spot_img
spot_img

ಖರ್ಗೆ ಕಾಂಗ್ರೆಸ್ ನ ಪ್ರಧಾನಿ ಅಭ್ಯರ್ಥಿಯೂ ಆಗಲಿ

Must Read

- Advertisement -

ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಕರ್ನಾಟಕದ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ ಮಾಡುತ್ತಿರುವುದು ಕರ್ನಾಟಕಕ್ಕೆ ಹೆಮ್ಮೆಯ ವಿಷಯ. ಖರ್ಗೆಯವರು ಕಾಂಗ್ರೆಸ್ ಅಧ್ಯಕ್ಷರಾಗಿ ಒಂದು ವೇಳೆ ಆಯ್ಕೆಯಾದರೆ ರಾಜ್ಯದ ಪಾಲಿಗೆ ಹೆಮ್ಮೆಯ ವಿಷಯವಾಗುತ್ತದೆ.

ಆದರೆ ನಾವು ಹಲವು ವರ್ಷಗಳಿಂದ ನೋಡುತ್ತಿದ್ದಂತೆ ಮಲ್ಲಿಕಾರ್ಜುನ ಖರ್ಗೆಯವರ ಪಕ್ಷ ನಿಷ್ಠೆಗೆ, ಪಕ್ಷಕ್ಕೆ ಅವರು ಸಲ್ಲಿಸಿರುವ ಸೇವೆಗೆ ಸಲ್ಲಬೇಕಾದ ಗೌರವ ಸಲ್ಲಿಯೇ ಎಂದು ಹೇಳಬಹುದು. ಕಾಂಗ್ರೆಸ್ ನಲ್ಲಿ ಇದು ಮೊದಲಿನಿಂದಲೂ ನಡೆದುಕೊಂಡು ಬಂದ ಪದ್ಧತಿ ಇದೆ. ಇಲ್ಲಿ ನಿಷ್ಠರಾದವರನ್ನು ತುಳಿದುಕೊಂಡು ಬರಲಾಗಿದೆ, ಬಂಡಾಯವೆದ್ದವರನ್ನು ಹೊರಹಾಕಲಾಗಿದೆ. ಹಾಗೆ ನೋಡಿದರೆ ಖರ್ಗೆಯವರು ಯಾವಾಗಲೋ ರಾಜ್ಯದ ಮುಖ್ಯಮಂತ್ರಿಯಾಗಬೇಕಿತ್ತು ಆದರೆ ಕಾಂಗ್ರೆಸ್ ಪಕ್ಷದ ಒಳಗಡೆಯೇ ಇರುವ ಕುತಂತ್ರ ಹಾಗೂ ಗಾಂಧಿ ಕುಟುಂಬದ ಗುಲಾಮಿ ಮನಸ್ಥಿತಿಯ ಕೆಲವರು ಖರ್ಗೆಯವರನ್ನು ನೇಪಥ್ಯಕ್ಕೆ ತಳ್ಳಿದ್ದಾರೆನ್ನಬಹುದು. ಇದು ಖರ್ಗೆಯವರಿಗೂ ವೇದ್ಯವಾಗಿರಬಹುದು ಆದರೆ ನೆಹರೂ, ಇಂದಿರಾ ಕಾಲದಿಂದಲೂ ಆ ಕುಟುಂಬಕ್ಕೆ ನಿಷ್ಠ ತೋರುತ್ತ ಬಂದಿರುವ ಖರ್ಗೆಯವರು ಹೈಕಮಾಂಡ್ ವಿರುದ್ಧ ಮಾತನಾಡದೇ ತಮಗಾಗಿರುವ ಅನ್ಯಾಯವನ್ನು ಸಹಿಸಿಕೊಂಡು ಬಂದಿದ್ದಾರೆ.

