spot_img
spot_img

ರೈತರು ಕಾರ್ಖಾನೆ ನಡುವೆ ಉತ್ತಮ ಬಾಂಧವ್ಯವಿರಲಿ

Must Read

- Advertisement -

ಸಿಂದಗಿ: ಕಾರ್ಖಾನೆ ಮತ್ತು ರೈತರ ಮಧ್ಯೆ ಉತ್ತಮ ಬಾಂಧವ್ಯ ವಿದ್ದರೆ ಮಾತ್ರ ಕಾರ್ಖಾನೆಗಳು ಅಭಿವೃದ್ದಿ ಹೊಂದುತ್ತವೆ ಎಂದು ಆಲಮೇಲ ಕೆಪಿಆರ್ ಶುಗರ್ಸ ಪಿಆರ್‍ಓ ಪಾರ್ಥಿಬನ್ ಹೇಳಿದರು.

ತಾಲೂಕಿನ ದೇವಣಗಾಂವ ಗ್ರಾಮದಲ್ಲಿ ಇಲ್ಲಿನ ಕೆಪಿಆರ್ ಪ್ರಾದೇಶಿಕ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಬುಕ್ಲೆಟ್ ಪೂಜಾ ಹಾಗೂ ರೈತರ ಸಭೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ನಮ್ಮ ಕಾರ್ಖಾನೆಗೆ ಕಳೆದ ಹಂಗಾಮಿನಲ್ಲಿ ಕಬ್ಬು ಕಳುಹಿಸಿದ ಪ್ರತಿಯೊಬ್ಬ ರೈತರ ಬಿಲ್ ಪಾವತಿ ಮಾಡಲಾಗಿದೆ. ಮುಂದಿನ ಹಂಗಾಮಿಗೆ ಟ್ರ್ಯಾಕ್ಟರ್ ಮಾಲೀಕರ ಕಾರ್ಖಾನೆಯ ಮದ್ಯದ ಒಪ್ಪಂದಗಳ ಬುಕ್ಲೇಟ್ ಪೂಜೆಯನ್ನು ನೆರವೇರಿಸಿದ್ದು ಅವರೊಂದಿಗೂ ಕೂಡಾ ಉತ್ತಮ ಬಾಂಧವ್ಯವನ್ನು ಹೊಂದಿ ರೈತರಿಗೆ ಉಪಯೋಗವಾಗುವಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ, ಮುಂದಿನ ಹಂಗಾಮಿಗೆ ಕಬ್ಬು ಕಳುಹಿಸಬೇಕಿರುವ ರೈತರ ಸರ್ವೇಕಾರ್ಯ ನಡೆದಿದ್ದು ಈಗಲೇ ನಮ್ಮ ಕಛೇರಿಯ ಸಿಬ್ಬಂದಿಗೆ ರೈತರು ತಮ್ಮ ದಾಖಲೆಗಳನ್ನು ನೀಡಿ ತಮ್ಮ ಕಬ್ಬಿನ ಮಾಹಿತಿ ಒದಗಿಸಿ, ನೊಂದಣಿ ಮಾಡಿಸಬೇಕು ಅಂದಾಗ ಕಬ್ಬು ನುರಿಸುವಿಕೆ ತೊಂದರೆ ಇಲ್ಲದೇ ಸಾಗುವದು ಎಂದರು.

- Advertisement -

ಈ ಸಂದರ್ಭದಲ್ಲಿ ವೇ.ಶ್ರೀಶೈಲ ಮಠಪತಿ, ಕಾಶಿನಾಥ ಪೂಜಾರಿ, ನಿಂಗಪ್ಪ ಅಳ್ಳಗಿ, ಶರಣು ಗಂಗನಳ್ಳಿ, ಅಶೋಕ ಗಂಗನಳ್ಳಿ, ಅನಂತರಾವ್ ಸೂರ್ಯವಂರ್ಶಿ, ಅಶೋಕ ಕಣಮೇಶ್ವರ, ಜಗನ್ನಾಥ ಗಂಗನಳ್ಳಿ, ಇಸಾಕಲಿ ನಾಗಾವಿ, ಮುನೀರ ಮುಜಾವರ, ಸಿದ್ದು ಹೀರಾಪೂರ,  ಸಚಿನ ಯಾತನೂರ, ಅನೀಲ ಎಲಜಿ, ಮುತ್ತು ಹೂಗಾರ, ಯಲ್ಲಪ್ಪ ತೆಲ್ಲೂರ, ನಾಗಪ್ಪ ಹರಗೋಲ, ಜಗದೀಶ ಜೋಗೂರ, ದಯಾನಂದ ಹೂಗಾರ, ಶಿವಾನಂದ ಭತ್ತಗೌಡರ, ದತ್ತಾತ್ರೇಯ ಸೊನ್ನ ಇದ್ದರು.

- Advertisement -
- Advertisement -

Latest News

ಮನುಷ್ಯನಿಗೆ ಹಣ, ಆಸ್ತಿ ಬೇಕಾಗಿಲ್ಲ, ಬದುಕುವ ಛಲ ಇರಬೇಕು – ಬಸವರಾಜ ಮಡಿವಾಳ

ಮೂಡಲಗಿ: ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಮಡಿವಾಳ ಸಮಾಜ ಬಾಂಧವರಿಂದ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ...
- Advertisement -

More Articles Like This

- Advertisement -
close
error: Content is protected !!
Join WhatsApp Group