನಿದರ್ಶನ 

ಮಣ್ಣಿನಿಂದ ತಳೆವನು ಜನನ
ಗರಿಕೆ ಪತ್ರೆಗಳಿಂದಲೇ ಅರ್ಚನ
ಕಡೆಗೆ ನೀರಿನೊಳಗೆ ವಿಸರ್ಜನ
ಅದೆಷ್ಟು ತತ್ವ ಸಾರಿಹ ಗಜಾನನ
ಪರಿಸರ ಸ್ನೇಹದ ಸತ್ಯನಿದರ್ಶನ.!

*******************

4. ವರಸಿದ್ದಿನಾಯಕ

ಉಂಡೆ, ಕರಿಗಡುಬು, ಮೋದಕ
ಪ್ರಿಯ ನಮ್ಮ ಈ ಸಿದ್ದಿವಿನಾಯಕ
ಸಕಲ ವಿದ್ಯಾ ಬುದ್ದಿ ಪ್ರದಾಯಕ
ಸತ್ಯ ಸತ್ವ ತತ್ವಗಳ ಅಧಿನಾಯಕ
ಸಮಸ್ತ ಸನ್ಮಂಗಳಗಳ ನಿತ್ಯಕಾರಕ.!

********************

5. ವಿನಂತಿ

ಬೇಡವೊ ಬೇಡ ಬಗೆ ಬಗೆ ಬಣ್ಣ
ರಾಸಾಯನಿಕಗಳ ಬಳಸದಿರಣ್ಣ
ಮಣ್ಣಿನ ಗಣಪನೆ ಸಾಕೋ ಅಣ್ಣ
ಇಂದಿನ ಹಬ್ಬದ ಸಂತಸ ಸಡಗರ
ಕೆಡಿಸದಿರಲೆಂದು ನಮ್ಮೀ ಪರಿಸರ.!

ಎ.ಎನ್.ರಮೇಶ್. ಗುಬ್ಬಿ.

RELATED ARTICLES

Most Popular

error: Content is protected !!
Join WhatsApp Group