ಉಪಚುನಾವಣೆಯ ಕಾರಣ ಕುಮಾರಸ್ವಾಮಿಗೆ ಮುಸ್ಲಿಮರ ಮೇಲೆ ಪ್ರೀತಿ ಹೆಚ್ಚಾಗಿದೆ – ಎಸ್.ಎಮ್ ಪಾಟೀಲ

Must Read

ಸಿಂದಗಿ– ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಅಲ್ಪಸಂಖ್ಯಾತರ ಮೇಲೆ ಎಂದೂ ಇಲ್ಲದ ಪ್ರೀತಿ ಧಿಡೀರನೆ ಉಪ ಚುನಾವಣೆಯ ಸಂದರ್ಭದಲ್ಲಿ ಉಕ್ಕಿದೆ ಇದು ಮುಸ್ಲಿಮರ ಬೆಳವಣಿಗೆಯಿಂದಲ್ಲ ಮುಸ್ಲಿಮರನ್ನು ಬಳಕೆ ಮಾಡಿಕೊಂಡು ಬಾಹ್ಯವಾಗಿ ಬಿಜೆಪಿ ಗೆಲುವಿಗೆ ಶ್ರಮ ವಹಿಸುತ್ತಿದ್ದಾರೆ ಇವರ ಯಾವ ಕುತಂತ್ರ ನಡೆಯುವುದಿಲ್ಲ ಸಿಂದಗಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ರಾಜ್ಯ ಕೆಪಿಸಿಸಿ ರಾಜ್ಯ ವಕ್ತಾರ ಎಸ್.ಎಮ್.ಪಾಟೀಲ ಗಣಿಹಾರ ಹೇಳಿದರು.

ಅವರು ಪಟ್ಟಣದ ಖಾಸಗಿ ಹೊಟೆಲ್ ವೊಂದರಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಮಹಿಳೆಯರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಶೇ. 33 ರಷ್ಟು ಅವಕಾಶ ನೀಡುವುದಾಗಿ ಭರವಸೆ ನೀಡಿದ ಅವರು ಇದು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಅಂಗೀಕಾರವಾಗಬೇಕು ಇಲ್ಲದಿದ್ದಲ್ಲಿ ಕುಮಾರಸ್ವಾಮಿ ಅವರು ಅವಕಾಶವಾದಿ ರಾಜಕಾರಣಿ ಎಂಬುದು ತಿಳಿದುಬರುತ್ತದೆ ಎಂದರು.

ಉಪಚುನಾವಣೆಯಲ್ಲಿ ಮುಸ್ಲಿಮರಿಗೆ ಜೆಡಿಎಸ್ ಟಿಕೇಟ್ ನೀಡಿದರೆ ಕಾಂಗ್ರೆಸ್ ನ ಮತಗಳು ವಿಭಜನೆಯಾಗಿ ಬಿಜೆಪಿಗೆ ಲಾಭವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡು ರಾಜಕಾರಣ ಮಾಡುತ್ತಿರುವುದು ಜನತೆಗೆ ತಿಳಿಯುವದಿಲ್ಲವೆ ? ಎಂದು ಪ್ರಶ್ನಿಸಿದ ಗಣಿಹಾರ ಅವರು, ಜೆಡಿಎಸ್ ಭದ್ರ ಕೋಟೆಯಾದ ಮಂಡ್ಯ, ರಾಮನಗರ, ಮೈಸೂರು, ಕೋಲಾರ ಸೇರಿದಂತೆ ಇತರೆ ಪ್ರದೇಶಗಳಲ್ಲಿ ಎಷ್ಟು ಜನ ಮುಸ್ಲಿಮರಿಗೆ ಟಿಕೇಟ್ ನೀಡಿ ಶಾಸಕ ಮಾಡಿದ್ದೀರಿ ಜಿಲ್ಲಾ ಪಂಚಾಯತ ಸದಸ್ಯ ಮಾಡಿದ್ದೀರಿ ಮುಸ್ಲಿಂರನ್ನು ಬಲಿ ಪಶುಮಾಡಲು ಹೊರಟಿರುವ ನಿಮಗೆ ನೈತಿಕತೆ ಇದ್ದರೆ ಸಿಂದಗಿ ಉಪ ಚುನಾವಣೆಯ ಪ್ರಚಾರಕ್ಕೆ ಬಂದಾಗ ಬಹಿರಂಗವಾಗಿ ವೇದಿಕೆಯನ್ನು ನೀಡುತ್ತೇವೆ ತಾವು ತಮ್ಮ ಅಧಿಕಾರದ ಅವಧಿಯಲ್ಲಿ ಎಷ್ಟು ಮುಸ್ಲಿಂ ಜನತೆಯ ಕಲ್ಯಾಣಕ್ಕೆ ಶ್ರಮ ವಹಿಸಿದ್ದೀರಿ ಎಂಬುದು ಮುಸ್ಮಿಂ ಸಮಾಜದವರೊಂದಿಗೆ ಚರ್ಚಿಸಿ ಅದನ್ನು ಸಾಬಿತು ಮಾಡಿರಿ ಎಂದು ಸವಾಲು ಹಾಕಿದರು.

