ನಮ್ಮ ಕನಸುಗಳನ್ನು ಸಾಕಾರಗೊಳಿಸೋಣ

Must Read

ಹೊಸ ವರುಷವು ಎಲ್ಲರಿಗೂ ಸಂಭ್ರಮೋಲ್ಲಾಸ ತರಲಿ- ಶಾಸಕ ಬಾಲಚಂದ್ರ ಜಾರಕಿಹೊಳಿ ಶುಭಾಶಯ

ಗೋಕಾಕ– ಅರಭಾವಿ ಶಾಸಕ ಹಾಗೂ ಕೆಎಂಎಫ್ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಅವರು ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ.

ಹೊಸ ಚೈತನ್ಯದೊಂದಿಗೆ 2024 ರ ಹೊಸ ವರ್ಷವನ್ನು ಸಡಗರದಿಂದ ಬರಮಾಡಿಕೊಳ್ಳೋಣ. ಕಳೆದಿರುವ ಕೆಲವು ಕಹಿ ಘಟನೆಗಳನ್ನು ಮರೆತು ಪರಸ್ಪರ ಪ್ರೀತಿ, ವಿಶ್ವಾಸದೊಂದಿಗೆ ಪ್ರತಿಯೊಂದರಲ್ಲಿಯೂ ಸಾಮರಸ್ಯವನ್ನು ಮೂಡಿಸುವ ಕೆಲಸ ಮಾಡೋಣ. ಬರಗಾಲಕ್ಕೆ ತತ್ತರಿಸಿರುವ ನೇಗಿಲಯೋಗಿಯ ಬಾಳು ಈ ಬಾರಿಯಾದರೂ ಬಂಗಾರವಾಗಲಿ. ಹೊಸ ವರುಷ ಎಲ್ಲರಿಗೂ ಹರುಷ ತರಲಿ ಎಂದು ಅವರು ಆಶಿಸಿದ್ದಾರೆ.

ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಹೇಳಿದಂತೆ, ನಿದ್ರೆ ಮಾಡುತ್ತ ಕಾಣುವುದು ಕನಸಲ್ಲ. ಕನಸು ಕಂಡ ಮೇಲೆ ನಿದ್ರೆ ಮಾಡಿದಂತಾಗುವುದು ನಿಜವಾದ ಕನಸು. ನಮಗೂ ಸಹ ಅಂತಹ ಕನಸುಗಳಿದ್ದರೆ ಅವುಗಳನ್ನು ನನಸು ಮಾಡಿಕೊಳ್ಳವುದರ ಬಗ್ಗೆ ನಾವುಗಳು ಚಿತ್ತ ಹರಿಸಿ ನವ ವರುಷವನ್ನು ನವೋಲ್ಲಾಸದಿಂದ ಸಂಭ್ರಮಿಸೋಣ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group