ಬೀದರ: ಮೋದಿಯವರು ಚುನಾವಣಾ ಪ್ರಚಾರದಲ್ಲಿ ತಮ್ಮ ಸರ್ಕಾರದ ಬಗ್ಗೆ ಹೇಳಬೇಕು ಅದು ಬಿಟ್ಟು ಕರ್ನಾಟಕದ ಬಗ್ಗೆ ಅಲ್ಲಿ ಮಾತನಾಡಿದರೆ ಏನು ಪ್ರಯೋಜನ ಎಂದು ಕಾಂಗ್ರೆಸ್ ಮುಖಂಡ ಸಂತೋಷ ಲಾಡ್ ವಾಗ್ದಾಳಿ ನಡೆಸಿದರು.
ಬೀದರನಲ್ಲಿ ಪತ್ರಕರ್ತರೊಡನೆ ಮಾತನಾಡಿದ ಅವರು, ಮಧ್ಯಪ್ರದೇಶದ ಲ್ಲಿ ವ್ಯಾಪಂ ಹಗರಣ ನಡೆಯಿತು. ಸುಮಾರು ೪೮ ಜನರ ಕಗ್ಗೊಲೆಯಾಯಿತು ಅದರ ಬಗ್ಗೆ ಕೇಂದ್ರ ಸರ್ಕಾರ ಮಾತನಾಡಬೇಕು. ಸಿಎಜಿ ಏನು ವರದಿ ಕೊಟ್ಟಿದೆ ಎಂಬುದನ್ನು ಹೇಳಬೇಕು. ಕತಾರನಲ್ಲಿ ಎಂಟು ಜನ ಅಧಿಕಾರಿಗಳ ಗಲ್ಲು ಶಿಕ್ಷೆಯ ಬಗ್ಗೆ ಉತ್ತರ ಕೊಡಬೇಕು ಆದರೆ ಮಾಧ್ಯಮದವರು ಇದನ್ನು ಪ್ರಶ್ನೆ ಮಾಡುವುದಿಲ್ಲ ಎಂದರು
ರಾಜ್ಯದಲ್ಲಿ ಸಿಎಂ ಹಾಗೂ ಡಿಸಿಎಂ ಕುರ್ಚಿ ಕಿತ್ತಾಟದ ವಿಚಾರ ಪ್ರಸ್ತಾಪಿಸಿದಾಗ,ನಾವೆಲ್ಲಿ ಕುರ್ಚಿಗಾಗಿ ಕಿತ್ತಾಡುತ್ತಾ ಇದ್ದೇವೆ ? ನಮ್ಮಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ. ವಿರೋಧಪಕ್ಷ ನಾಯಕನ ಹುದ್ದೆ ಖಾಲಿ ಇದೆ. ವಿಪಕ್ಷಗಳು ಕಿತ್ತಾಡುತ್ತಿವೆಯೇ ಹೊರತಾಗಿ ನಾವಲ್ಲ ಎಂದರು
ರಾಜ್ಯ ಸರ್ಕಾರ ಲೂಟಿಗೆ ಇಳಿದಿದೆ ಎಂಬ ಪ್ರಧಾನಿ ಆರೋಪದ ಬಗ್ಗೆ ಮಾತನಾಡಿ ದ ಲಾಡ್, ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ತಮ್ಮ ಸರ್ಕಾರ ಏನು ಮಾಡಿದೆ ಎಂಬುದನ್ನು ಮೊದಲು ಅವರು ಹೇಳಬೇಕು ಎಂದರು.
ವರದಿ: ನಂದಕುಮಾರ ಕರಂಜೆ, ಬೀದರ