- Advertisement -
ಮೂಡಲಗಿ – ವಿದ್ಯಾರ್ಥಿಗಳಿಗೆ ಕಲಿಯಲು ಇನ್ನಷ್ಟು ಅನುಕೂಲವಾಗಲೆಂದು ಕಿತ್ತೂರು ರಾಣಿ ಚನ್ನಮ್ಮ ತೋಟಗಾರಿಕಾ ಮಹಾವಿದ್ಯಾಲಯ, ಅರಭಾವಿ, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ ಇವರ ವತಿಯಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ. ವಿದ್ಯಾರ್ಥಿಗಳಿಗೆ ಲ್ಯಾಪಟಾಪ್ ಮತ್ತು ಪುಸ್ತಕಗಳನ್ನು ವಿತರಿಸಲಾಯಿತು.
ಬಿ.ಎಸ್‌ಸಿ. (ತೋಟಗಾರಿಕೆ) ತೃತೀಯ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಲ್ಯಾಪ್ ಟಾಪ್ ವಿತರಣೆ ಮಾಡಲಾಯಿತು.
ವಿತರಣಾ ಕಾರ್ಯಕ್ರಮವು ಮಹಾವಿದ್ಯಾಲಯದ ಡೀನ್ ಡಾ. ಎಮ್. ಜಿ. ಕೆರುಟಗಿ, ಎಸ್.ಸಿ ಮತ್ತು ಎಸ್.ಟಿ. ಕೋಶದ ಮುಖ್ಯಸ್ಥರಾದ ಡಾ. ವಿಲಾಸ ಡಿ. ಗಸ್ತಿ, ಡಾ. ಪ್ರವೀಣಕುಮಾರ
ಎಸ್.ಜಿ., ಎಡಿಎಸ್‌ಡ್ಲೂ ಹಾಗೂ ಹಣಮಂತರಾವ ಜೋಗನ, ಸಹಾಯಕ ಪ್ರಾಧ್ಯಾಪಕರು ಇವರ ಸಮ್ಮುಖದಲ್ಲಿ ನಡೆಯಿತು.
- Advertisement -
ಮಹಾವಿದ್ಯಾಲಯದ ಭೋದಕ, ಭೋದಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕು. ಚಂದನ ಅವರು ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು.