spot_img
spot_img

ಏಕತೆಯೇ ನಮ್ಮೆಲ್ಲರ ಒಗ್ಗಟ್ಟಿನ ಮಂತ್ರವಾಗಿರಲಿ –  ಪ್ರೊ. ಎಸ್.ಡಿ. ಗಾಣಿಗೇರ

Must Read

- Advertisement -

“ವಿವಿಧತೆಯಲ್ಲಿ ಏಕತೆ ಸಾರುವ ಬೃಹತ್ ದೇಶವಾಗಿರುವ ನಮ್ಮ ನಾಡನ್ನು ಬ್ರಿಟೀಷರ ಒಡೆದಾಳುವ ನೀತಿಯಿಂದಾಗಿ ಹರಿದು ಹಂಚಿ ಹೋಗಿತ್ತು. ಅಂತಹ ದೇಶೀಯ ಸಂಸ್ಥಾನಗಳನ್ನು ಒಂದುಗೂಡಿಸಿ ಅಖಂಡ ಭಾರತವನ್ನಾಗಿ ನಿರ್ಮಾಣ ಮಾಡಿದ ಕೀರ್ತಿ ಸರ್ದಾರ್ ವಲ್ಲಭಬಾಯಿ ಪಟೇಲ್ ರವರಿಗೆ ಸಲ್ಲುತ್ತದೆ.

ಅಂತಹವರ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸುತ್ತಿರುವುದು ಶ್ಲಾಘನೀಯ ಅವರ ಆದರ್ಶಗಳನ್ನು ನಾವೆಲ್ಲ ಅಳವಡಿಸಿಕೊಳ್ಳಬೇಕು ಏಕತೆಯೇ ನಮ್ಮೆಲ್ಲರ ಒಗ್ಗಟ್ಟಿನ ಮಂತ್ರವಾಗಿರಲಿ” ಎಂದು ಪ್ರೊ. ಎಸ್.ಡಿ. ಗಾಣಿಗೇರ ಪ್ರಾಚಾರ್ಯರು ಕರೆ ನೀಡಿದರು.

ಅವರು ಸ್ಥಳೀಯ ಶ್ರೀಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪದವಿ ಕಾಲೇಜಿನಲ್ಲಿ ಎನ್. ಎಸ್.ಎಸ್. ಘಟಕ ಹಾಗೂ ಐ.ಕ್ಯೂ.ಎ.ಸಿ. ಅಡಿಯಲ್ಲಿ ಹಮ್ಮಿಕೊಂಡ ಸರ್ದಾರ್ ವಲ್ಲಭಬಾಯಿ ಪಟೇಲ್‍ರ ಜನ್ಮ ದಿನದ ಪ್ರಯುಕ್ತ ಹಮ್ಮಿಕೊಂಡ ರಾಷ್ಟ್ರೀಯ ಏಕತಾ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ,“ಭಾರತದಲ್ಲಿ ಹಲವು ಭಾಷೆಗಳನ್ನಾಡುವ ಹಲವು ಸಂಸ್ಕೃತಿಗಳನ್ನು ಆಚರಿಸುವ ವೈವಿಧ್ಯತೆಯಿದೆ. ಇಂತಹ ವೈವಿಧ್ಯತೆಯ ನಮ್ಮ ದೇಶದಲ್ಲಿ ಒಗ್ಗಟ್ಟಿನಿಂದ ಬಾಳುತ್ತಿರುವ ನಮಗೆ ಅದರ ಪಾಠ ಕಲಿಸಿದವರು ನಮ್ಮ ಹೆಮ್ಮೆಯ ಪಟೇಲ್ ರು. ಭಾರತದ ಮೊದಲ ಉಪಪ್ರಧಾನಿಯಾಗಿ ಗೃಹಮಂತ್ರಿಗಳಾಗಿ ಕಾರ್ಯನಿರ್ವಹಿಸಿದ ಅವರ ಸೇವೆಯನ್ನು ನಾವೆಲ್ಲಾ ಸ್ಮರಿಸೋಣ” ಎಂದು ತಿಳಿಸಿದರು.

- Advertisement -

ಕಾರ್ಯಕ್ರಮದಲ್ಲಿ ಎನ್. ಎಸ್.ಎಸ್. ಘಟಕದ ಸಂಯೋಜಕರಾದ ಸಂಜೀವ ಮದರಖಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ  ಆಯ್.ಕ್ಯೂ.ಎ.ಸಿ. ಸಂಯೋಜಕರಾದ ಶ್ರೀಮತಿ ಅಶ್ವಿನಿ ಎಸ್. ಎನ್.ಎಸ್.ಎಸ್ ಸಂಯೋಜಕರುಗಳಾದ  ಸಂಜೀವ ಮದರಖಂಡಿ,  ರಾಜೇಂದ್ರಪ್ರಸಾಧ ಆಸಂಗಿ,  ಬಸಪ್ಪ ಹೆಬ್ಬಾಳ ,  ಶಿವಕುಮಾರ.  ಎನ್.ಎಸ್.ಎಸ್. ಘಟಕದ ಸ್ವಯಂ ಸೇವಕರು,  ಹಾಗೂ  ಪ್ರಾಧ್ಯಾಪಕರುಗಳು ಭಾಗವಹಿಸಿದ್ದರು. ಸುರೇಶ ಅಂಗಡಿ ಸ್ವಾಗತಿಸಿದರು. ವಿಠ್ಠಲ ಬೆಳಗಲಿ ವಂದಿಸಿದರು. ಅರ್ಪಿತಾ ಮಳವಾಡ ನಿರೂಪಿಸಿದರು.

- Advertisement -
- Advertisement -

Latest News

ಕನ್ನಡಕ್ಕಾಗಿ ಇನ್ನೂ ಹೋರಾಡಬೇಕಾಗಿರುವುದು ವಿಷಾದನೀಯ – ಚಂದ್ರಶೇಖರ ಅಕ್ಕಿ

ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಸಂದರ್ಶನ ಮೂಡಲಗಿ - ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನವು ಇದೇ ದಿ. ೨೩ , ೨೪...
- Advertisement -

More Articles Like This

- Advertisement -
close
error: Content is protected !!
Join WhatsApp Group