ಮೊನ್ನೆ ಊರಿಗೆ ಹೋದಾಗ ನಮ್ಮ ಮನೆಗೂ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬಂದಿತ್ತು.!
- ಪ್ರತಿ ಮನೆಯ ಗ್ರಹ ಲಕ್ಷ್ಮಿಗೆ 2000 ರೂಪಾಯಿ
- 200 ವಿದ್ಯುತ್ ಘಟಕ ಉಚಿತ.
- 10kg ಅಕ್ಕಿ
- ನಿರುದ್ಯೋಗ ಪದವಿದರಿಗೆ 3000
- ಮಹಿಳೆಯರಿಗೆ ಉಚಿತ ಪ್ರಯಾಣ
- ಕಾರ್ಡ್ ನೋಡಿದ ಕೂಡಲೇ ನನ್ನ ಮನಸಲ್ಲಿ ಒಂದು ಲಾಜಿಕ್ ಬಂತು.
ನಾನು ನನ್ನ ಹೆಂಡತಿ ಇಬ್ಬರೂ ಪದವಿದರರು. ಅಲ್ಲಿ ಇಲ್ಲಿ ಸಣ್ಣ ಪುಟ್ಟ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿ ಜೀವನ ನಡೆಸಿ ಸುಸ್ತಾಗಿ ಹೋಗಿದೆ. ಮಾಲೀಕನ ಮುಂದೆ ಕೈ ಕಟ್ಟಿ, ಫೈಲ್ ಹಿಡಕೊಂಡು, ತಿಂಗಳ ಕೊನೆಗೆ ಪಗಾರಕ್ಕಾಗಿ ಕೈ ಚಾಚಿ ಬಸವಳಿದು ಬೇಜಾರ್ ಆಗಿ ಬಿಟ್ಟಿದೆ.
ಥಟ್ಟನೆ ನನಗೆ ಅನಿಸಿದ್ದು,
೧. ನಾವ್ಯಾಕೆ ನಿರುದ್ಯೋಗಿ ಆಗಬಾರದು???
ನಿರುದ್ಯೋಗಿಗಳಿಗೆ 3000 ಕೊಡ್ತಾರೆ.
ಅಂದ್ರೆ ನಾನು ನನ್ನ ಹೆಂಡತಿ ಸೇರಿ 6000 ರೂಪಾಯಿಗಳನ್ನು ಮನೆಯಲ್ಲಿ ಕೂತು ಗಳಿಸಬಹುದು. ನಾವ್ಯಾಕೆ ದುಡಿಯಬೇಕು!!!!?
೨. ತಿಂಗಳ ಪೂರ್ತಿ ಮನೆಯಲ್ಲಿ ಕೂತು, ದಿನಕ್ಕೆ ಮೂರು ಸಲ ಅಲ್ಲ ಐದು ಸಲ ತಿನ್ನೋಕೆ ಹತ್ತು+ಹತ್ತು= ಇಪ್ಪತ್ತು ಕೆಜಿ ಅಕ್ಕಿ. ಅದು ಹೊರಗಿನ ಬಿಸಿಲು ನೋಡದೆ!!!
೩. ನನ್ನ ಮನೆಯೊಡತಿ ಗೃಹ ಲಕ್ಷ್ಮಿ ಯೋಜನೆ ಅಂತ ಮತ್ತೆ 2000.!!
ಅಲ್ಲಿಗೆ ಒಟ್ಟು ಎಂಟು ಸಾವಿರ ರೂಪಾಯಿಗಳು ತಿಂಗಳಿಗೆ.!!!!
೪. ಬೇಜಾರ್ ಆಗಬಾರದು ಅಂತ ದಿನ ಪೂರ್ತಿ ಟಿವಿ ನೋಡುತ್ತಾ, ಹಾಡು ಕೇಳುತ್ತಾ, ನ್ಯೂಸ್ ಕೇಳುತ್ತಾ ಕಾಲ ಕಳೆಯಬಹುದು. ಅದಕ್ಕೆ ಅಂತ ಎರಡು ನೂರು ಯೂನಿಟ್ ವಿದ್ಯುತ್ ಉಚಿತ!!!
೫. ನಿರುದ್ಯೋಗಿ ಯೋಜನೆಯಲ್ಲಿ ಬಂದಂತಹ 6000 ಗಳು ಹಾಗೂ ಗ್ರಹಲಕ್ಷ್ಮಿಯಲ್ಲಿ ಬಂದಂತ 2000 ಸಾವಿರ ರೂಪಾಯಿಗಳನ್ನು ತೆಗೆದುಕೊಂಡು ಉಚಿತವಾಗಿ ಪ್ರಯಾಣ ಮಾಡುವ ಬಸ್ಸಿನಲ್ಲಿ ಮಾರುಕಟ್ಟೆಗೆ ಹೋಗಿ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಬರುವುದು ಮತ್ತು ಸಂಬಂಧಿಕರ ಮನೆಗೆ ಹೋಗಲು ಹೆಣ್ಣು ಮಕ್ಕಳಿಗೆ ಉಚಿತ ಪ್ರಯಾಣ.
Wow!!!
ದುಡಿಯದೇ ನಾನು ನನ್ನ ಹೆಂಡತಿ ಇಬ್ಬರೂ ಸೇರಿ ಮನೆಯಲ್ಲಿ ಕೂತು ಗಳಿಸಬಹುದು.!!!
ಭಾರತದ ಆರ್ಥಿಕತೆಗೆ ಬೆಂಕಿ ಹತ್ತಿ ಉರಿಯಬಹುದು.