ಹಾಗೆ ನೋಡಿದರೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿರುವುದೇ ಒಂದು ಆಶ್ಚರ್ಯಕರ ಬೆಳವಣಿಗೆ ! ಯಾಕೆಂದರೆ, ಹಲವಾರು ವರ್ಷಗಳಿಂದ ಸೋನಿಯಾ ಅವರೇ ಪಕ್ಷದ ಅಧ್ಯಕ್ಷರಾಗಿದ್ದರು ಅವರ ಬಿಟ್ಟರೆ ರಾಹುಲ್ ಗಾಂಧಿ ! ಇದರ ಬಗ್ಗೆ ಒಂದು ಜೋಕ್ ಕೂಡ ಹರಿದಾಡುತ್ತಿತ್ತು. ‘ ಸೋನಿಯಾ ಅವರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸೋನಿಯಾ ಅವರನ್ನು ನಾಮಾಂಕನ ಮಾಡಿ, ಸೋನಿಯಾ ಅವರ ಪರವಾಗಿ ಸೋನಿಯಾ ಅವರು ಪ್ರಚಾರ ಮಾಡಿ ಸೋನಿಯಾ ಅವರು ಅಧ್ಯಕ್ಷರಾಗಲು ಶ್ರಮಿಸಿದರು !’ ಎಂದು ! ಈಗ ಪಕ್ಷದ ಅಧ್ಯಕ್ಷ ಸ್ಥಾನ ಬೇರೆಯವರಿಗೆ ಹೋಗುತ್ತಿರುವುದು ಅಚ್ಚರಿಯ ವಿಷಯವಾದರೂ ನಮ್ಮ ರಾಜ್ಯದ ಖರ್ಗೆಯವರು ಸ್ಪರ್ಧಿಸಿರುವುದು ಒಳ್ಳೆಯ ಬೆಳವಣಿಗೆ.

- Advertisement -

ಆದರೆ ಒಂದು ವೇಳೆ ಖರ್ಗೆಯವರು ಆಯ್ಕೆಯಾದರೆ ಪ್ರಧಾನಿ ಅಭ್ಯರ್ಥಿಯೂ ಅವರೇ ಆಗಬೇಕು. ಆದರೆ ಮನಮೋಹನ ಸಿಂಗ್ ಅವರಂತೆ ನಾಮ್ ಕೆ ವಾಸ್ತೆ ಮಾತ್ರ ಪ್ರಧಾನಿ ಆಗಬಾರದು ! ಕಾಂಗ್ರೆಸ್ ಮುಸಲ್ಮಾನರ ಪಾರ್ಟಿ ಎಂದು ಬಹಿರಂಗವಾಗಿಯೇ ಹೇಳಿಕೆ ಕೊಟ್ಟು ತಮ್ಮದು ಜಾತ್ಯತೀತ ಪಕ್ಷ ಎಂದು ಬರುಡೆ ಬಿಡುತ್ತಿರುವ ರಾಹುಲ್ ಸೋನಿಯಾರ ಮಾತನ್ನು ಖರ್ಗೆ ಕೇಳುವಂತಾದರೆ ಅದು ಪಕ್ಷದ ಭವಿಷ್ಯದ ದೃಷ್ಟಿಯಿಂದ, ದೇಶದ ಗೌರವದ ದೃಷ್ಟಿಯಿಂದ ಒಳ್ಳೆಯದಲ್ಲ. ಖರ್ಗೆ ಪ್ರಧಾನಿಯಾಗಬೇಕು, ಒಬ್ಬ ದಿಟ್ಟ ಪ್ರಧಾನಿಯಾಗಬೇಕು ಎಂಬುದು ನಮ್ಮೆಲ್ಲರ ಆಶಯ.


ಉಮೇಶ ಬೆಳಕೂಡ, ಮೂಡಲಗಿ

- Advertisement -
- Advertisement -

Latest News

Shahid Kapoor Birthday: ಈ ಬಾಲಿವುಡ್ ಹೀರೊ ಒಟ್ಟು ಆಸ್ತಿ ಎಷ್ಟು ಗೊತ್ತಾ?

ಶಾಹಿದ್ ಕಪೂರ್ ಬಾಲಿವುಡ್ ನ ಬಹು ಬೇಡಿಕೆಯ ನಟರಲ್ಲಿ ಒಬ್ಬರು. ಇಂದು (ಫೆಬ್ರವರಿ 25) ಅವರ ಜನ್ಮದಿನ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಎರಡು ದಶಕಗಳಿಂದ...
- Advertisement -

More Articles Like This

- Advertisement -
error: Content is protected !!
Join WhatsApp Group