ಬೆಳಗಾವಿ: ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ದಿಂದ ಮಂಗಳವಾರ ನವೆಂಬರ್ 1 ರಂದು ಮುಂಜಾನೆ:8:30ಕ್ಕೆ ಸ್ಥಳೀಯ ನೆಹರೂ ನಗರದಲ್ಲಿನ “ಕನ್ನಡ ಭವನ” ದಲ್ಲಿ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ವಿಜಯಕುಮಾರ ಮುಚಳಂಬಿ ನಾಡ ಧ್ವಜಾರೋಹಣವನ್ನು ನೆರವೇರಿಸುವರು. ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಮೆಟಗುಡ್ಡ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಆಧಾರ ಪಿ.ಯು ಮಹಾವಿದ್ಯಾಲಯ ಉಪನ್ಯಾಸಕರಾದ ಬಿ. ಬಿ. ಮಠಪತಿ ಅವರು “ಕರ್ನಾಟಕ ಏಕೀಕರಣದ ಮಹತ್ವ ಅಂದು-ಇಂದು” ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.
ಕ.ಸಾ.ಪ.ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕಾ ಅಧ್ಯಕ್ಷರುಗಳು, ಜಿಲ್ಲಾ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ಸಾಹಿತಿಗಳು, ಕಲಾವಿದರು, ಕಸಾಪ ಸರ್ವ ಸದಸ್ಯರು ಮತ್ತು ಸಮಸ್ತ ಕನ್ನಡ ಮನಸ್ಸುಗಳು ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಶೋಭೆ ತರಬೇಕೆಂದು ಕಸಾಪ ಬೆಳಗಾವಿ ಜಿಲ್ಲಾಧ್ಯಕ್ಷೆ ಶ್ರೀಮತಿ.ಮಂಗಲಾ ಶ್ರೀ ಮೆಟಗುಡ್ಡ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಮಾಹಿತಿ:ವರದಿ:
ಆಕಾಶ್ ಅರವಿಂದ ಥಬಾಜ
ಜಿಲ್ಲಾ ಸಹ ಮಾಧ್ಯಮ ಪ್ರತಿನಿಧಿ
ಕನ್ನಡ ಸಾಹಿತ್ಯ ಪರಿಷತ್, ಬೆಳಗಾವಿ ಜಿಲ್ಲೆ,
ಬೆಳಗಾವಿ