ಅದಕ್ಕೂ ನಮಗೂ ಸಂಬಂಧ ಇಲ್ಲ.,
ಜಿಡಿಪಿ ನೆಲ ಕಚ್ಚಿ ಹೋಗಬಹುದು ನಮಗೂ ಅದಕ್ಕೆ ಸಂಬಂಧ ಇಲ್ಲ.
ಉದ್ಯೋಗಿಗಳ ಅಭಾವದಿಂದ ಎಲ್ಲ ಖಾಸಗಿ ಕಂಪೆನಿಗಳ ಷೇರು ನೆಲಕ್ಕಿಳಿದು ಸೂಚ್ಯಂಕ ಹಾಳಾಗಿ ಹೋಗಲಿ ನಮಗೂ ಅದಕ್ಕೂ ಸಂಬಂಧ ಇಲ್ಲ.
ಯಾವುದೇ ಖರ್ಚಿಲ್ಲದೆ ಮನೆಯಲ್ಲಿ ಕೂತು
ಇದನ್ನೆಲ್ಲಾ ಯೋಚಿಸಿ ಒಂದೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಯೋಜನೆ ಮಾಡಲು ಸಾಧ್ಯನಾ ಅಂತ ಇನ್ನೊಂದು ದಿಕ್ಕಿನಲ್ಲಿ ಆಲೋಚಿಸಿದೆ ಆಗ ಅನ್ನಿಸ್ತು ಇದನ್ನ ಮಾಡಲು ರಾಜ್ಯ ಬಜೆಟ್ ನ ಅರ್ಧಕ್ಕಿಂತ ಜಾಸ್ತಿ ಹಣ ಬೇಕು ಅಲ್ಲಿಗೆ ಬೇರೆ ಯಾವುದೇ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ.
ಬಜೆಟ್ ಜಾಸ್ತಿ ಮಾಡಬೇಕು ಅಂದ್ರೆ ಸಾಲ ಮಾಡಬೇಕು ಕೊನೆಗೆ ರಾಜ್ಯದಲ್ಲಿ ದುಡಿಯುವ ವರ್ಗ ಇಲ್ಲದೇ ಸಾಲ ತೀರಿಸಲು ಆಗದೆ ನಮ್ಮ ಮಕ್ಕಳು ದಿವಾಳಿ ರಾಜ್ಯದಲ್ಲಿ ಇನ್ನೊಂದು ಶ್ರೀಲಂಕಾ, ಇನ್ನೊಂದು ಪಾಕಿಸ್ತಾನ, ಇನ್ನೊಂದು ಸೋಮಾಲಿಯ ತರ ತುತ್ತು ಅನ್ನಕ್ಕೂ ಬೇರೆಯವರ ಮುಂದೆ ಭಿಕ್ಷೆ ಬೇಡುವಂತೆ ಮಾಡುವ ಉದ್ದೇಶ ಮಾತ್ರ ಕಾಂಗ್ರೆಸ್ ಗೆ ಇರೋದು ಹೊರತು ಜನಪರ, ದೂರದೃಷ್ಟಿ, ಭವಿಷ್ಯದ ಯೋಜನೆ ಕಲ್ಪನೆ ಯಾವುದು ಕಾಂಗ್ರೆಸ್ ಗಾಗಲಿ ಅದರ ನಾಯಕರಿಗಾಗಲಿ ಇಲ್ಲ ಅವರಿಗೆ ಬೇಕಾಗಿರೋದು ಅಧಿಕಾರ ಕುರ್ಚಿ ಅಷ್ಟೇ.
ಒಮ್ಮೆ ಅಧಿಕಾರ ಸಿಕ್ಕಿದ್ರೆ ಹೇಗಾದ್ರೂ ಲೂಟಿ ಮಾಡಿ ತಮ್ಮ ಜೀವನ ಕಟ್ಟಿಕೊಳ್ಳಬಹುದು ಆದ್ದರಿಂದ ಜನರಿಗೆ ಬೇಕಾಬಿಟ್ಟಿ ಆಮಿಷ ತೋರಿಸಿ,, ಹೇಗಾದ್ರೂ ಒಂದ್ಸಲ ಕುರ್ಚಿ ಪಡೆಯೋಣ ಅನ್ನೋದಷ್ಟೇ ಗುರಿ ಹೊರತು ಪ್ರಜೆಗಳ ಭವಿಷ್ಯ, ರಾಜ್ಯ ದೇಶದ ಭದ್ರತೆ,, ಮುಂದಿನ ಪೀಳಿಗೆಯ ಕಿಂಚಿತ್ ಕಾಳಜಿ ಅವರಲ್ಲಿ ಇಲ್ಲ. ಹಾಗಾಗಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರಬಾರದು,,ಇನ್ಮುಂದೆ ಅವರ ಅಭ್ಯರ್ಥಿಗೆ ವೋಟ್ ಹಾಕಬಾರದು ಅಂತ ಈ ವರೆಗೂ ಆ ಪಕ್ಷಕ್ಕೆ ವೋಟ್ ಹಾಕಿ ನಾನು ಎಂತ ತಪ್ಪು ಮಾಡ್ತಾ ಇದ್ದೆ. ನನ್ನ ಮಕ್ಕಳ ಭವಿಷ್ಯವನ್ನು ನಾನೇ ಹಾಳು ಮಾಡಲು ಸಹಕರಿಸುತ್ತಿದ್ದೆ ಅನ್ನುವ ಅರಿವಾಗಿ ನಾನು ಕಾಂಗ್ರೆಸ್ ನಿಂದ ಶಾಶ್ವತವಾಗಿ ದೂರವಾಗಲು ನಿರ್ಧರಿಸಿದ್ದೇನೆ.
–ಇಂತಿ ಜಾಗ್ರತನಾದ ಮಾಜಿ ಕಾಂಗ್ರೆಸ್ ಮತದಾರ