ಕಿತ್ತೂರು ತಾಲೂಕು : ಮುಖ್ಯ್ಯೊಪಾಧ್ಯಾಯರ ಸಂಘದ ಪದಾಧಿಕಾರಿಗಳ ಆಯ್ಕೆ

Must Read

ಬೆಳಗಾವಿ: ಕರ್ನಾಟಕ ರಾಜ್ಯ ಸರಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಕಿತ್ತೂರು ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆಯನ್ನು ಶನಿವಾರ ದಿ 29 ರಂದು ನಡೆದ ತಾಲೂಕಿನ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ ಎಮ್ ಎಸ್ ಪಾಟೀಲ (ಅಂಬಡಗಟ್ಟಿ), ಅಧ್ಯಕ್ಷರಾಗಿ ಎಸ್ ಎ ನದಾಫ (ಬಸಾಪುರ), ಕಾರ್ಯಾಧ್ಯಕ್ಷ ರಾಗಿ ಪಿ ಎನ್ ನಾಡಗೌಡ (ಮಲ್ಲಾಪುರ), ಪ್ರಧಾನ ಕಾರ್ಯದರ್ಶಿ ಗಳಾಗಿ ಬಿ ಬಿ ಹಿರೇಮಠ (ತಿಗಡೊಳ್ಳಿ), ಖಜಾಂಚಿ ಗಳಾಗಿ ಬಿ ಬಿ ಮಾರಿಹಾಳ (ಕುಲವಳ್ಳಿ ), ಉಪಾಧ್ಯಕ್ಷರುಗಳಾಗಿ ಎಚ್ ಬಿ ಬೋಗಾರ (ಕಲಭಾವಿ), ಆರ್ ಎಸ್ ಹೋಳಿ (ಹೊಸ ಕಾದರವಳ್ಳಿ), ಶ್ರೀಮತಿ ಎಮ್ ಸಿ ಹಿರೇಮಠ (ವೀರಾಪುರ) ಸಹಕಾರ್ಯದರ್ಶಿ ಗಳಾಗಿ , ಶ್ರೀಮತಿ ಎಸ್ ಎಸ್ ಸಾವ್ಕಕನವರ (ಬಚ್ಚನಕೇರಿ), ಬಿ ಎ ಮಾರ್ಗನಕೊಪ್ಪ (ಹೊನ್ನಿದಿಬ್ಬ), ಎಸ್ ಕೆ ಬಡಿಗೇರ (ದೇಗುಲ ಹಳ್ಳಿ), ಎಸ್ ಬಿ ಹುಬ್ಬಳ್ಳಿ (ದೇಮಟ್ಟಿ), ಸಂಘಟನಾ ಕಾರ್ಯದರ್ಶಿಗಳಾಗಿ ಎಮ್ ಯು ಕಡಬಿ (ಹೊನ್ನಾಪುರ),ಶ್ರೀಮತಿ ವಿದ್ಯಾ ಚಂಗೋಲಿ (ಶಿವನೂರ ), ಎಮ್ ಕೆ ಬುಲ ಬುಲೆ (ಬಸರಕೋಡ ) ರವರು ಆಯ್ಕೆ ಯಾಗಿರುವರು, ಅವರ ಆಯ್ಕೆಯನ್ನು ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ ಸುಣಗಾರ ರವರು ಸಂಘದ ನಿಯಮಾವಳಿ ಯನ್ವಯ ಅನುಮೋದಿಸಿ, ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳನ್ನು ಅಭಿನಂದಿಸಿ ಅವರ ಪರವಾಗಿ ಅಧ್ಯಕ್ಷರಾದ ಎಸ್ ಎ ನದಾಫ್ ರವರನ್ನು ಶಾಲು ಹೊದಿಸಿ, ಮಾಲೆ ಹಾಕಿ, ಮೌಲ್ಯ ಶಿಕ್ಷಣ ಪುಸ್ತಕ ನೀಡಿ ಗೌರವಿಸಿ ಪದಾಧಿಕಾರಿಗಳ ಆಯ್ಕೆ ಮಾಡಿದ ಅನುಮೋದನೆ ಮಾಡಿದ ಪತ್ರ ನೀಡಿ ಸಂಘಟನೆ ಬಲಗೊಳಿಸಲು ಕೋರಿದರು, ಜಿಲ್ಲಾ ಸಂಘದ ಗೌರವಾಧ್ಯಕ್ಷ ರಾದ ಶಶಿಧರ ರೊಟ್ಟಿಯವರು ಉಪಸ್ಥಿತರಿದ್ದರು

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group