Homeಸುದ್ದಿಗಳುನ.12 ಕ್ಕೆ ರಾಜ್ಯೋತ್ಸವ ಅದ್ದೂರಿಯಾಗಿ ಆಚರಿಸೋಣ - ಸಿಂದಗಿ ಕಸಾಪ ಅಧ್ಯಕ್ಷರು

ನ.12 ಕ್ಕೆ ರಾಜ್ಯೋತ್ಸವ ಅದ್ದೂರಿಯಾಗಿ ಆಚರಿಸೋಣ – ಸಿಂದಗಿ ಕಸಾಪ ಅಧ್ಯಕ್ಷರು

ಸಿಂದಗಿ– ಕನ್ನಡ ರಾಜ್ಯೋತ್ಸವ ಪ್ರತಿ ಕನ್ನಡಿಗನ ಹಾಗೂ ಕರುನಾಡಿನ ಹೆಮ್ಮೆಯ ದಿನ. ಆ ದಿನದ ಕಾರ್ಯಕ್ರಮವನ್ನು ಶ್ರದ್ದಾ ಭಕ್ತಿಯಿಂದ ನಾವೆಲ್ಲರೂ ಆಚರಿಸಬೇಕೆನ್ನುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಪಟ್ಟಣದಲ್ಲಿ ನವಂಬರ 12 ರಂದು ಶನಿವಾರ ಬಸವಮಂಟಪದಲ್ಲಿ ಸಾಯಂಕಾಲ 4 ಗಂಟೆಗೆ ಅರ್ಥ ಪೂರ್ಣವಾದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಜಶೇಖರ ಕೂಚಬಾಳ ಹೇಳಿದರು.

ಅವರು ಪಟ್ಟಣದ ರಾಜಗಂಜನಿ ಸಂಗೀತ ಕೇಂದ್ರದಲ್ಲಿ ರವಿವಾರ ಆಯೋಜಿಸಿದ ಮುಂಬರುವ ಕನ್ನಡ ರಾಜ್ಯೋತ್ಸವ ಆಚರಣೆಯ ಪೂರ್ವಬಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಕನ್ನಡ ಸಂಸ್ಕೃತಿ, ಪರಂಪರೆಗೆ ಹೆಚ್ಚಿನ ಸ್ಥಾನಮಾನಗಳು ಇದ್ದರು ಅವೆಲ್ಲ ಇಂದು ಜಾಗತಿಕ ವಿದ್ಯಮಾನಗಳ ಮಧ್ಯ ಸಿಲುಕಿ ಸೊರಗುತ್ತಿದೆ ಅದನ್ನು ಬಡಿದೆಬ್ಬಿಸುವ ಕಾರ್ಯ ಪ್ರತಿ ಕನ್ನಡಿಗನದಾಗಿರಬೇಕು ಎನ್ನುವಂತೆ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಸಾಹಿತಿಗಳು, ಜನಪದ ಸಾಹಿತಿಗಳು, ರೈತರು ಹಾಗೂ ಜನಪ್ರತಿನಿಧಿಗಳು ಆಗಮಿಸಲಿದ್ದಾರೆ.

ಕಾರ್ಯಕ್ರಮದ ಮುಂಚಿತವಾಗಿ ಸಿಂದಗಿ ತಾಲೂಕಿಗೆ ಸಂಬಂಧಿಸಿದಂತೆ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಶುದ್ದ ಓದು-ಶುದ್ದ ಬರಹ, ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಕಲಾ ಸ್ಪರ್ಧೆ, ಕನ್ನಡ ಭಾಷೆ, ಸಾಹಿತ್ಯಕ್ಕೆ ಸಂಬಂಧಿಸಿದ ರಸಪ್ರಶ್ನೆ ಸ್ಪರ್ಧೆ, ಕಥಾ ಸ್ಪರ್ಧೆ ಚಟುವಟಿಕೆಗಳನ್ನು ನಡೆಸಿ ನಗದು ಬಹುಮಾನ, ಪ್ರಶಸ್ತಿ ಪತ್ರಗಳನ್ನು ವಿತರಿಸಲಾಗುವುದು. ತಾಲೂಕಿನಲ್ಲಿನ ಕನ್ನಡ ಸಂಸ್ಕೃತಿ ಹೆಚ್ಚು ಬಳಕೆಯಲ್ಲಿರುವ ಒಂದು ಸರಕಾರಿ ಕನ್ನಡ ಶಾಲೆಯನ್ನು ಆಯ್ಕೆ ಮಾಡಿ ಉತ್ತಮ ಕನ್ನಡ ಶಾಲೆ ಎಂದು ರೂ 11 ಸಾವಿರ ಬಹುಮಾನವನ್ನು ನೀಡುವ ಕಾರ್ಯ,  ಕನ್ನಡ ವಿಷಯದಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ದ್ವಿತಿಯ ಪರೀಕ್ಷೆಯಲ್ಲಿ 100 ಕ್ಕೆ 100 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ, ಕೃಷಿ ಜೊತೆಗೆ ಕನ್ನಡ ಸಂಸ್ಕೃತಿಯನ್ನು ಪಸರಿಸುವ ರೈತರಿಗೆ, ನಿವೃತ್ತ ಯೋಧರಿಗೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.  ಕಾರ್ಯಕ್ರಮದ ನಂತರ ಪಟ್ಟಣದ ರಾಜರಂಜನಿ ಸಂಗೀತ ಕೇಂದ್ರದ ಕಲಾ ತಂಡದವರಿಂದ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ತಾಲೂಕಿನ ಎಲ್ಲ ಕನ್ನಡ ಮನಸ್ಸುಗಳು ಮತ್ತು ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದರು.

ವೇದಿಕೆ ಮೇಲೆ ಕಸಾಪ ಗೌರವ ಕಾರ್ಯದರ್ಶಿ ಮಹಾಂತೇಶ ಪಟ್ಟಣಶೆಟ್ಟಿ, ರಮೇಶ ಪೂಜಾರಿ, ಶಾರದಾ ಮಂಗಳೂರ, ಶಿವುಕುಮಾರ ಕಲ್ಲೂರ ಹಾಗೂ ಇತರರು ಇದ್ದರು.

ಕಾರ್ಯಕ್ರಮದಲ್ಲಿ ಕಸಾಪದ ತಮ್ಮಣ್ಣ ಈಳಗೇರ, ದುಂಡಪ್ಪ ಸೊನ್ನದ, ಖಾದರ ವಾಲಿಕಾರ, ಪಂಡಿತ ಯಂಪೂರೆ, ಸಾಯಬಣ್ಣ ಪುರದಾಳ, ಭೀಮಣ್ಣ ಹೆರೂರ, ಶಾಂತು ರಾಣಾಗೋಳ, ಶಿವು ಬಡಾನೂರ, ಅಂಬಣ್ಣ ಹೂಗಾರ, ಡಾ ಪ್ರಕಾಶ ರಾಗರಂಜನಿ ಸೇರಿದಂತೆ ಇತರರು ಇದ್ದರು. ಕಾರ್ಯಕ್ರಮವನ್ನು ಉಪನ್ಯಾಸಕ ಸಿದ್ದಲಿಂಗ ಕಿಣಗಿ ನಿರೂಪಿಸಿ ವಂದಿಸಿದರು.

RELATED ARTICLES

Most Popular

close
error: Content is protected !!
Join WhatsApp Group