‘ಮಹಿಳಾ ಪ್ರತಿಭೆ’ ಕುರಿತ ಉಪನ್ಯಾಸ ಕಾರ್ಯಕ್ರಮ ಇಂದು

0
445

ಮೂಡಲಗಿ – ಮೂಡಲಗಿ ತಾಲೂಕಿನ ಕಸಾಪ, ಕಲ್ಲೋಳಿಯ ಕಸಾಪ ಅರಭಾವಿ ಹೋಬಳಿ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ದಿ.೬ ರಂದು ಬೆಳದಿಂಗಳ ಸಾಹಿತ್ಯ ಚಿಂತನ ಮಂಥನ ಕಾರ್ಯಕ್ರಮದಡಿಯಲ್ಲಿ ‘ ಮಹಿಳಾ ಪ್ರತಿಭೆ’ ಎಂಬ ಸಾಹಿತ್ಯ ಉಪನ್ಯಾಸ ನಡೆಯಲಿದೆ.

ಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಅನುಭವ ಮಂಟಪದಲ್ಲಿ ಸಾಯಂಕಾಲ ೫ ಘಂಟೆಗೆ ನಡೆಯಲಿರುವ ಈ ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಗೋಕಾಕದ ಅಧ್ಯಕ್ಷ ಡಾ. ಶಿವನಗೌಡಾ ಪಾಟೀಲ ವಹಿಸಲಿದ್ದಾರೆ.

ಉಪನ್ಯಾಸಕರಾಗಿ ಡಾ. ಸಿದ್ಧಲಿಂಗಯ್ಯ ಪ್ರತಿಷ್ಠಾನ ಕಲ್ಲೊಳಿ ಇದರ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ಗುರುಸಿದ್ಧಯ್ಯಾ ಹಿರೇಮಠ ಹಾಗೂ ಕಲ್ಲೊಳಿಯ ಅಕ್ಕನ ಬಳಗದ ಉಪಾಧ್ಯಕ್ಷೆ ಶ್ರೀಮತಿ ಸುನಂದಾ ಜಗದೀಶ ಗೊರಗುದ್ದಿ ಆಗಮಿಸಲಿದ್ದಾರೆ.

ಸಮಾರಂಭದಲ್ಲಿ ಕಲ್ಲೋಳಿಯ ಬಸವೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಭೋಜರಾಜ ಬೆಳಕೂಡ ಗೌರವ ಉಪಸ್ಥಿತಿ ಹೊಂದಿರುವರು ಎಂದು ಕಸಾಪ ಕಲ್ಲೋಳಿ ಘಟಕದ ಅಧ್ಯಕ್ಷ ಪ್ರಕಾಶ ಗರಗಟ್ಟಿ ಹಾಗೂ ಮೂಡಲಗಿ ತಾಲೂಕಾ ಕಸಾಪ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.