ಶಾಸಕ ರಮೇಶ ಭೂಸನೂರ ರವರಿಗೆ ಸನ್ಮಾನ

Must Read

ಸಿಂದಗಿ: ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ ತಾಲೂಕು ಘಟಕದ ವತಿಯಿಂದ ಶಾಸಕ ರಮೇಶ ಭೂಸನೂರ ರವರಿಗೆ ಅವರ ನಿವಾಸದಲ್ಲಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅದ್ಯಕ್ಷ ಬುಳ್ಳಪ್ಪ ಡಿ, ಮಾತನಾಡಿ, ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಮಸ್ಯೆಗಳಾದ ಪಿಂಚಣಿ, ಕಾಲ್ಪನಿಕ ವೇತನ ವರದಿ ಹಾಗೂ ಜ್ಯೋತಿ ಸಂಜೀವಿನಿ ಯೋಜನೆಗಳನ್ನು ನಮ್ಮ ಅನುದಾನಿತ ನೌಕರರಿಗೂ ಜಾರಿ ತರುವಂತೆ ಬರುವ ಅಧಿವೇಶನದಲ್ಲಿ ಚರ್ಚಿಸುವಂತೆ ಮನವಿ ಪತ್ರವನ್ನು ಕೊಡಲಾಯಿತು.

ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ ನಾನು ಸದಾ ನಿಮ್ಮ ಜೊತೆಗೆ ಇರುತ್ತೇನೆ ಹಾಗೆಯೇ ನಿಮ್ಮ ಸಮಸ್ಯೆಗಳ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡಿ ನಿಮಗೆ ನ್ಯಾಯ ಕೊಡಿಸುವ ಜವಾಬ್ದಾರಿ ನನ್ನದು ಎಂದು ಭರವಸೆ ನೀಡಿದರು.

ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾದ್ಯಕ್ಷ ಬಾಬುಗೌಡ ಚೌಧರಿ, ಉಪಾಧ್ಯಕ್ಷ ಶಿವಲಿಂಗ ಉಮ್ಮರಗಿ, ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಪುತ್ರ ಎಸ್. ಕಿರನಳ್ಳಿ, ಕೋಶಾದ್ಯಕ್ಷ ಅಶೋಕ ರಾಠೋಡ, ಸಂಘಟನಾ ಕಾರ್ಯದರ್ಶಿ ರಾಮನಗೌಡ ಮಸಳಿ, ಬಿ.ಸಿ.ಶಿರೋಳಕರ, ಮಾಳಪ್ಪ ಹೊಸೂರ, ಶೇವು ರಾಠೋಡ, ಶಿವಾನಂದ ಮರ್ತೂರ, ಪಿಂಚಣಿ ವಂಚಿತರ ನೌಕರರ ಸಂಘದ ಅದ್ಯಕ್ಷ ಅರವಿಂದ ತೇಲಿ, ಮುತ್ತು ಮಂದೇವಾಲಿ, ಎಸ್.ಎಮ್.ಮಳಗೊಂಡ, ಎಸ್.ಕೆ.ಚವ್ಹಾಣ, ಆರ್.ಬಿ.ಬಿರಾದಾರ, ಪ್ರಾಥಮಿಕ ಶಾಲಾ ನೌಕರರ ಸಂಘದ ಅದ್ಯಕ್ಷ ಆನಂದ ಭೂಸನೂರ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group