ಅರಿವು ಯುವ ಕೇಂದ್ರದ ಧ್ಯೇಯೋದ್ದೇಶಗಳು ಸಾಕಾರಗೊಳ್ಳಲಿ – ಅಶೋಕ ಹಂಚಲಿ

Must Read

ಬಸವನಬಾಗೇವಾಡಿ – ಅರಿವು ಯುವ ಕೇಂದ್ರ, ಬಸವನಬಾಗೇವಾಡಿ ಮತ್ತು ಶ್ರೀ ಸಂಗಮೇಶ್ವರ ಕಲಾ ಮತ್ತು ವಿಜ್ಞಾನ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ, ಹುಣಶ್ಯಾಳ. ಪಿ.ಬಿ ಸಹಯೋಗದೊಂದಿಗೆ ದಿನಾಂಕ: 13. 01. 2022 ರಂದು ಆಜಾದಿ ಕಾ ಅಮೃತ ಮಹೋತ್ಸವ ಹಾಗೂ ಯುವಕರಲ್ಲಿ ಮಾನಸಿಕ ಸ್ವಾಸ್ಥ್ಯ ಅರಿವು ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು.

ಕಾರ್ಯಕ್ರಮವನ್ನು ಅಶೋಕ್ ಹಂಚಲಿ ಅವರು ಉದ್ಘಾಟಿಸಿ, ಸದೃಢ ಸಮಾಜ ಸದೃಢ ದೇಶ ನಿರ್ಮಾಣವಾಗಲು ಯುವ ಸಮುದಾಯಕ್ಕೆ ಸೂಕ್ತ ಮಾರ್ಗದರ್ಶನ ಬೇಕು ಎಂದು ತಿಳಿಸಿದರು. ಆಜಾದಿ ಕಾ ಅಮೃತ ಮಹೋತ್ಸವದ ಸವಿನೆನಪಿಗಾಗಿ ಸ್ವಾತಂತ್ರ್ಯ ಹೋರಾಟದ ಆರಂಭದಿಂದ ಕೊನೆಯವರೆಗೂ ಹೋರಾಡಿ ನೆತ್ತರು ಹರಿಸಿದ ಹುತಾತ್ಮರ ಬದುಕು ನಮಗೆ ಆದರ್ಶವಾಗಬೇಕು ಅಂತಹ ಆದರ್ಶಗಳನ್ನು ಮೈಗೂಡಿಸಿಕೊಂಡು ಅರಿವು ಯುವ ಕೇಂದ್ರ ಮುನ್ನಡೆಯಲಿ ಎಂದು ಶುಭಕೋರಿದರು.

ಉಪನ್ಯಾಸಕರಾಗಿ ಆಗಮಿಸಿದ್ದ ರವೀಂದ್ರ ಬೆಣ್ಣೂರ ಅವರು ಮಾತನಾಡಿ, ಯುವಕರು ಮಾನಸಿಕ ಸ್ವಾಸ್ಥ್ಯ ಕಾಪಡಿಕೊಳ್ಳಬೇಕು. ಮೋಬೈಲ ಮಾನವೀಯ ಸಂಬಂಧಗಳನ್ನು ತೊರೆಯುತ್ತಿವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉದಯಕುಮಾರ ಸಂ ಆಲೂರ ಹಾಗೂ ಜಿ. ಬಿ. ಆಲೂರ , ಜಿ. ಎಮ್. ಹಳ್ಳೂರ ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಂದ್ರಕಾಂತ ಅರಳಗುಂಡಗಿ ಅವರು ವಹಿಸಿದ್ದರು. ಪ್ರಾಚಾರ್ಯರಾದ ಎ. ಎಮ್. ಯಡ್ರಾಮಿ ಹಾಗೂ ಎಸ್ ಪಿ ಆಲೂರ ಪ್ರೌಢಶಾಲೆ ಮುಖ್ಯಗುರುಗಳಾದ ಜಿ. ಎಸ್. ಕೂಡಗಿ, ಪ್ರಭು ಅರಳಿಚಂಡಿ, ಅರಿವು ಯುವ ಕೇಂದ್ರದ ಸಂಘಟಕರಾದ ಈಶ್ವರ ಹಳ್ಳಿ. ಅರಿವು ಯುವ ಕೇಂದ್ರದ ಸಂಸ್ಥಾಪಕ ನಿರ್ದೇಶಕರಾದ ಬಸವರಾಜ ಹಡಪದ,ಯುವ ಕೆಂದ್ರದ ಅಧ್ಯಕ್ಷರಾದ ಸಂಗಮೇಶ ಬಾಗೇವಾಡಿ ಉಪಾಧ್ಯಕ್ಷರಾದ ದಾನೇಶ ಬಡಿಗೇರ ಹಾಗೂ ಸಂಗಮೇಶ್ವರ ಕಲಾ ಮತ್ತು ವಿಜ್ಞಾನ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಸಿಬ್ಬಂದಿ ಹಾಗೂ ಅರಿವು ಯುವ ಕೇಂದ್ರದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮುಖ್ಯ ಗುರುಗಳಾದ ಜಿ. ಎಸ್ ಕೂಡಗಿ ಸ್ವಾಗತಿಸಿದರು. ಮಾಳಿಂಗರಾಯ ಕಡ್ಲಿಮಟ್ಟಿ ನಿರೂಪಿಸಿದರು ಎಸ್ ಎಸ್ ಬೆಲ್ಲುಟಗಿ ವಂದಿಸಿದರು.

Latest News

ವಿದ್ಯಾರ್ಥಿಗಳು ಮೌಲ್ಯಯುತ ಬದುಕಿಗೆ ಆದ್ಯತೆ ನೀಡಬೇಕು – ಸಂತೋಷ ಬಂಡೆ

ಸಿಂದಗಿ: ಇಂದಿನ ಯುವ ವಿದ್ಯಾರ್ಥಿಗಳು ಪರಿಶ್ರಮ, ಶಿಸ್ತು, ಸಮಯ ಪಾಲನೆ ಹಾಗೂ ನಿರಂತರ ಜ್ಞಾನರ್ಜನೆಯೊಂದಿಗೆ ಮೌಲ್ಯಯುತ ಬದುಕಿಗೆ ಮೊದಲ ಆದ್ಯತೆ ನೀಡಿ ಸದೃಢ ಸಮಾಜ ನಿರ್ಮಾಣ...

More Articles Like This

error: Content is protected !!
Join WhatsApp Group