ಮುಸ್ಲಿಂ ಸಮಾಜದ ಮುಖಂಡ ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಅವರನ್ನು ರಾಜ್ಯಸಭಾ ಸದಸ್ಯ ಸ್ಥಾನವನ್ನು ಮುಂದುವರೆಸಲು ಹಿಂದೇಟು ಹಾಕಿದವರು ನೀವು, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಿಮ್ಮ ಪಾಲಿನ 13 ಸಚಿವ ಸ್ಥಾನಗಳ ಪೈಕಿ ಯಾವ ಮುಸ್ಲಿಂ ನಾಯಕನಿಗೆ ಸಚಿವ ಸ್ಥಾನ ನೀಡಿದ್ದೀರಿ. 9 ಜನ ಒಕ್ಕಲಿಗ ಸಮುದಾಯದ ನಾಯಕರಿಗೆ ಸಚಿವ ಸ್ಥಾನ ನೀಡಿ ಜಾತಿವಾದ ಮಾಡಿದ್ದೀರಿ ಆಗ ಎಲ್ಲಿ ಹೋಗಿತ್ತು ನಿಮ್ಮ ಮುಸ್ಲಿಂರ ಮೇಲಿನ ಪ್ರೀತಿ ಇದು ಮಹಾಭಾರತದ ದೃತರಾಷ್ಟ್ರನ ಆಲಿಂಗನವನ್ನು ನೆನಪಿಸಿಕೊಡುತ್ತದೆ ನೀವು ಎಷ್ಟೇ ಪ್ರಯತ್ನ ಪಟ್ಟರು ಈ ಕ್ಷೇತ್ರ ಪ್ರಸ್ತುತ ಕಾಂಗ್ರೆಸ್ ಪಕ್ಷದ ಪರವಾಗಿ ನಿಂತಿದೆ. ಸಿಂದಗಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ನಿಶ್ಚಿತ ಎಂದರು.

ವರದಿ : ಪಂಡಿತ್ ಯಂಪೂರೆ, ಸಿಂದಗಿ

Latest News

ಮಕ್ಕಳಲ್ಲಿ ಸಂಸ್ಕಾರದ ಗುಣಗಳು ಕಡಿಮೆಯಾಗುತ್ತಿರುವುದು ವಿಷಾದನೀಯ – ಕಲಶೆಟ್ಟಿ

ಸಿಂದಗಿ-ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಮಾನವೀಯ ಸಂಬಂಧಗಳನ್ನು ಬೆಳೆಸಿಕೊಳ್ಳಬೇಕು ಇಂದು ಸಂಸ್ಕಾರದ ಗುಣಗಳು ಮಕ್ಕಳಲ್ಲಿ ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದು ನಿವೃತ್ತ ಉಪನ್ಯಾಸಕ ಎಸ್.ಎಸ್.ಕಲಶೆಟ್ಟಿ ಹೇಳಿದರು.ಅವರು ಪಟ್ಟಣದ ಶ್ರೀ ಸಾತವೀರೇಶ್ವರ...

More Articles Like This

error: Content is protected !!
Join WhatsApp Group