ಮಕ್ಕಳು ಮೊಬೈಲ್ ಬಿಡಿ, ಪುಸ್ತಕ ಹಿಡಿ ಕಾರ್ಯಕ್ರಮ 

Must Read

ಸಿಂದಗಿ: ಶಾಲಾ ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಗೀಳು ಬಿಡಿಸಲು ಪಾಲಕರು ಮುಂದಾಗಬೇಕು ಎಂದು ಶಿಕ್ಷಕ ಸಾಹಿತಿ ಎಂ ಆರ್ ಡೋಣಿ ಹೇಳಿದರು.

ತಾಲೂಕಿನ ಬಂದಾಳ ಗ್ರಾಮ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಪಟ್ಟಣದ ಅಖಿಲ ಭಾರತ ಮೌನವೀಯತೆ ಸಂದೇಶ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಮಕ್ಕಳೆ ಮೊಬೈಲ್ ಬಿಡಿ, ಮಕ್ಕಳೆ ಪುಸ್ತಕ ಹಿಡಿ ಎಂಬ ವಿನೂತನ ಸಂದೇಶದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಮೊಬೈಲ್ ಬಳಕೆಯನ್ನು ತಗ್ಗಿಸಿ, ಪುಸ್ತಕದತ್ತ ಆಸಕ್ತಿ ಹೊರಳಿಸಿದೆ. ಮಕ್ಕಳಿಗೆ ಮೊಬೈಲ್ ನೀಡದೆ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪೋಷಕರಲ್ಲಿ ಜಾಗೃತಿ ಮೂಡಿಸಬೇಕು . ಮಕ್ಕಳ ಪೋಷಕರ ಸಭೆ ನಡೆಸಿದಾಗ, ಶಿಕ್ಷಕರು ಮೊಬೈಲ್ ಕಾರಣಕ್ಕೆ ತಮ್ಮ ಮಕ್ಕಳು ಪುಸ್ತಕ ಹಿಡಿಯುತ್ತಿಲ್ಲ ಎಂಬ ಪೋಷಕರು ಮುಂದೆ ಶಿಕ್ಷಕರು ತಿಳಿಸಬೇಕು ಎಂದರು.

ಅಖಿಲ ಭಾರತ ಮಾನವೀಯತೆ ಸಂದೇಶ ವೇದಿಕೆಯ ಸದಸ್ಯ ದಾವೂದ ನದ್ವಿ ವಠಾರ ಮಾತನಾಡಿ ಮಾನವೀಯತೆ ಸಂದೇಶ ಮೂಲಕ ಮಕ್ಕಳಲ್ಲಿ ಮೊಬೈಲ್ ಬಳಕೆ ತಗ್ಗಿಸಲು ಪೂರಕವಾಗಿ ಮೊಬೈಲ್ ಬಿಡಿ, ಪುಸ್ತಕ ಹಿಡಿ ಎಂಬ ಸಂದೇಶ ಮಕ್ಕಳಿಗೆ ತಿಳಿ ಹೇಳಬೇಕು ಎಂದರು.

ಶಾಲಾ ಹಿರಿಯ ಶಿಕ್ಷಕ ಚಂದ್ರಶೇಖರ ಬುಯ್ಯಾರ ಮಾತನಾಡಿ, ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳು ತಮಗಿಷ್ಟವಾದ ಪುಸ್ತಕವನ್ನು ಒಂದು ತಾಸು ಓದಿ ಕಡೆಗೆ ಆ ಕುರಿತು ತಮಗೆ ಅರ್ಥವಾಗಿದ್ದನ್ನು ಹಂಚಿಕೊಳ್ಳುತ್ತಾರೆ. ಪ್ರತಿ ಶಾಲೆಯಲ್ಲಿ ಇದನ್ನು ತಪ್ಪದೆ ಮಾಡಲಾಗುತ್ತಿದೆ. ಇದರಿಂದಾಗಿ, ಮಕ್ಕಳಲ್ಲಿ ಪುಸ್ತಕದ ಮೇಲಿನ ಆಸಕ್ತಿ ಹೆಚ್ಚಾಗಿ, ಮೊಬೈಲ್ ಆಕರ್ಷಣೆ ಕಡಿಮೆಯಾಗುತ್ತಿದೆ ಎಂದರು.

ಶಾಲಾ ಮುಖ್ಯಗುರು ನಿಂಗನಗೌಡ ಪಾಟೀಲ. ಮೌಲಾನಾ ಕಲಿಮುಲ್ಲಾ ನದ್ವಿ . ಮೌ.ಇಸ್ಮಾಯಿಲ್ ನದ್ವಿ . ಇಬ್ರಾಹೀಮ ಹುಮನಬಾದ ಮುಸಾ ನದ್ವಿ ವೇದಿಕೆಯ ಮೇಲೆ ಇದ್ದರು.
ಶಿಕ್ಷಕ ಶಿವಶರಣ ಕಂಟಿಗೊಂಡ ಪ್ರಾರ್ಥನ ಗೀತೆ ಹೇಳಿದರು. ಶಿಕ್ಷಕ ಕೃಷ್ಠರಾವ್ ಕುಲಕರ್ಣಿ ಸ್ವಾಗತಿಸಿದರು. ಶಿಕ್ಷಕ ಬಸವರಾಜ ಅಗಸರ ನಿರೂಪಿಸಿದರು. ಶಿಕ್ಷಕ ಪಿ ವ್ಹಿ ಕುಲಕರ್ಣಿ ವಂದಿಸಿದರು

Latest News

ಸೈಡ್ ನೀಡಲಿಲ್ಲ ಎಂಬ ಕಾರಣಕ್ಕೆ ಬಸ್ ಚಾಲಕನನ್ನು ಥಳಿಸಿದ ಬೈಕ್ ಸವಾರ

ಬೀದರ - ಸರ್ಕಾರಿ ಬಸ್ ಚಾಲಕ ಸೈಡ್ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕನನ್ನು ಬಸ್ ನಿಂದ ಕೆಳಗೆ ಇಳಿಸಿ ಬೈಕ್ ಸವಾರ ಹಲ್ಲೆ...

More Articles Like This

error: Content is protected !!
Join WhatsApp Group