ಪರರನ್ನು ಪ್ರೀತಿಸೋಣ ನಮ್ಮವರನ್ನು ಬಿಟ್ಟು ಹೋಗದಿರೋಣ

Must Read

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75ನೇ ವರ್ಷ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಾದವರು ನಮ್ಮಲ್ಲಿ ಎಷ್ಟು ಭಾರತೀಯತೆ ಇದೆ ಎಂದು ಕೇಳಿಕೊಳ್ಳಲು ಸ್ವಾತಂತ್ರ್ಯ ಬೇಕಿದೆ. ಯಾವ ದೇಶದ ಶಿಕ್ಷಣವೇ ವಿದೇಶದ ವಶವಾಗುತ್ತಿದ್ದರೆ ಅದನ್ನು ಸ್ವೇಚ್ಚಾಚಾರ ಎನ್ನುತ್ತಾರೆ.

ನಮ್ಮ ಜ್ಞಾನಕ್ಕೆ ನಾವೇ ವಿರೋಧಿಸುವುದರಿಂದ ಯಾರಿಗೆ ಲಾಭ ನಷ್ಟ?  ಸ್ವಾತಂತ್ರ್ಯ ಹೋರಾಟದಲ್ಲಿ ಆತ್ಮರಕ್ಷಣೆಗಾಗಿ ಜೀವಕೊಟ್ಟು ಅಮರರಾದವರ ಜ್ಞಾನಶಕ್ತಿಯನ್ನು ಅರ್ಥ ಮಾಡಿಕೊಳ್ಳಲು ಮಕ್ಕಳಿಗೆ ಅವರ ಉದ್ದೇಶದ ಹಿಂದಿದ್ದ ಜ್ಞಾನವನ್ನು ಶಿಕ್ಷಣದ ಮೂಲಕ ತಿಳಿಸಬೇಕಾದ ಅನಿವಾರ್ಯತೆ ಇಂದಿಗೂ ಇದೆ.

ಸಂತೋಷವನ್ನು ಭೌತಿಕದಲ್ಲಿ ಕಂಡುಕೊಳ್ಳಲು ವಿಜ್ಞಾನಜಗತ್ತು ಸಹಕರಿಸಿದೆ. ಆದರೆ ಆಂತರಿಕ ಶಕ್ತಿಯನ್ನು ಕಳೆದುಕೊಂಡು ಕೊನೆಯಲ್ಲಿ ರೋಗದಲ್ಲಿ ಜೀವನ ನಡೆಸಿದರೆ ಸಂತೋಷ ತಾತ್ಕಾಲಿಕವಾಗೇ ಇರುತ್ತದೆ. ಮಹಾತ್ಮರೆಂದರೆ ಆತ್ಮಾನುಸಾರ ನಡೆದು ದೇಹ ಹಾಗು ದೇಶದ ನಡುವಿರುವ ಅಂತರ ಕಡಿಮೆಮಾಡಿ ಒಂದಾಗಿಸೋ ಯೋಗಿಗಳು.

ಈಗ ದೇಶ ವಿದೇಶದ ಜೋಡಣೆಯಿಂದ ಮೂಲ ಶಕ್ತಿ ಹಿಂದುಳಿದರೂ ಪರವಾಗಿಲ್ಲ.ನಾನೇ ಬೇರೆ ದೇಶವೇ ಬೇರೆ ಎನ್ನುವ ವಿಜ್ಞಾನ ಬೆಳೆದಿದೆ. ಹಾಗಾದರೆ ನಾವು ಎಡವಿದ್ದೆಲ್ಲಿ? ಎಲ್ಲಿ ಸರಿಪಡಿಸಬೇಕು? ಶಿಕ್ಷಣವನ್ನು ಸರಿಪಡಿಸಿದರೆ ಅವರವರ ದೇಶದಲ್ಲಿ ಅವರವರ ಜ್ಞಾನಕ್ಕೆ ಬೆಲೆಯಿರುತ್ತದೆ. ಪರರನ್ನು ಪ್ರೀತಿಸೋಣ ನಮ್ಮವರನ್ನು ಬಿಟ್ಟು ಹೋಗದಿರೋಣ.

ನಮ್ಮವರನ್ನೇ ದ್ವೇಷಮಾಡಿಕೊಂಡು ದ್ವೇಷದ ರಾಜಕೀಯ ನಡೆಸಿದ ಪರಿಣಾಮವೆ ಇಂದಿನ ಭಾರತದ ಈ ಸ್ಥಿತಿಗೆ ಕಾರಣ. ಆತ್ಮಜ್ಞಾನದಿಂದ ದೇಶಭಕ್ತಿ, ವಿಜ್ಞಾನದಿಂದ ಸಿಗುವುದೆ? ಸಾಮಾನ್ಯಜ್ಞಾನ ವನ್ನು ಸದ್ಬಳಕೆ ಮಾಡಿಕೊಂಡರೆ ಸಾಧ್ಯವಿದೆ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group